ಎಷ್ಟು ದಿನ ಇರುತ್ತೋ ಅಷ್ಟು ದಿನ ಚೆಚ್ಚಾಕುತ್ತೇನೆ: ರೇವಣ್ಣ

ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಚೆಚ್ಚಾಕುತ್ತೇನೆ ಆಮೇಲೆ ನೋಡಿಕೊಳ್ಳದು ಸರ್ಕಾರ ಇರುತ್ತಾ ಅಥವಾ ಇಲ್ವಾ ಎಂದು ಲೋಕಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.

ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ದೋಸ್ತಿ ಹೆಚ್ಚು ದಿನ ಉಳಿಯಲ್ಲಾ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಸರ್ಕಾರ ಎಷ್ಟು ದಿನ ಇರುತ್ತೋ ನನಗೆ ಗೊತ್ತಿಲ್ಲ ಆದರೆ ಸರ್ಕಾರ ಇರುವ ತನಕ ನಾವು ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ಎಂದು ರೇವಣ್ಣ ಹೇಳಿದರು.

ನಾವು ಎಲ್ಲರ ಜೊತೆ ಚೆನ್ನಾಗಿದ್ದೇವೆ

ಬಿಜೆಪಿ ಜೊತೆ ಜೆಡಿಎಸ್ ನವರು ಚೆನ್ನಾಗಿದ್ದಾರೆ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ನಾವು ಎಲ್ಲರ ಜೊತೆಯಲ್ಲೂ ಚೆನ್ನಾಗಿದ್ದೇವೆ, ಕೆಲಸ ಆಗಬೇಕಲ್ಲಾ ಅದಕ್ಕೆ ನಾವು ಎಲ್ಲರ ಜೊತೆ ಚೆನ್ನಾಗಿದ್ದೇವೆ, ನಾನು ಹೊಡೆದಾಡಬೇಕಾ ಹೇಳಿ ಎಂದು ಮಾಧ್ಯಮದವರನ್ನು ರೇವಣ್ಣ ಪ್ರಶ್ನಿಸಿದರು.