ಬಿಜೆಪಿಯವರು ಸೋಲಬೇಕು: ಸಿದ್ದರಾಮಯ್ಯ ಆಕ್ರೋಶ

ಬಿಜೆಪಿಯವರು ಸೋಲಬೇಕು, ಆ ನಿಟ್ಟಿನಲ್ಲಿ ನಾವು ಜೆಡಿಎಸ್​ ಕುಳಿತುಕೊಂಡು ಚರ್ಚಿಸಿ ಲೋಕಸಭೆ ಚುನಾವಣೆಯ ಬಗ್ಗೆ ತೀರ್ಮಾನ ಮಾಡ್ತಿವಿ, ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳಗಾವಿಯಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿ ನಂತರ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು,ರಮೇಶ್ ಜಾರಕಿಹೊಳಿ ನನಗೆ ಸಿಗ್ತಾಯಿಲ್ಲ.ರಮೇಶ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗಲ್ಲಾ, ರಮೇಶ್ ಗೆ ಪೋನ್ ಮಾಡಿದರೆ ಎತ್ತಾಯಿಲ್ಲ. ನಾನು ಅವರನ್ನು ಸಂಪರ್ಕಿಸಲು ಟ್ರಾಯ್ ಮಾಡ್ತಿದಿನಿ. ರಮೇಶ್ ಗೆ ನನ್ನ ಮೇಲೆ ಕೋಪವಿಲ್ಲ ಎಂದರು.

ರಮೇಶ್, ನಾಗೇಂದ್ರ ಯಾರು ಕೂಡಾ ಬಿಜೆಪಿಗೆ ಹೋಗಲ್ಲ, ಸುಮ್ಮನೆ ಬಿಜೆಪಿಯವರು ಸುದ್ದಿ ಮಾಡತಿದ್ದಾರೆ. ಎಂದು ಸಂಕ್ರಾಂತಿ ಕ್ರಾಂತಿ ಬಗ್ಗೆ ನಗುನಗುತ್ತಲೆ ಸಿದ್ದರಾಮಯ್ಯ ಉತ್ತರ ನೀಡಿದರು. ಬಿಜೆಪಿಯವರಿಗೆ ಏನ್ ಕಾಂತ್ರಿ ಬಗ್ಗೆ ಗೊತ್ತು. ಅವರು ಯಾವತ್ತಾದರು ಕ್ರಾಂತಿ ಮಾಡಿದ್ದಾರಾ. ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲದವರು. ಈಗೇನು ಕ್ರಾಂತಿ ಮಾಡ್ತಾರೆ ಎಂದು ಮಾತನಾಡಿದರು.

ಅಧಿಕಾರಕ್ಕಾಗಿ ಬಿಜೆಪಿ ಹಾಗ್ ಮಾಡ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ನಾವು ಇದುವರೆಗು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.