ಅಂಬರೀಶ್ ದಾರಿಯಲ್ಲಿ ನಾನು ನಡೆದರೆ ಜನ ಅಷ್ಟೇ ಪ್ರೀತಿ ಕೊಡ್ತಾರೆ: ಅಭಿಷೇಕ್

ಅಂಬರೀಶ್ ನನ್ನ ಸಣ್ಣ ವಯಸ್ಸಿನಿಂದ ಹೇಳಿಕೊಟ್ಟಿದ್ದು ಹಣ ಮುಖ್ಯ ಅಲ್ಲ ಜನ ಮುಖ್ಯ ಅಂತ ನಮ್ಮಪ್ಪ ರಾಜನಂತೆ ಬದುಕಿ ರಾಜನಂತೆ ಓದರು. ಅದಕ್ಕೆ ಜನ ಕಾರಣ ಎಂದು ಅಂಬರೀಶ್ ಪುತ್ರ ಅಭಿಷೇಕ್ ಹೇಳಿದ್ದಾರೆ.

ಹತ್ತು ಜನಕ್ಕೆ ಒಳ್ಳೆಯದು ಮಾಡು

ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅದಕ್ಕೆ ಮಂಡ್ಯ ಜನ ಕಾರಣ. ಅವರಿಗೆ ಧನ್ಯವಾದ. ಹತ್ತು ಜನಕ್ಕೆ ಒಳ್ಳೆಯದು ಮಾಡು. ಆದರೆ ಯಾರಿಗೂ ಕೆಟ್ಟದ್ದು ಮಾಡಬೇಡ ಎಂದು ಅಪ್ಪ ಹೇಳಿಕೊಟ್ಟಿದರು ಎಂದು ಹೇಳಿದರು.

ಜನ ಅಷ್ಟೇ ಪ್ರೀತಿ ಕೊಡ್ತಾರೆ

ಅಂಬರೀಶ್ ದಾರಿಯಲ್ಲಿ ನಾನು ನಡೆದರೆ ಜನ ಅಷ್ಟೇ ಪ್ರೀತಿ ಕೊಡ್ತಾರೆ. ಜನ ನಮ್ಮ ಕುಟುಂಬದ ಮೇಲೆ ಅಭಿಮಾನ ಇಟ್ಟಿದ್ದಾರೆ ಅದು ಹಾಗೆ ಮುಂದುವರೆಯಲಿ ಎಂದು ಮಾತನಾಡಿದರು.