ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರ

ಕೊಡಗು: ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರ ನೆರವೇರಿಸಿದ ಅಪರೂಪದ ಘಟನೆ ಕೊಡಗಿನ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿ ನಡೆದಿದೆ.

ಗೋಣಿಕೊಪ್ಪದ ಕಾಲೇಜಿನ ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿಯಾಗಿರೋ ಶಾಲಿನಿ 9 ತಿಂಗಳ ತುಂಬುಗರ್ಭಿಣಿಯಾಗಿದ್ದು, ಕಾವೇರಿ ಕಾಲೇಜಿನ ಬೋಧಕರು, ವಿದ್ಯಾರ್ಥಿಗಳೆಲ್ಲ ಸೇರಿ ಶಾಲಿನಿಯ ಸೀಮಂತ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಶಾಲಿನಿಯ ಪತಿ ಭಾಗವಹಿಸಿ, ಸಂತಸಪಟ್ಟಿದ್ದು, ಅಪರೂಪದ ಕ್ಷಣಕ್ಕೆ ಗೋಣಿಕೊಪ್ಪ ಕಾವೇರಿ ಕಾಲೇಜು ಸಾಕ್ಷಿಯಾಗಿದೆ.