ಅಂಬರೀಶ್ ನುಡಿನಮನ ಕಾರ್ಯಕ್ರಮದಲ್ಲಿ ಜಗ್ಗೇಶ್ ಹೇಳಿದ್ದೇನು..?

ಅಂಬರೀಶ್ ಕಳೆದ ಜನ್ಮದಲ್ಲೂ ಕಲಾವಿದ, ರಾಜನಂತೆ ಇದ್ರೇನೋ ಈ ಜನ್ಮದಲ್ಲೂ ಅವರು ಹಾಗೆ ಇದ್ದರೆ ಅಂಬರೀಶ್ ಸಾಧನೆ ಮಾಡಿದ ವಿಚಾರಧಾರೆಗಳು ನಿಜಕ್ಕೂ ಅದ್ಭುತ ಎಂದು ಹಿರಿಯ ನಟ ಜಗೇಶ್ ಹೇಳಿದ್ದಾರೆ.

ಡಾ.ರಾಜ್, ಡಾ.ವಿಷ್ಣು, ಡಾ.ಅಂಬರೀಶ್ ಮೂರು ಪಿಲ್ಲರ್ ಗಳಿದ್ದಂತೆ

ಮಂಡ್ಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ವೇದಿಕೆ ನಮಗೆ ಸಿಗಬಾರದಿತ್ತು. ಈ ವೇದಿಕೆಯಲ್ಲಿ ನಾವು ಮಾತನಾಡುವ ಸಂದರ್ಭ ಬರಬಾರದಿತ್ತು,ಕನ್ನಡ ಚಿತ್ರರಂಗಕ್ಕೆ ಡಾ.ರಾಜ್, ಡಾ.ವಿಷ್ಣು, ಡಾ.ಅಂಬರೀಶ್ ಮೂರು ಪಿಲ್ಲರ್ ಗಳಿದ್ದಂತೆ ಎಂದು ಭಾವುಕರಾದರು .ಅಂಬರೀಶ್ ಅವರದ್ದು ಯಾರು ಊಹೆ ಮಾಡಿಕೊಳ್ಳದ ಮನೆತನ. ಅಂಬರೀಶ್ ಗೆ ಜಲೀಲ ಎಂದು ಮುದ್ರೆ ಒತ್ತಿದಂತೆ ಎಂದು ನಟ ಜಗೇಶ್ ಹೇಳಿದರು.

ನನ್ನನ್ನು ಬೆಳೆಸಿದವರು ಅಂಬರೀಶ್

ಅಂಬರೀಶ್ ಆತ್ಮ ಅಭಿಷೇಕ್ ಪುತ್ರನ ಮೂಲಕ ವಾಪಸ್ ಬಂದೇ ಬರುತ್ತೆ. ಅಂಬರೀಶ್ ಗೆ ಅನ್ನ ಹಾಕುವ, ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ, ಸಹಾಯ ಮಾಡುವ ಗುಣವಿತ್ತು.ನಾನು ಹೀರೋ ಆಗುವಾಗ ನನಗೆ ತುಂಬಾ ಸಹಾಯ ಮಾಡಿ. ನನ್ನನ್ನು ಬೆಳೆಸಿದವರು ಅಂಬರೀಶ್. ಅಂಬರೀಶ್ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಎಂಟ್ರಿ ಹಾಕ್ತಿದ್ದಾರೆ. ಅವರಿಗೆ ನಿಮ್ಮ ಆಶೀರ್ವಾದ ಇರಲಿ ಎಂದು ಜಗ್ಗೇಶ್ ಮಾತನಾಡಿದರು.