ಅಂಬರೀಶ್​ಗೆ ನುಡಿನಮನ : ಅಂಬಿ ನೆನೆದು ಕಣ್ಣೀರಾಗುತ್ತಿರುವ ಅಭಿಮಾನಿಗಳು

ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆ ಮತ್ತು ಶ್ರದ್ಧಾಂಜಲಿ ಸಭೆ ನಡೆಯುತ್ತಿದೆ.

ಅಂಬರೀಶ್​ಗೆ ನುಡಿ ನಮನ

ಅಂಬರೀಶ್​ಗೆ ನುಡಿ ನಮನ ಕಾರ್ಯಕ್ರಮ ಆರಂಭವಾಗಿದೆ. ಸ್ಥಳೀಯ ಗಾಯಕರಿಂದ ಅಂಬರೀಶ್​ಗೆ ನುಡಿ ನಮನವನ್ನು ಅಂಬರೀಶ್ ಅಭಿನಯದ ಚಿತ್ರ ಗೀತೆಗಳನ್ನು ಹಾಡುವ ಮೂಲಕ ಸ್ಥಳೀಯ ಗಾಯಕರು ನಮನವನ್ನು ಮೊದಲಿಗೆ ಸಲ್ಲಿಸಿದರು.

ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಅಂಬರೀಶ್ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿದ್ದು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯವನ್ನು ವಹಿಸಿದ್ದಾರೆ.

ಅಂಬರೀಶ್ ನೆನೆದು ಕಣ್ಣೀರು

ಸುಮಲತಾ ಅಂಬರೀಶ್, ಅಭಿಷೇಕ್, ದೊಡ್ಡಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ , ಜಗ್ಗೇಶ್, ಸಾಧುಕೋಕಿಲ, ನಟ ಶಿವಕುಮಾರ್,ಯೋಗರಾಜ್ ಭಟ್,  ಪತ್ರಕರ್ತ ಎಚ್.ಆರ್.ರಂಗನಾಥ್  ಹಾಗೂ ಚಿತ್ರರಂಗದ ಅನೇಕ ಕಲಾವಿದರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜಕೀಯ ಮುಖಂಡರು ಭಾಗವಹಿಸಿದ್ದು, ಇನ್ನೂ ಕಾರ್ಯಕ್ರಮದಲ್ಲಿ ಮಂಡ್ಯದ ಲಕ್ಷಾಂತರ ಮಂದಿ ಭಾಗವಹಿಸಿದ್ದು, ಅಭಿಮಾನಿಗಳು ಅಂಬರೀಶ್ ನೆನೆದು ಕಣ್ಣೀರು ಹಾಕುತ್ತೀದ್ದಾರೆ.

ಒಂದು ನಿಮಿಷ ಮೌನಾಚರಣೆ

ಸುಮಲತಾ ಅಂಬರೀಶ್, ಅಭಿಷೇಕ್ ಬರ್ತಿದ್ದಂತೆ ಜೈಕಾರವನ್ನು ಮಂಡ್ಯದ ಅಂಬರೀಶ್ ಅಭಿಮಾನಿಗಳು ಕೂಗಿದರು.ಇದೇ ವೇಳೆ ಅಂಬರೀಶ್  ನೆನೆದು ಒಂದು ನಿಮಿಷ ಮೌನಾಚರಣೆನ್ನು ಆಚರಿಸಲಾಯಿತು. ನಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಅಂಬರೀಶ್ ರೀತಿಯಲ್ಲಿ ವೇಷಧಾರಿಯಾಗಿ ಬಂದ ಅಭಿಮಾನಿಗಳು

ಇನ್ನೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ,ಅಂಬರೀಶ್ ರೀತಿಯಲ್ಲಿ ವೇಷಧಾರಿಯಾಗಿ ಬಂದ ಅಭಿಮಾನಿಗಳು, ಕನ್ವರ್‌ಲಾಲ್ ವೇಷಧಾರಿಯಾಗಿ ಬಂದು, ಅಂಬರೀಶ್ ರೀತಿಯಲ್ಲೇ ಹ್ಯಾಟು, ಕನ್ನಡಕ ಧರಿಸಿ ಬಂದ ಅಭಿಮಾನಿ ದೇವರಾಜು. ಮತ್ತು ನಾನೇ ಕನ್ವರ್‌ಲಾಲ್ ಹಾಡಿಗೆ ಜೂನಿಯರ್ ಅಂಬರೀಶ್‌ಗಳ ಸಖತ್ ಸ್ಟೆಪ್, ಇನ್ನೂ ಅಂಬರೀಶ್ ರೀತಿಯ ವೇಷಧಾರಿಗಳನ್ನು ಕಂಡು ಶಿಳ್ಳೆ ಚಪ್ಪಾಳೆ ಹಾಕಿದರು ಮಂಡ್ಯದ ಜನರು.