ಪ್ರಧಾನಿ ಮೋದಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ರಾಹುಲ್ ಗಾಂಧಿ

ದುಬೈ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ನಾನು ನನ್ನ ಮನದ ಮಾತು ಹೇಳಲು ಬಂದಿಲ್ಲ, ಬದಲಾಗಿ ನಿಮ್ಮ ಮನದ ಮಾತು ಕೇಳಲು ಬಂದಿದ್ದೇನೆಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯನ್ನ ಪರೋಕ್ಷವಾಗಿ ಕುಟುಕಿದ್ದಾರೆ.

ಇದೇ ಮೊದಲ ಬಾರಿಗೆ ದುಬೈ ಪ್ರವಾಸಕೈಗೊಂಡಿರುವ ರಾಹುಲ್ ಗಾಂಧಿಯವರಿಗೆ ವಿಮಾನ ನಿಲ್ದಾಣದಲ್ಲಿ ಅಲ್ಲಿ ನೆಲೆಸಿರುವ ಭಾರತೀಯದಿಂದ ಭವ್ಯ ಸ್ವಾಗತ ದೊರಕಿತು.ಜಬೇಲ್ ಅಲಿ ಕಾರ್ಮಿಕ ಕಾಲೋನಿಗೆ ತೆರಳಿದ ಅವರು ಕಾರ್ಮಿಕರನ್ನ ಉದ್ದೇಶಿಸಿ ಮಾತನಾಡಿದರು.

ಕಾರ್ಮಿಕರ ಪರಿಶ್ರಮವನ್ನ ಶ್ಲಾಘಿಸಿದ ರಾಹುಲ್, ದಿನಪೂರ್ತಿ ದುಡಿದು ನಿಮ್ಮ ಕುಟುಂಬಕ್ಕೆ ಹಣ ಕಳುಹಿಸುತ್ತೀರಾ. ಇಲ್ಲಿಯ ಕಾರ್ಮಿಕರ ಸಮಸ್ಯೆಗಳ ಕುರಿತು ಕಾಂಗ್ರೆಸ್‌ಗೆ ಅರಿವಿದೆ. ನಿಮಗೆ ಸಹಾಯ ಮಾಡಲು ಬಯಸುತ್ತೇವೆ. ನಾನು ನಿಮ್ಮಂತೆ ಸಾಮಾನ್ಯ ವ್ಯಕ್ತಿ. ನಾನು ನಿಮ್ಮ ಸಹಾಯಕ್ಕೆ ಸದಾ ಸಿದ್ಧನಿರುತ್ತೇನೆ ಎಂದು ಹೇಳಿದರು.