ಉದ್ಧಟತನ ಪ್ರದರ್ಶಿಸಿ, ಮುಖಭಂಗ ಅನುಭವಿಸಿದ ಎಂಇಎಸ್ ಪುಂಡರು

ಬೆಳಗಾವಿ: ಬೆಳಗಾವಿಯ ಏರ್‌ಪೋರ್ಟ್‌ನಲ್ಲಿ ಎಂ.ಇಎಸ್ ನಾಯಕರು ಉದ್ಧಟತನ ಪ್ರದರ್ಶಿಸಿ, ಮುಖಭಂಗ ಅನುಭವಿಸಿದ್ದಾರೆ.

ಬೆಳಗಾವಿ ಸಮೀಪದ ಕಡೋಲಿ ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎನ್‌.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಬಂದಿದ್ದು, ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ನಾಡದ್ರೋಹಿ ಘೋಷಣೆ ಕೂಗಿದ್ದು, ಎಂ.ಇಎಸ್ ನಾಯಕರ ಉದ್ಧಟತನ ಪ್ರದರ್ಶನಕ್ಕೆ ಪವಾರ್ ಗರಂ ಆಗಿದ್ದಾರೆ.

ಬೆಳಗಾವಿ, ನಿಪ್ಪಾಣಿ,ಕಾರವಾರ, ಬೀದರ, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಎಂದು ಘೋಷಣೆ ಕೂಗಿದ್ದು, ಶರದ್ ಪವಾರ್ ಘೋಷಣೆ ನಿಲ್ಲಿಸುವಂತೆ ಕೈಸನ್ನೆ ಮಾಡಿದ್ದು, ಶರದ ಪವಾರ್ ಸೂಚನೆಯಿಂದ ಘೋಷಣೆ ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಮೂಲಕ ಎಂ.ಇ.ಎಸ್ ನಾಯಕರಿಗೆ ತೀವ್ರ ಮುಖಭಂಗವಾಗಿದೆ.