ಅಂಬಿ ಮಾಮನ ದೂರ ಕಳ್ಸೋದು ಬೇಡ : ಶಿವರಾಜ್ ಕುಮಾರ್

ಅಂಬರೀಶ್ ಮಾಮನ ಬಗ್ಗೆ ಏನು ಹೇಳಿದರು ಕಡಿಮೆನೆ , ದೇವರಮಗ ಸಿನಿಮಾದಲ್ಲಿ ನಾನು ಅಂಬರೀಶ್ ಜೊತೆ ನಟಿಸಿದ್ದೇ ಖುಷಿ ಎಂದು ಹಿರಿಯ ನಟ ಡಾ.ಶಿವರಾಜ್ ಕುಮಾರ್ ಹೇಳಿದ್ದಾರೆ.

ಮಂಡ್ಯ ಜನ ಅವರನ್ನು ತುಂಬಾ ಇಷ್ಟ ಪಡ್ತಾರೆ

ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಅಂಬರೀಶ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ಮಂಡ್ಯ ಜನ ಅವರನ್ನು ತುಂಬಾ ಇಷ್ಟ ಪಡ್ತಾರೆ ನಾವು ಇಷ್ಟ ಪಡಲ್ವಾ ಅವರನ್ನು ದೂರ ಕಳ್ಸೋದು ಬೇಡ ನಾವು ಮನಸ್ಸಿನಲ್ಲಿಟ್ಟು ಕೊಳ್ಳೋಣ ಎಂದು ಶಿವರಾಜ್ ಕುಮಾರ್ ಹೇಳಿದರು.

ಅಂಬರೀಶ್ ಅವರ ಆಶೀರ್ವಾದ ಸಿನಿಮಾ, ರಾಜಕೀಯ ಎಲ್ಲರಿಗೂ ಬೇಕು ಅವರನ್ನು ನಾವು ಕಳೆದುಕೊಂಡಿಲ್ಲಾ ಅವರ ಆಶೀರ್ವಾದ ಎಲ್ಲಾರ ಮೇಲೆ ಇದೆ ಎಂದು ಶಿವರಾಜ್ ಕುಮಾರ್ ಮಾತನಾಡಿದರು.