ಅಂಬಿ ಮೇಲಿದ್ದ ಪ್ರೀತಿ ಅಭಿಷೇಕ್ ಮೇಲೂ ಇರಲಿ : ಕೈ ಮುಗಿದ ಸುಮಲತಾ

ಮಾತಿಗೂ ಮುನ್ನ ಭಾವುಕರಾದ ಸುಮಲತಾ, 40 ವರ್ಷದ ಸಿನಿಮಾ ರಂಗ 20 ವರ್ಷದ ರಾಜಕೀಯ ರಂಗದಲ್ಲಿ ಅಂಬಿ ಯಶಸ್ಸು ಸಾಧಿಸಲು ಜನ ಕಾರಣ ಎಂದು ಅಂಬರೀಶ್ ಪತ್ನಿ, ನಟಿ ಸುಮಲತಾ ಹೇಳಿದ್ದಾರೆ.

ಆತ್ಮಹತ್ಯೆ ಮೂಲಕ ಅಭಿಮಾನ ತೋರುವ ಅವಶ್ಯಕತೆ ಇಲ್ಲ

ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬಿ ಮೃತಪಟ್ಟ ದಿನ 30 ಮಂದಿ ಕನಗನಮರಡಿ ಯಲ್ಲಿ ಸತ್ತಿದ್ದು, ಜೊತೆಗೆ ಇಬ್ಬರು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಬೇಸರದ ಸಂಗತಿ, ಮುಂದೆ ಯಾರೂ ಸಹ ಹೀಗೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಆತ್ಮಹತ್ಯೆ ಮೂಲಕ ಅಭಿಮಾನ ತೋರುವ ಅವಶ್ಯಕತೆ ಇಲ್ಲ ಎಂದರು.

ಮದುವೆಯಾದ ಸಂದರ್ಭದಲ್ಲಿ ಅಂಬಿ ಹಲವು ಬಾರಿ ಮಂಡ್ಯಕ್ಕೆ ಕರೆತಂದಿದರು. ಮಂಡ್ಯ ಜನ ಅಂಬಿಯನ್ನು ರಿಸೀವ್ ಮಾಡಿಕೊಳ್ತಿದ್ದ ರೀತಿ ನನಗೆ ತುಂಬಾ ಖುಷಿ ತರ್ತಿತ್ತು, ಮಂಡ್ಯಕ್ಕೆ ಬಂದಾಗಲೆಲ್ಲಾ ಸ್ಥಳೀಯ ಬೇಕರಿಯ ಹನಿಕೇಕ್ ತಿನ್ನುತ್ತಿದರು. ನನಗೂ ತನಿಸ್ತಿದರು. ಆ ಕೇಕ್ ತಿನ್ನಲು ಆಗಾಗ ತರ್ಸಿಕೊಳ್ತಿದ್ದೆ.ಆ ಕೇಕ್ ನಷ್ಟು ಸಿಹಿ ಮಂಡ್ಯ ಜನರ ಪ್ರೀತಿ ಎಂದರು.

ರಾಜ್ಯದಲ್ಲಿ ಮಂತ್ರಿಯಾಗಲು ಮಂಡ್ಯ ಜನ ಕಾರಣ

ಅಂಬಿ ಅವ್ರ 50ನೇ ವರ್ಷದ ಹುಟ್ಟುಹಬ್ಬವನ್ನು ಇದೇ ಕ್ರೀಡಾಂಗಣದಲ್ಲಿ ಆಚರಿಸಿದ್ವು. ಅವತ್ತು ಭಾರೀ ಮಳೆ ಇದ್ರು ಜನ ಅಂಬರೀಶ್ ಗೋಸ್ಕರ ಕಾರ್ಯಕ್ರಮ ದಲ್ಲಿ ಭಾಗಿ ಆಗಿದರು. ಮಂಡ್ಯದಿಂದ ಅಂಬಿ ಸಂಸದ, ಶಾಸಕ, ಕೇಂದ್ರ ಮಂತ್ರಿ, ರಾಜ್ಯದಲ್ಲಿ ಮಂತ್ರಿಯಾಗಲು ಮಂಡ್ಯ ಜನ ಕಾರಣ ಅಂತ ಹಲವು ಬಾರಿ ಹೇಳಿದ್ದಾರೆ. ಅಂಬಿ 50ನೇ ಹುಟ್ಟುಹಬ್ಬ ಸಂದರ್ಭದಲ್ಲಿ ರಜನಿಕಾಂತ್ ಅಂಬಿ ಹಣ ಮಾಡಿಲ್ಲ. ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದಿದರು ಅದು ನಿಜ ಎಂದು ಸುಮಲತಾ ಹೇಳಿದರು.

ಅಂಬಿ ಮೇಲಿದ್ದ ಪ್ರೀತಿ ಸ್ವಲ್ಪ ಅಭಿಷೇಕ್ ಮೇಲೂ ಇರಲಿ

ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದಾಗ ಅಭಿಮಾನಿಗಳು ಅವರನ್ನು ಕಂಡ ರೀತಿ ನಿಜಕ್ಕೂ ಸಾರ್ಥಕ. ಅಭಿಮಾನಿಗಳು ಅಂಬಿ ಮೇಲಿಟ್ಟಿದ್ದ ಪ್ರೀತಿ ಕಂಡು ಕಣ್ಣೀರಿಟ್ಟ ಸುಮಲತಾ, ಇನ್ನೂ ಅಂಬಿ ಮೇಲಿದ್ದ ಪ್ರೀತಿ ಸ್ವಲ್ಪ ಅಭಿಷೇಕ್ ಮೇಲೂ ಇರಲಿ ಎಂದು ಕೈ ಮುಗಿದ ಸುಮಲತಾ ಭಾವುಕರಾದರು.