ಅಂಬರೀಶ್ ದೋಸ್ತಿ, ಪ್ರೀತಿಗೆ ಹೆಸರುವಾಸಿ : ಯೋಗರಾಜ್ ಭಟ್

ಸಿನಿಮಾ, ರಾಜಕೀಯ ರಂಗದಲ್ಲಿದ್ದ ಅಂಬರೀಶ್ ಹಣಗಳಿಸೋದಕ್ಕಿಂತ ಜನ ಗಳಿಸಿದ್ದೆ ಹೆಚ್ಚು ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.

ಮಂಡ್ಯದಲ್ಲಿ ಹುಟ್ಟಿದ ಅಂಬಿ ದೋಸ್ತಿ, ಪ್ರೀತಿಗೆ ಹೆಸರುವಾಸಿ

ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಅಂಬರೀಶ್ ಅವರಿಗೆ ಬೆಂಗಳೂರು ಮೊಬೈಲ್ ಇದ್ದಂತೆ ಮಂಡ್ಯ ಚಾರ್ಜರ್ ಇದ್ದಂತೆ.ಅಂತಹ ಮಂಡ್ಯದಲ್ಲಿ ಹುಟ್ಟಿದ ಅಂಬಿ ದೋಸ್ತಿ, ಪ್ರೀತಿಗೆ ಹೆಸರುವಾಸಿ , ಅವರನ್ನು ನೆನಪಿಸಿಕೊಳ್ಳೋದೆ ನಮ್ಮ ಪುಣ್ಯ ಎಂದು ಯೋಗರಾಜ್ ಭಟ್ ಹೇಳಿದರು.

ಒಂದು ಸಿನಿಮಾದಲ್ಲಿ ಕೆಲಸ ಮಾಡಿದ್ದೆ ನನ್ನ ಪುಣ್ಯ

ಅಂಬರೀಶ್ ಜೊತೆಗೆ ಒಂದು ಸಿನಿಮಾದಲ್ಲಿ ಕೆಲಸ ಮಾಡಿದ್ದೆ ನನ್ನ ಪುಣ್ಯ, ಡ್ರಾಮಾ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಅಂಬರೀಶ್ ನಾನ್ ವೆಜ್ ತಿನ್ನಲು ಆಪ್ತನೊಬ್ಬನಿಗೆ ಹೇಳಿದರು. ಆತ ಹತ್ತಾರು ಮಂದಿಗೆ ಹೇಳಿದ ಪರಿಣಾಮ ಹಲವು ಜನ ನಾನ್ ವೆಜ್ ತಂದರು, ಆದರೆ ಅನಾರೋಗ್ಯದ ಕಾರಣ ಅವರು ಊಟ ಮಾಡದೇ ಸಿನಿಮಾ ತಂತ್ರಜ್ಞರು ಹಾಗೂ ಅಭಿಮಾನಿಗಳಿಗೆ ಉಣ ಬಡಿಸಿದರು ಎಂದು ಅಂಬರೀಶ್ ಜೊತೆ ಇದ್ದ ಒಡನಟವನ್ನು ಯೋಗರಾಜ್ ಭಟ್ ನೆನಪಿಸಿಕೊಂಡರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.