ದೇಶಕ್ಕೆ ವಂಚಿಸಿದವರನ್ನು ಸುಮ್ಮನೆ ಬಿಡಲ್ಲ : ಮೋದಿ ಟಾಂಗ್

ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಿದ್ದು, ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

ಕೇವಲ ಇಬ್ಬರು ಸದಸ್ಯರನ್ನು ಹೊಂದುವ ಮೂಲಕ ಪ್ರಚಲಿತವಾಗಿದ್ದ ಬಿಜೆಪಿ ಇಂದು ವಿಶ್ವವೇ ಗುರುತಿಸುವ ಮಟ್ಟಿಗೆ ಬೆಳೆದಿದೆ. ಕಾರ್ಯಕರ್ತರಿಂದ ಬಿಜೆಪಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ. ಭಾರತ ತನ್ನ ಮುಂದಿನ ಗುರಿ ಸಾಧಿಸಬೇಕಿದೆ ಎಂದು ಹೇಳಿದರು.

ಬಿಜೆಪಿ ಈ ಭಾರೀ ಗೆಲುವು ಸಾಧಿಸಲಿದೆ.

ಇನ್ನು ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಇಂದು ಬಿಜೆಪಿ 16 ರಾಜ್ಯಗಳಲ್ಲಿ ಅಧಿಕಾರಕ್ಕಿದೆ. ಕಳೆದ ಬಾರಿ ಎಲ್ಲೆಲ್ಲಿ ಬಿಜೆಪಿ ಸೋಲನುಭವಿಸಿತ್ತೋ. ಅಲ್ಲಿ ಈ ಭಾರೀ ಗೆಲುವಿನ ನಗೆ ಬೀರಲಿದೆ. ನಮಗೆ ವಾಜಪೇಯಿ ಆಶೀರ್ವಾದವಿದೆ ಎಂದರು.

ಮೀಸಲಾತಿ ಮಸೂದೆಯಿಂದ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿದೆ

ಜನರ ಮನಸ್ಸಿನಲ್ಲಿ ಬಿಜೆಪಿ ಬಗ್ಗೆ ವಿಶ್ವಾಸವಿದೆ. ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ನಮ್ಮ ಮಂತ್ರವಾಗಿದೆ. ಅಭಿವೃದ್ಧಿ ಆಗಬೇಕೆಂದರೆ ಪ್ರಜೆಗಳೆಲ್ಲ ನಮ್ಮೊಂದಿಗೆ ಕೈಜೋಡಿಸಬೇಕು. ಬಡವರಿಗೂ ಅವಕಾಶ ಕಲ್ಪಿಸಲಾಗುತ್ತದೆ. ಜಾತಿ ಮೀಸಲಾತಿಯಲ್ಲಿಯೂ ಕಲ್ಪಿಸಲಾಗಿದೆ. ಮೀಸಲಾತಿ ಮಸೂದೆಯಿಂದ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದರು.

ವಿರೋಧಪಕ್ಷದ ವಿರುದ್ಧ ವಾಗ್ದಳಿ

ಇನ್ನು ವಿರೋಧಪಕ್ಷದ ವಿರುದ್ಧ ವಾಗ್ದಳಿಯನ್ನು ಇದೇ ಸಂದರ್ಭದಲ್ಲಿ ಮೋದಿ ನಡೆಸಿದರು. ನಂತರ ಮಾತನಾಡಿದ ನರೇಂದ್ರ ಮೋದಿ ಮಹಿಳೆಯರ ಸಬಲೀಕರಣ ವಿಚಾರದಲ್ಲಿ ನಮ್ಮ ಪಕ್ಷ ಹಿಂದೆ ಸರಿಯುವುದಿಲ್ಲ,  ಮಹಿಳೆಯರನ್ನು ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಥಿ ಸಾಧಿಸಲು ಸಹಕರಿಸಲಿದ್ದೇವೆ ಎಂದರು.

ಹಗರಣ ನಡೆಸುವುದಷ್ಟೇ ಅವರಿಗೆ ಬೇಕಿರುವುದು

ಕಾಂಗ್ರೆಸ್​ನವರ ಪ್ರತಿಯೊಂದು ಭ್ರಷ್ಟಾಚಾರವನ್ನು ಬಯಲಿಗೇಳೆಯುತ್ತೇವೆ. ಭ್ರಷ್ಟಾಚಾರ ಎಸಗಿದವರನ್ನು ಈ ನಾವು ಬಿಡುವುದಿಲ್ಲ. ಅವರಿಗೆ ಶಕ್ತಿಶಾಲಿ ಸರ್ಕಾರ ರಚಿಸುವ ಇಚ್ಛಾಶಕ್ತಿ ಇಲ್ಲ. ಹಗರಣ ನಡೆಸುವುದಷ್ಟೇ ಅವರಿಗೆ ಬೇಕಿರುವುದು. ಆದರೆ, ನಮಗೆ ಬೇಕಿರುವುದು ಶಕ್ತಿಯುತ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದರು.

ಒಬ್ಬ ವಂಚಕನನ್ನು ಹಿಡಿದು ಕರೆತಂದಿದ್ದೇವೆ

ಒಂದು ಸಾಮಾನ್ಯ ವಿಧದ ಲೋನ್ ಆದರೆ, ಮತ್ತೊಂದು ಕಾಂಗ್ರೆಸ್​ ಲೋನ್​ ಇತ್ತು. ಕಾಂಗ್ರೆಸ್​ ಲೋನ್ ಅಂದರೆ ಭ್ರಷ್ಟಾಚಾರ. ಅಂದು ಸಾವಿರಾರು ಕೋಟಿ ಸಾಲ ಮಾಡಿದವರು ದೇಶ ಬಿಟ್ಟು ಪರಾರಿಯಾದರು. ಅವರಲ್ಲಿ ಒಬ್ಬ ವಂಚಕನನ್ನು ಹಿಡಿದು ಕರೆತಂದಿದ್ದೇವೆ. ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ನಾವು ಸುಮ್ಮನಾಗಿಲ್ಲ. ಎಲ್ಲವನ್ನೂ ವಸೂಲಿ ಮಾಡುತ್ತೇವೆ. ಕಾಂಗ್ರೆಸ್​ನವರ ಭ್ರಷ್ಟಾಚಾರ ಬಯಲಾಗುತ್ತಿದೆ. ಸುಳ್ಳು ಹೇಳೋದೇ ಅವರ ಕೆಲಸ ಎಂದು ವಾಗ್ಪ್ರಾಹಾರ ನಡೆಸಿದರು.

ದೇಶದ ಅಭಿವೃದ್ಥಿಗೆ ಬಿಜೆಪಿ ಶ್ರಮಿಸುತ್ತಿದೆ.

ರೈತರ ಪರವಾಗಿ ನಾವು ಪ್ರಮಾಣಿಕವಾದ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ,ದೇಶದ ಅಭಿವೃದ್ಥಿ ಕಾರ್ಯವನ್ನು ನಾವು ಹೆಚ್ಚಿಸಿದ್ದೇವೆ, ಅನ್ನತದಾರ ಅಭಿವೃದ್ಥಿಗೆ ಬಿಜೆಪಿ ಶ್ರಮಿಸುತ್ತೀದೆ ಎಂದರು. ಎಲ್ಲಾವನ್ನು ಬದಲಾಯಿಸುತ್ತೆನೆ ಎಂದು ನಾವು ಹೇಳುವುದಿಲ್ಲ, ಆದರೆ ಬದಲಾವಣೆ ತರಲು ಶ್ರಮಿಸುತ್ತೆನೆ ಎಂದು ಮೋದಿ ನುಡಿದರು.

ದೇಶದ ಯುವ ಜನತೆಯ ಪರವಾಗಿ ಮೋದಿ ನಿಂತಿದ್ದರೆ , ಯುವ ಜನತೆಗೆ ಉದ್ಯೂಗ ಸೃಷ್ಟಿಸುವುದು ನಮ್ಮ ಗುರಿ, ಮೀಸಲಾತಿ ಯಾರ ಹಕ್ಕನ್ನು ಕಸಿದುಕೊಳ್ಳುವುದಿಲ್ಲ ಎಂದು ಮೋದಿ ಹೇಳಿದರು.