ವರ್ಷಾರಂಭದಲ್ಲೇ ಬೆಂಗಳೂರಿಗರಿಗೆ ವಾಟರ್ ಶಾಕ್..!

ಬೆಂಗಳೂರು: ಹೊಸವರ್ಷದ ಆರಂಭದಲ್ಲೇ ಬೆಂಗಳೂರಿಗರಿಗೆ ನೀರಿನ ಕಂಠಕ ಎದುರಾಗಿದೆ. ಬೆಂಗಳೂರು ಜಲಮಂಡಳಿ ನೀರಿನ ದರ ಹೆಚ್ಚಿಸಿ, ಸಿಲಿಕಾನ್ ಸಿಟಿ ಮಂದಿಗೆ ವಾಟರ್ ಶಾಕ್ ನೀಡಿದೆ.

ಶೀಘ್ರದಲ್ಲೇ ನೀರಿನ ದರ ಪರಿಷ್ಕರಣೆ ಆದೇಶ ಹೊರಡಿಸಲು ಮಂಡಳಿ ಸಿದ್ಧತೆ ನಡೆಸಿದ್ದು, ಜಲಮಂಡಳಿಯಲ್ಲಿ ನೀರಿನ ದರ ಹೆಚ್ಚಳದ ಕುರಿತು ಚರ್ಚೆ ನಡೆಸಿದೆ. ಶೇ.30-35ರಷ್ಟುದರ ಹೆಚ್ಚಿಸಲಿರುವ ಜಲಮಂಡಳಿ, ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ರೆಡಿಯಾಗಿದೆ.

ಇನ್ನು ಕೆಲ ದಿನಗಳಲ್ಲೇ ಜಲಮಂಡಳಿ ಸರ್ಕಾರಕ್ಕೆ ನೀರು ದರ ಹೆಚ್ಚಳ ಸಂಬಂಧ ಪ್ರಸ್ತಾವನೆ ಸಲ್ಲಿಸಲಿದ್ದು, ಈ ಹಿಂದೆ ಬೆಂಗಳೂರಿನಲ್ಲಿ 2014ರಲ್ಲಿ ನೀರಿನ ದರ ಹೆಚ್ಚಳ ಮಾಡಲಾಗಿತ್ತೆಂದು ಟಿವಿ5ಗೆ ಜಲಮಂಡಳಿ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ.