ಮೋದಿಯವರಿಗೆ ಸೋಲಿನ ಭೀತಿ ಇದೆ: ಪರಮೇಶ್ವರ್ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿಯವರಿಗೆ ಸೋಲಿನ ಭೀತಿ ಇರಬಹುದು. ಮೂರು ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅದರ ಫಲಿತಾಂಶ ಅವರಿಗೆ ಮಾನಸಿಕ ಗೊಂದಲ ಉಂಟು ಮಾಡಿರಬಹುದು ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

ಸಿಎಂ ಹುದ್ದೆಗೆ ಅದರದ್ದೆ ಆದ ಘನತೆಯಿದೆ

ತುಮಕೂರಿನ ಸಿದ್ದಾರ್ಥ ನಗರದಲ್ಲಿ ಶನಿವಾರ ಮಾತನಾಡಿದ ಅವರು, ಕುಮಾರಸ್ವಾಮಿಯವರು ಈ ರಾಜ್ಯದ ಸಂವಿಧಾನಾತ್ಮಕವಾಗಿ ಪ್ರಮಾಣವಚನ ಸ್ವೀಕರಿಸಿದ ಸಂಮಿಶ್ರ ಸರ್ಕಾರದ ಮುಖ್ಯಮಂತ್ರಿ, ಇದರ ಅರಿವು ಪ್ರಧಾನ ಮಂತ್ರಿಗಳಾದ ಮೋದಿ ಹಾಗೂ ಬಿಜೆಪಿ ಪಕ್ಷದ ಅಮಿತ್ ಷಾ ಅವರಿಗೆ ಇರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ‌ ಹಾಗೂ ಸಿಎಂ ಹುದ್ದೆಗೆ ಅದರದ್ದೆ ಆದ ಘನತೆಯಿದೆ.‌ ಘನತೆ ಬಗ್ಗೆ ಲಘುವಾಗಿ ಮಾತನಾಡಿರುವುದು ಅವರ ಸಂಸ್ಕೃತಿ ತೊರುತ್ತದೆ ಎಂದು ಹೇಳಿದರು.

ರಾಮ ಮಂದಿರ ನಿರ್ಮಾಣ ಕಟ್ಟುವುದಾದರೆ ಕಟ್ಟಲಿ ಕಾಂಗ್ರೆಸ್ ಯಾವುದೇ ತಕರಾರಿಲ್ಲ

ರಾಮಮಂದಿರಕ್ಕೆ ಕಾಂಗ್ರೆಸ್ ಅಡ್ಡಿ ಆರೋಪವಾಗಿ ಮಾತನಾಡಿದ ಅವರು, ಯಾರು ಇಟ್ಟಿಗೆ ತೆಗೆದುಕೊಂಡು ಹೋದರು, ಯಾರು ಚಂದ ವಸೂಲಿ ಮಾಡಿದರು, ಚುನಾವಣೆ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರ ಮಾತನಾಡ್ತರೆ ಎಂದು ಜನರಿಗೆ ಗೊತ್ತಿದೆ. ರಾಮ ಮಂದಿರ ನಿರ್ಮಾಣ ಕಟ್ಟುವುದಾದರೆ ಕಟ್ಟಲಿ ಕಾಂಗ್ರೆಸ್ ಯಾವುದೇ ತಕರಾರಿಲ್ಲ ಎಂದು ಡಾ ಜಿ ಪರಮೇಶ್ವರ್ ಮಾತನಾಡಿದರು.

ಸರ್ಕಾರ ಸುಭದ್ರವಾಗಿದೆ

ರಾಮ ಮಂದಿರ ಕಟ್ಟುತ್ತಿದ್ದೇವೆ ಅಂತ ಮೂರ್ನಾಲ್ಕು ಚುನಾವಣೆ ಮಾಡಿದ್ದಾರೆ. ದೇಶದ ಜನತೆಗೆ ಮೋಸ ಮಾಡ್ತಾರೆ. ಸರ್ಕಾರ ಸುಭದ್ರವಾಗಿದೆ. ಮುಖ್ಯಮಂತ್ರಿ ಸುಭದ್ರವಾಗಿದ್ದಾರೆ, ಐದು ವರ್ಷ ಪೂರೈಸುತ್ತೇವೆ. ಬಿಜೆಪಿಯವರ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ವಾಗ್ದಾಳಿಯನ್ನು ನಡೆಸಿದರು.