ತಲೆ ತಿರುಗಿಸುವಂತಿದೆ ತರಕಾರಿ ಬೆಲೆ

ಬೆಂಗಳೂರು: ಈ ಬಾರಿ ಸಂಕ್ರಾಂತಿ ಹಬ್ಬವನ್ನ ಭರ್ಜರಿಯಾಗಿ ಆಚರಿಸಬೇಕು. ವಿವಿಧ ತರಹದ, ರುಚಿರುಚಿಯಾದ ಅಡುಗೆ ಮಾಡಬೇಕು ಅಂತಾ ನೀವು ಅಂದ್ಕೊಂಡಿದ್ರೆ, ಆ ಮೊದಲು ಈ ಸ್ಟೋರಿ ಓದಿ.

ದಿಢೀರ್ ಗಗನಕ್ಕೇರಿದ ತರಕಾರಿ ಬೆಲೆ
ಒಂದೆಡೆ ನೀರಿನ ಬಿಲ್ ಹೆಚ್ಚಾಗುತ್ತೆ ಅನ್ನೋ ಸುದ್ದಿ ಕೇಳಿ ಕಂಗಾಲಾದ ಬೆಂಗಳೂರಿನ ಜನತೆಗೆ ತರಕಾರಿ ಬೆಲೆ ಗಗನಕ್ಕೇರಿದ್ದನ್ನ ಕೇಳಿ ಶಾಕ್ ಆದಂತಾಗಿದೆ. ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದ್ದು, ಟೊಮೆಟೋ ರೇಟ್ ಹೆಚ್ಚಾಗಿದೆ.

ಈರುಳ್ಳಿ, ಆಲೂಗಡ್ಡೆ ಬೆಲೆ ಕಡಿಮೆಯಾಯಿತೆಂದು ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಟೊಮೆಟೋ ಬೆಲೆಏರಿಕೆಯ ಶಾಕ್ ತಾಗಿದ್ದು, ಚಳಿಯಲ್ಲೂ ಟೊಮೆಟೋ ಬಿಸಿ ಮುಟ್ಟಿಸಿದೆ. ಕೆಜಿಗೆ 10ರಿಂದ 20ರೂಪಾಯಿಗೆ ಸಿಗುತ್ತಿದ್ದ ಟೊಮೆಟೋ ಈಗ 50 ರಿಂದ70 ರೂಪಾಯಿಗೆ ಆಗಿದೆ. ಇನ್ನು ಟೊಮೆಟೋ ಮತ್ತು ತರಕಾರಿ ಇಳುವರಿ ಮಾರುಕಟ್ಟೆಗೆ ಬರದ ಹಿನ್ನೆಲೆ ತರಕಾರಿ ದರ ಗಗನಕ್ಕೇರಿದೆ.

ತರಕಾರಿ ದರ:
ಕಳೆದ ತಿಂಗಳು – ಇವತ್ತಿನ ದರ
ಟೊಮೆಟೋ 50 ರಿಂದ 70
ಈರುಳ್ಳಿ 20 -30
ಹುರಳಿಕಾಯಿ 30- 50
ಬದನೆಯಕಾಯಿ 30-45
ದಪ್ಪ ಮೆಣಸಿನಕಾಯಿ 40- 50
ಸೌತೆಕಾಯಿ 25-40
ಮೂಲಂಗಿ 25-35
ಹೀರೆಕಾಯಿ 44-60
ಅವರೆಕಾಳು 95-120
ಬೆಂಡೇಕಾಯಿ 40-60
ಹಾಗಲಕಾಯಿ 50-60
ನುಗ್ಗೆಕಾಯಿ 110-130