ಕನ್ನಡದ ಕೆಜಿಎಫ್ ಮುಕುಟಕ್ಕೆ ಮತ್ತೊಂದು ಹೆಮ್ಮೆಯ ಗರಿ.!

ಕೆಜಿಎಫ್.ಕೆಜಿಎಫ್​​.ಕೆಜಿಎಫ್. ಸಿನಿಮಾ ರಿಲೀಸ್ ಆಗಿ ತಿಂಗಳುಗಳೇ ಸಮೀಪಿಸುತ್ತಿದ್ರು ಸಹ ಕೆಜಿಎಫ್ ಕ್ರೇಜ್​ ಮೊದಲ ದಿನದಷ್ಟೇ ಇದೆ. ವಿಶ್ವದಾದ್ಯಂತ ಗೆಲುವಿನ ನಗೆ ಬೀರಿ ಯಶಸ್ಸಿನ ನಾಗಲೋಟ ಮುಂದುವರೆಸಿರೋ ಕೆಜಿಎಫ್ ಹೊಸದೊಂದು ದಾಖಲೆ ಬರೆದಿದೆ. ಇದು ಕನ್ನಡ ಚಿತ್ರರಂಗ, ಕನ್ನಡಿಗರು ಅಕ್ಷರಶಃ ಹೆಮ್ಮೆ ಪಡಬೇಕಾದ ವಿಷಯ.

ಹೇಗಿದೆ ಪಾಕಿಸ್ತಾನದಲ್ಲಿ ತೆರೆಕಂಡ ಮೊದಲ ಕನ್ನಡ ಚಿತ್ರ KGF..?!
ಕೆಜಿಎಫ್ ಚಿತ್ರವನ್ನ ಅದ್ಧೂರಿಯಾಗಿ ವೆಲ್​ ಕಂ ಮಾಡಿಕೊಂಡ ಅಭಿಮಾನಿ ದೇವರುಗಳು ಸಿನಿಮಾವನ್ನ 200 ಕೋಟಿ ಕ್ಲಬ್ ಸೇರಿಸಿ ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಸಿನಿಮಾ ಹೊಸದೊಂದು ಮೈಲಿಗಲ್ಲು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ರು. ರಿಲೀಸ್​​ಗೂ ಮುನ್ನವೇ ಇದ್ದ ಕ್ರೇಜ್​​ನ್ನ ಮುಂದುವರೆಸಿಕೊಂಡು ಹೋಗುತ್ತಿರೋ ರಾಕಿ ಭಾಯ್. ಸಹೋದರ ರಾಷ್ಟ್ರ ಪಾಕಿಸ್ತಾನದಲ್ಲಿ ತೆರೆಕಾಣುವ ಮೂಲಕ ಹಿಸ್ಟ್ರಿ ಕ್ರಿಯೇಟ್ ಮಾಡಿದೆ.

ಕನ್ನಡದ ಕೆಜಿಎಫ್ ಮುಕುಟಕ್ಕೆ ಮತ್ತೊಂದು ಹೆಮ್ಮೆಯ ಗರಿ.!
ಪಾಕಿಸ್ತಾನದಲ್ಲಿ ತೆರೆಕಂಡ ಮೊಟ್ಟ ಮೊದಲ ಕನ್ನಡ ಸಿನಿಮಾ.!
ನಿಮ್ಗೆ ಈ ಸುದ್ದಿ ಕೇಳಿ ಆಶ್ಚರ್ಯ, ಅಚ್ಚರಿಯಾದ್ರು ಕೂಡ ಇದು ಸತ್ಯ. ಕೆಜಿಎಫ್​​ ಚಿತ್ರ ಪಾಕಿಸ್ತಾನದಲ್ಲಿ ತೆರೆಕಂಡು ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ. ಎಸ್.. ದಕ್ಷಿಣ ಭಾರತದ ಸಿನಿಮಾ ಇತಿಹಾಸ ಪುಟಗಳನ್ನ ತೆರೆದ್ರೆ ಇಲ್ಲಿವರೆಗೂ ಕನ್ನಡದ ಒಂದೇ ಒಂದು ಸಿನಿಮಾ ಪಾಕಿಸ್ತಾನದಲ್ಲಿ ತೆರೆಕಂಡಿಲ್ಲ. ಇದೀಗ ಕೆಜಿಎಫ್​​ ಆ ಕೊರತೆಯನ್ನ ನೀಗಿಸಿ, ಕನ್ನಡಿಗರು, ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತೆ ಮಾಡಿದೆ. ಈಗ ಹೇಳಿ ಇದಲ್ಲವೇ ನಮ್ಮ ಹೆಮ್ಮೆ, ಹಿರಿಮೆ.

ಪಾಕಿಸ್ತಾನದಲ್ಲಿ ಕನ್ನಡ ಸಿನಿಮಾವೊಂದು ಹೌಸ್​ ಫುಲ್ ಪ್ರದರ್ಶನ ಕಾಣುತ್ತಿರುವುದಲ್ಲದೆ, ಆನ್​ಲೈನ್​​ನಲ್ಲಿ ಕೆಜಿಎಫ್ ಟಿಕೆಟ್​​ಗಳು ಸೋಲ್ಡ್​ ಔಟ್ ಆಗುತ್ತಿದೆ. ಇನ್ನು ಸಿನಿಮಾ ನೋಡಿದವ್ರು ವಾವ್ ಎನ್ನುತ್ತಿದ್ದಾರೆ. ಬಾಲಿವುಡ್​ ಸಿನಿಮಾಗಳು ಪಾಕಿಸ್ತಾನದಲ್ಲಿ ರಿಲೀಸ್​ ಆಗೋದು ಕಾಮನ್​​ ಆಗಿತ್ತು. ಅದ್ರಲ್ಲೂ ಸಲ್ಮಾನ್, ಶಾರೂಕ್ ಸಿನಿಮಾ ಅಭಿಮಾನಿಗಳು ಪಾಕಿಸ್ತಾನದಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ. ಆಗೊಂದೋ ಈಗೊಂದೋ ಸೌತ್ ಸಿನಿಮಾ ಅಲ್ಲಿ ತೆರಕಂಡಿತ್ತು. ಬಟ್​ ಈಗ ಕನ್ನಡದ ಕೆಜಿಎಫ್ ಆ ಪಟ್ಟಿಗೆ ಸೇರ್ಕೊಂಡಿದೆ.

ಕೆಜಿಎಫ್​​ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಮೊದಲುಗಳನ್ನ ಸಾಕ್ಷಿಯಾಗಿದೆ. ಈಗ ಪಾಕಿಸ್ತಾನದಲ್ಲಿ ರಿಲೀಸ್ ಆದ ಮೊಟ್ಟ ಮೊದಲ ಕನ್ನಡ ಸಿನಿಮಾ ಅನ್ನೋ ದೊಡ್ಡ ಹೆಗ್ಗಳಿಕೆಯನ್ನು ತನ್ನ ಜೋಳಿಗೆಗೆ ಹಾಕಿಕೊಂಡಿದೆ. ಇನ್ನೂರು ಕೋಟಿ ಕ್ಲಬ್ ದಾಟಿರೋ ಕೆಜಿಎಫ್ ವಲ್ಡ್ ವೈಡ್ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನೂ ಯಾವೆಲ್ಲಾ ದಾಖಲೆ ಬರೆಯುತ್ತಾ ನೋಡ್ಬೇಕು.
ಭಾರತಿ ಜಾವಳ್ಳಿ, ಎಂಟಟ್ರೈನ್‌ಮೆಂಟ್ ಬ್ಯೂರೋ, ಟಿವಿ5 ಕನ್ನಡ