ಊಹಾಪೋಹ ಹಬ್ಬಿಸೋರ ವಿರುದ್ಧ ರಾಕಿಂಗ್ ಸ್ಟಾರ್ ಗರಂ..!

ಸ್ಯಾಂಡಲ್​ವುಡ್​ ಸ್ಟಾರ್ಸ್​ ಮತ್ತು ನಿರ್ಮಾಪಕರ ಮನೆಗಳ ಮೇಲಿನ ಐಟಿ ದಾಳಿ ಸಂಚಲನವನ್ನೇ ಸೃಷ್ಟಿಸಿತ್ತು. ದಾಳಿ ವೇಳೆ ರಾಕಿಂಗ್ ಸ್ಟಾರ್ ಯಶ್​ ಮನೆಯಲ್ಲಿ ಅಷ್ಟು ಹಣ ಸಿಕ್ತು, ಇಷ್ಟು ಅಕ್ರಮ ಆಸ್ತಿಯ ದಾಖಲೆ ಸಿಕ್ಕಿದೆ ಅಂತೆಲ್ಲಾ ಗಾಳಿ ಸುದ್ದಿ ಕೇಳಿಬರ್ತಿದೆ. ಇಂತಹ ಸುದ್ದಿ ಹಬ್ಬಿಸೋರಿಗೆ ರಾಕಿ ಭಾಯ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಕಳೆದ ವಾರ ಗುರುವಾರ, ಶುಕ್ರವಾರ, ಶನಿವಾರ ಕನ್ನಡ ಚಿತ್ರರಂಗದ ಸ್ಟಾರ್ ನಟರು ಮತ್ತು ನಿರ್ಮಾಪಕರ ಮನೆ ಮತ್ತು ಕಛೇರಿಗಳ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಹಲವು ಗಂಟೆಗಳ ಕಾಲ ತಲಾಶ್ ನಡೆಸಿದ್ರು. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ಕಿಚ್ಚ ಸುದೀಪ್, ಡಾ. ಶಿವರಾಜ್​​ಕುಮಾರ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸ್ಟಾರ್ ನಿರ್ಮಾಪಕರಿಗೂ ಐಟಿ ಶಾಕ್ ಕೊಟ್ಟಿತ್ತು.

ಐಟಿ ದಾಳಿ ನಂತ್ರ ಮಾತನಾಡಿದ ಕಲಾವಿದರು, ಐಟಿ ಅಧಿಕಾರಿಗಳು ಅವರ ಕೆಲಸ ಅವರು ಮಾಡಿದ್ದಾರೆ. ಅವರಿಗೆ ನಾವು ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಐಟಿ ಇಲಾಖೆಯಿಂದ ವಿಚಾರಣೆಗೆ ಕರೆದಾಗ ಹಾಜರಾಗುತ್ತೇವೆ ಅಂತ ಹೇಳಿದ್ದರು. ಅದರಂತೆ ಪುನೀತ್, ಯಶ್​​ ಈಗಾಗಲೇ ಐಟಿ ಕಛೇರಿಗೆ ತೆರಳಿ ವಿಚಾರಣೆಗೆ ಸಹಕಾರ ನೀಡ್ತಿದ್ದಾರೆ. ಇದೆಲ್ಲದರ ಮಧ್ಯೆ ಕೆಲವರು ಇಲ್ಲ ಸಲ್ಲದ ಗಾಳಿ ಸುದ್ದಿ ಹರಿಬಿಡ್ತಿದ್ದಾರೆ.

ಊಹಾಪೋಹ ಹಬ್ಬಿಸೋರ ವಿರುದ್ಧ ರಾಕಿಂಗ್ ಸ್ಟಾರ್ ಗರಂ..!
ಕಾಲೆಳೆಯೋ ದುಶ್ಮನ್ಸ್​ಗೆ ‘ರಾಕಿ ಭಾಯ್’ ಖಡಕ್ ವಾರ್ನಿಂಗ್..!
ಐಟಿ ದಾಳಿ ನಂತ್ರ ನಟ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಇಷ್ಟು ಕೋಟಿ ಹಣ ಸಿಕ್ತು, ಅಷ್ಟು ಅಕ್ರಮ ಆಸ್ತಿಯ ದಾಖಲೆ ಸಿಕ್ತಿದೆ ಅನ್ನೋ ಸುದ್ದಿ ಹರಿದಾಡ್ತಿದೆ.. ಯಶ್​ ಐಟಿ ವಿಚಾರಣೆಗೆ ಸಹಕರಿಸುತ್ತಿಲ್ಲ ಅಂತಲೂ ಸುದ್ದಿಗಳು ಕೇಳಿ ಬಂದಿತ್ತು..ಅದನ್ನೆಲ್ಲಾ ತಳ್ಳಿಹಾಕಿರೋ ಯಶ್​, ಆ ರೀತಿ ಊಹಾಪೋಹ ಹಬ್ಬಿಸೋರ ವಿರುದ್ಧ ಗರಂ ಆಗಿದ್ದಾರೆ.

ಐಟಿ ಅಧಿಕಾರಿಗಳ ವಿಚಾರಣೆಗೆ ಸಹಕಾರ ನೀಡಿದ್ದೇನೆ.. ಆದ್ರೆ, ಊಹಾಪೋಹಗಳನ್ನ ಹಬ್ಬಿಸಬೇಡಿ.. ನಮ್ಮ ಆಡಿಟರ್ ಮನೆ ಮೇಲೆ ದಾಳಿ ಆಗಿದೆ ಅನ್ನೋದೆಲ್ಲಾ ಸುಳ್ಳು.. ಸುಮಾರು15-16 ಕೋಟಿ ಲೋನ್ ಇದೆ.. ಟ್ಯಾಕ್ಸ್ ಸರಿಯಾಗಿ ಕಟ್ಟದೇ ಹೇಗೆ ಲೋನ್ ಕೊಡ್ತಾರೆ ಹೇಳಿ ಅಂದ್ರು..

ಒಟ್ಟಾರೆ ರಾಕಿಂಗ್ ಸ್ಟಾರ್ ಯಶ್, ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸೋರಿಗೆ ಖಡಕ್​ ವಾರ್ನಿಂಗ್ ಕೊಟ್ಟಿದ್ದಾರೆ.. ಇನ್ನು ಮುಂದಾದ್ರೂ ಇಂತಹ ಗಾಳಿ ಸುದ್ದಿಗೆ ಬ್ರೇಕ್ ಬೀಳುತ್ತಾ ಕಾದು ನೋಡ್ಬೇಕು..
ಎಂಟ್ರಟ್ರೈನ್​ಮೆಂಟ್ ಬ್ಯೂರೊ,ಟಿವಿ5