ದರ್ಶನ್ ಫ್ಯಾನ್ಸ್​ಗೆ ವರ್ಷಪೂರ ಉತ್ಸವ.. ಉತ್ಸವ.. ‘ಡಿ ಉತ್ಸವ’..!

ಕಳೆದೊಂದು ವರ್ಷದಿಂದ ದರ್ಶನ್​​ ಅಭಿನಯದ ಯಾವ್ದೆ ಸಿನಿಮಾ ಬಾರದೇ ಡಿ ಬಾಸ್ ಬಳಗ​ ಬೇಸರಗೊಂಡಿತ್ತು. ಬಟ್ ಈ ವರ್ಷ ಹಂಗೆ ಆಗೋದಿಲ್ಲ ಬಿಡಿ. ಇಡೀ ವರ್ಷ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್​​ಗೆ ಹಬ್ಬವೋ ಹಬ್ಬ. ಸಂಕ್ರಾಂತಿ ಹಬ್ಬದ ದಿನದಿಂದ್ಲೇ ಡಿ ಉತ್ಸವ ಕಳೆ ಕಟ್ಟಲಿದೆ.

ತಾರಕ್​ ಸಿನಿಮಾ ನಂತ್ರ ದರ್ಶನ್ ಅಭಿನಯದ ಯಾವ್ದೆ ಸಿನಿಮಾ ಥಿಯೇಟರ್​​ಗೆ ಬರಲೇಯಿಲ್ಲ. ಬಹುನಿರೀಕ್ಷಿತ ಕುರುಕ್ಷೇತ್ರ ಸಿನಿಮಾ ಕಾರಣಾಂತರಗಳಿಂದ ತಡವಾಗ್ತಿದ್ದು, ದಚ್ಚು ಫ್ಯಾನ್ಸ್​ಗೆ ಬೇಸರ ತಂದಿದೆ. ಬಟ್ ಫೈನಲಿ ಡಿ ಹಾರ್ಟ್ಸ್​ಗೆ ಸಿಹಿಸುದ್ದಿ ಸಿಕ್ಕಿದೆ. ಕುರುಕ್ಷೇತ್ರ ಕದನಕ್ಕೂ ಮೊದ್ಲೆ ಯಜಮಾನನ ದರ್ಬಾರ್ ಶುರುವಾಗೋದು ಪಕ್ಕಾ ಆಗಿದ್ದು, ಸಂಕ್ರಾಂತಿಗೆ ಭರ್ಜರಿ ಗಿಫ್ಟ್ ಸಿಕ್ತಿದೆ.

ದರ್ಶನ್ ಫ್ಯಾನ್ಸ್​ಗೆ ವರ್ಷಪೂರ ಉತ್ಸವ.. ಉತ್ಸವ.. ‘ಡಿ ಉತ್ಸವ’..!
ಸಂಕ್ರಾಂತಿ ಸಂಭ್ರಮದಲ್ಲೇ ಅಭಿಮಾನೋತ್ಸವಕ್ಕೆ ಸಿಕ್ತಿದೆ ಚಾಲನೆ..!
ಒಂದಲ್ಲ ಎರಡದಲ್ಲ ಈ ವರ್ಷ ದಚ್ಚು ನಟನೆಯ 5 ಸಿನಿಮಾ ತೆರೆಗೆ..!
ಈ ವರ್ಷ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಅಭಿಮಾನಿಗಳಿಗೆ ಡಬಲ್​ ಅಲ್ಲ ಥ್ರಿಬಲ್ ಧಮಾಕ. ಅಷ್ಟೆ ಯಾಕೆ ಅದಕ್ಕಿಂತಲೂ ದೊಡ್ಡ ಧಮಾಕ ಕಾದಿದೆ. ಡಿ ಬಾಸ್ ಅಭಿನಯದ ಯಜಮಾನ, ಕುರುಕ್ಷೇತ್ರ, ಒಡೆಯ ಸಿನಿಮಾಗಳು ಒಂದರ ಹಿಂದೊಂದರಂತೆ ತೆರೆಗೆ ಬರೋದು ಪಕ್ಕಾ ಆಗಿದೆ. ಈ ಮೂರು ಸಿನಿಮಾಗಳ ಜೊತೆಗೆ ದರ್ಶನ್​ ಅತಿಥಿ ಪಾತ್ರದಲ್ಲಿ ಮಿಂಚಿರೋ ಇನ್ಸ್​ಪೆಕ್ಟರ್ ವಿಕ್ರಂ ಮತ್ತು ಅಮರ್ ಸಿನಿಮಾಗಳು ತೆರೆಗೆ ಬರ್ತಿದೆ.

ಸಂಕ್ರಾಂತಿ ಹಬ್ಬಕ್ಕೆ ‘ಶಿವನಂದಿ’ ಯಜಮಾನನ ಗಾಜಬಜಾನ ಶುರು..!
ಬಹುನಿರೀಕ್ಷಿತ ಮ್ಯೂಸಿಕ್ ಆಲ್ಬಮ್​​ಗಾಗಿ ಅಭಿಮಾನಿಗಳ ಕಾತರ
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಯಜಮಾನ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್​ ಆಗಲಿದೆ.. ಈಗಾಗಲೇ ಯಜಮಾನ ಚಿತ್ರದ ಪೋಸ್ಟರ್ಸ್​​​ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಇದೀಗ ಫಸ್ಟ್ ಲಿರಿಕಲ್ ವೀಡಿಯೋ ರಿಲೀಸ್​ ಆಗ್ತಿದೆ.. ಚಿತ್ರದಲ್ಲಿ ದಚ್ಚು ಇಂಟ್ರೊಡಕ್ಷನ್​ ಸಾಂಗ್ ಇದಾಗಿದ್ದು, ವಿ. ಹರಿಕೃಷ್ಣ ಮಾಸ್ ಟ್ಯೂನ್ ಹಾಕಿದ್ದಾರೆ.. ಈಗಾಗಲೇ ದಚ್ಚು- ಹರಿಕೃಷ್ಣ ಕಾಂಬಿನೇಷನ್​ ಆಲ್ಬಮ್ಸ್​ ಸೂಪರ್ ಹಿಟ್​ ಆಗಿದ್ದು, ಯಜಮಾನ ಸಾಂಗ್ಸ್​ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ.

‘ಕುರುಕ್ಷೇತ್ರ’ ಕದನಕ್ಕೂ ಮೊದ್ಲೆ ‘ಯಜಮಾನ’ನ ದರ್ಬಾರ್..!
ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದ ದಿನ ಸಿನಿಮಾ ರಿಲೀಸ್..!
ದರ್ಶನ್​ 50ನೇ ಸಿನಿಮಾ ಅಂತ್ಲೇ ಬಿಂಬಿತವಾಗಿದ್ದ ಕುರುಕ್ಷೇತ್ರ ಪೋಸ್ಟ್ ಪ್ರೊಡಕ್ಷನ್ ತಡವಾಗ್ತಿದ್ದು, ಯಜಮಾನ ಸಿನಿಮಾ ಮೊದಲು ಬಿಡುಗಡೆಯಾಗ್ತಿದೆ. ಹಾಗಾಗಿ ಯಜಮಾನ, ದಚ್ಚು 50ನೇ ಸಿನಿಮಾ ಆಗೋದು ಪಕ್ಕಾ ಆಗಿದೆ. ಈಗಾಗಲೇ ಯಜಮಾನ ಸಾಂಗ್ಸ್​ ರಿಲೀಸ್​ಗೆ ಚಿತ್ರತಂಡ ಮುಂದಾಗಿದ್ದು, ಇನ್ನೆರಡು ವಾರದಲ್ಲಿ ಸಿನಿಮಾ ಸೆನ್ಸಾರ್ ಆಗಲಿದೆ. ಅದೇ ನಿಜವಾದ್ರೆ, ಫೆಬ್ರವರಿ 16ಕ್ಕೆ ದರ್ಶನ್​ ಹುಟ್ಟುಹಬ್ಬದ ಸಂಭ್ರಮದಲ್ಲಿ ತೆರೆಮೇಲೆ ಯಜಮಾನನ ದರ್ಬಾರ್ ಶುರುವಾಗಲಿದೆ.

ಯಜಮಾನ ನಂತ್ರ ಏಪ್ರಿಲ್​ ವೇಳೆಗೆ ಕುರುಕ್ಷೇತ್ರ ಸಿನಿಮಾ ತೆರೆಗೆ ಬರಲಿದೆ. ಈ ಪೌರಾಣಿಕ ಥ್ರಿಡಿ ಸಿನಿಮಾದಲ್ಲಿ ದರ್ಶನ್​ ದುರ್ಯೋಧನನ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಅಂಬರೀಶ್, ಅರ್ಜುನ್ ಸರ್ಜಾ, ರವಿಚಂದ್ರನ್, ರವಿಶಂಕರ್ ಸೇರಿದಂತೆ ಘಟಾನುಘಟಿ ಕಲಾವಿದರು ಕುರುಕ್ಷೇತ್ರ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಕುರುಕ್ಷೇತ್ರ ವೈಭವದ ನಂತ್ರ ದಸರಾ ವೇಳೆಗೆ ದರ್ಶನ್​​ ಒಡೆಯನಾಗಿ ಖದರ್ ತೋರಿಸೋಕೆ ಬರ್ತಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್​ ಅಭಿನಯದ ಇನ್ಸ್​​ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ದರ್ಶನ್ ಭಗತ್ ಸಿಂಗ್ ಅವತಾರದಲ್ಲಿ ಮಿಂಚಿದ್ದಾರೆ. ಈಗಾಗಲೇ ಅವ್ರ ಲುಕ್​ ಗಮನ ಸೆಳೆದಿದೆ. ಒಡೆಯ ರಿಲೀಸ್ ವೇಳೆಗೆ ಭಗತ್ ಸಿಂಗ್ ಭರಾಟೆ ಶುರುವಾಗಲಿದೆ. ಅಂಬಿ ಪುತ್ರ ಅಭಿಷೇಕ್ ನಟನೆಯ ಅಮರ್ ಸಿನಿಮಾದಲ್ಲೂ ದಚ್ಚು ಅತಿಥಿ ಪಾತ್ರದಲ್ಲಿ ಮಿಂಚಿದ್ದು, ಆ ಸಿನಿಮಾವೂ ಶೀಘ್ರದಲ್ಲೇ ತೆರೆಗೆ ಬರಲಿದೆ.

ಒಟ್ಟಾರೆ ವರ್ಷದಿಂದ ದರ್ಶನ್ ಸಿನಿಮಾ ತೆರೆಗೆ ಬರದೇ ಕಾದು ಕಾದು ಸುಸ್ತಾಗಿದ್ದ ಅಭಿಮಾನಿಗಳಿಗೆ ಈ ವರ್ಷ ಮನರಂಜನೆಯ ರಸದೌತಣ ಕಾದಿದೆ. ಸಿನಿಮಾ ರಿಲೀಸ್​ಗೂ ಮೊದ್ಲು ಪೋಸ್ಟರ್, ಟೀಸರ್, ಟ್ರೈಲರ್, ಸಾಂಗ್ಸ್ ರಿವೀಲ್ ಆಗಿ ವರ್ಷವಿಡೀ ದಚ್ಚು ಫ್ಯಾನ್ಸ್​​ಗೆ ಹಬ್ಬವೋ ಹಬ್ಬ.
ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.