ಸಾಯುವ ಮುನ್ನ TV ನೋಡಿದ ಅಂಬಿ ನಿಜಕ್ಕೂ ಕಣ್ಣೀರಾಕಿದ್ರು: ದೊಡ್ಡಣ್ಣ

ಅಂಬರೀಶ್ ಸಾವನ್ನಪ್ಪಿದ ದಿನವೇ ಮಂಡ್ಯದ ಕನಗನಮರಡಿ ಯಲ್ಲಿ 30 ಮಂದಿ ಸಾವನ್ನಪ್ಪಿದ್ದಾರು, ಆವತ್ತು ಮಧ್ಯಾಹ್ನ TV ನೋಡಿದ ಅಂಬರೀಶ್ ನಿಜಕ್ಕೂ ಕಣ್ಣೀರಾಕಿದರು ಎಂದು ಹಿರಿಯ ಕಲಾವಿದ ದೊಡ್ಡಣ್ಣ ಹೇಳಿದ್ದಾರೆ.

ಕಲಾವಿದರ ಸಂಘದ ಕಟ್ಟಡಕ್ಕೆ ಅಂಬರೀಶ್ ಹೆಸರಿಡುವ ಆಸೆ ಇತ್ತು

ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕಲಾವಿದರ ಸಂಘಕ್ಕೆ ನಿವೇಶನ ಸಿಗಲು ಅಂಬರೀಶ್ ಕಾರಣ.ನಿವೇಶನ ಪಡೆಯಲು ಜೆ.ಎಚ್.ಪಟೇಲ್ ಜೊತೆ ಅನಾರೋಗ್ಯದಲ್ಲೂ ಅಂಬಿ ಮಾತುಕತೆ ನಡೆಸಿದರು.ಕಲಾವಿದರ ಸಂಘ ಕಟ್ಟಲು ಅಂಬಿ ಶ್ರಮ ಅಪಾರವಾಗಿತ್ತು, ಭಾರತದ ಚಿತ್ರರಂಗದಲ್ಲಿ ಕನ್ನಡ ಬಿಟ್ರೆ ಯಾವ ಭಾಷೆಯಲ್ಲೂ ಕಲಾವಿದರ ಸಂಘದ ಕಟ್ಟಡ ಇಲ್ಲ, ಕಲಾವಿದರ ಸಂಘದ ಕಟ್ಟಡಕ್ಕೆ ಅಂಬರೀಶ್ ಹೆಸರಿಡುವ ಆಸೆ ಇತ್ತು ಆದರೆ ಅದಕ್ಕೆ ಅಂಬಿ ಒಪ್ಪಲಿಲ್ಲ, ಕಲಾವಿದರ ಸಂಘದ ಕಟ್ಟಡಕ್ಕೆ ಡಾ.ರಾಜ್ ಹೆಸರಿಡಲು ಅಂಬಿ ಕಾರಣ ಎಂದು ಹೇಳಿದರು.

ಮಂಡ್ಯಕ್ಕೆ ಹೋಗಬೇಕಂದು ಹಠ ಮಾಡಿದರು

30 ಮಂದಿ ಸಾವನ್ನಪ್ಪಿದರು ಮಂಡ್ಯದಲ್ಲಿ, ಅವತ್ತು ಆಗ ಮಂಡ್ಯಕ್ಕೆ ಹೋಗಬೇಕೆಂದು ಅಂಬಿ ಹಠ ಮಾಡಿದರು,ಅನಾರೋಗ್ಯ ಇದ್ದರೂ ಮಂಡ್ಯಕ್ಕೆ ಹೋಗಬೇಕಂದು ಹಠ ಮಾಡಿದರು.ಅವತ್ತು ಅನೇಕ ಕಾರ್ಯಕ್ರಮ ಇದ್ದರೂ ಅದನ್ನು ಸ್ಥಗಿತಗೊಳಿಸಿ ನಾಳೆ ಮಂಡ್ಯಕ್ಕೆ ಹೋಗೋಣ ಎಂದಿದರು.ಆದರೆ ಅದಾದ ರಾತ್ರಿ ಅಂಬಿ ದುರಾದೃಷ್ಟವಶಾತ್ ವಿಧಿವಶರಾದರು ಎಂದು ಅಂಬಿ ಕೊನೆ ಕ್ಷಣವನ್ನು ಸ್ಮರಿಸಿದರು ದೊಡ್ಡಣ್ಣ