ಭೈರತಿ ರಣಗಲ್ ಎದುರು ಟಾಲಿವುಡ್​​ ಬಾಲಕೃಷ್ಣ ಆರ್ಭಟ

ಒಂದ್ಕಡೆ ಸ್ಯಾಂಡಲ್​ವುಡ್ ಲಿವಿಂಗ್ ಲೆಜೆಂಡ್​ ಡಾ. ಶಿವರಾಜ್​​ಕುಮಾರ್. ಮತ್ತೊಂದ್ಕಡೆ ಟಾಲಿವುಡ್ ಲಿವಿಂಗ್ ಲೆಜೆಂಡ್​​ ನಂದಮೂರಿ ಬಾಲಕೃಷ್ಣ. ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದ್ರೆ, ಅಭಿಮಾನಿಗಳಿಗೆ ಡಬಲ್ ಧಮಾಕ ಗ್ಯಾರೆಂಟಿ. ಆ ಟೈಮ್​ ಈಗ ಹತ್ತಿರವಾಗ್ತಿದೆ. ಈಗಾಗಲೇ ಬಾಲಯ್ಯನ ತೆಲುಗು ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದು ಆಗಿದೆ. ಸದ್ಯ ಕನ್ನಡದ ಸಿನಿಮಾದಲ್ಲಿ ಅದ್ರಲ್ಲೂ ಶಿವಣ್ಣನ ಎದುರು ಟಾಲಿವುಡ್​ ನಟಸಿಂಹ ನಟಿಸೋ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.

ಸಿಂಹ- ಸಿಂಹದ ಮರಿ ಅಖಾಡಕ್ಕೆ ಇಳಿದ್ರೆ ಹೇಗಿರುತ್ತೆ ಗೊತ್ತಾ..?!
ಸ್ಯಾಂಡಲ್​ವುಡ್​​ ಭೈರತಿ ರಣಗಲ್​ಗೆ ಟಾಲಿವುಡ್​​​ ಲೆಜೆಂಡ್ ಸವಾಲ್..!
ತೆಲುಗು ಚಿತ್ರರಂಗದ ದೊಡ್ಮನೆ ಮತ್ತು ಕನ್ನಡ ಚಿತ್ರರಂಗದ ದೊಡ್ಮನೆ ನಡುವೆ ಆತ್ಮೀಯ ಬಾಂಧವ್ಯ ಇದೆ. ಎನ್​ಟಿಆರ್​​​ ಮತ್ತು ಡಾ. ರಾಜ್​ ಸಹೋದರರಂತೆ ಇದ್ದವರು. ನಂತ್ರ,ಅವರ ಮಕ್ಕಳು ಆ ಸೋದರ ಬಾಂಧವ್ಯವನ್ನ ಮುಂದುವರೆಸಿಕೊಂಡು ಬರ್ತಿದ್ದಾರೆ. ಈಗಾಗಲೇ ಬಾಲಯ್ಯನ ಗೌತಮಿ ಪುತ್ರ ಶಾತಕರ್ಣಿ ಸಿನಿಮಾದಲ್ಲಿ ಶಿವಣ್ಣ ನಟಿಸಿ ಬಂದಿದ್ದಾರೆ. ಈಗ ಬಾಲಯ್ಯನ ಸರದಿ. ಶಿವಣ್ಣನ ಭೈರತಿ ರಣಗಲ್ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಬಣ್ಣ ಹಚ್ಚೋದು ಬಹುತೇಕ ಕನ್ಫರ್ಮ್​ ಆಗಿದೆ.

ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು ‘ಮಫ್ತಿ’ ಭೈರತಿ ರಣಗಲ್ ಪಾತ್ರ
ಆಧುನಿಕ ರಾವಣನ ಅವತಾರದಲ್ಲಿ ಕಮಾಲ್ ಮಾಡಿದ್ದ ಶಿವಣ್ಣ..!
ಮಫ್ತಿ.. ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಮತ್ತು ರೋರಿಂಗ್​ ಸ್ಟಾರ್ ಶ್ರೀಮುರಳಿ ಅಭಿನಯದ ಸೂಪರ್ ಹಿಟ್ ಮಲ್ಟಿಸ್ಟಾರರ್ ಸಿನಿಮಾ. ಈ ಹೈವೋಲ್ಟೇಜ್​ ಆ್ಯಕ್ಷನ್​ ಎಂಟ್ರಟ್ರೈನರ್ ಸಿನಿಮಾ ಬಾಕ್ಸಾಫೀಸ್​​ನಲ್ಲಿ ಧೂಳೆಬ್ಬಿಸಿತ್ತು. ಅದ್ರಲ್ಲೂ ಶಿವಣ್ಣನ ಭೈರತಿ ರಣಗಲ್ಲು ಪಾತ್ರ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಶಿವಣ್ಣ ನೆಗೆಟಿವ್ ಶೇಡ್​ ರೋಲ್​ನಲ್ಲಿ ಕಾಣಿಸಿಕೊಂಡ ಸಿನಿಮಾ ಅದು.. ಶಿವಣ್ಣನ ಗೆಟಪ್, ಸ್ಟೈಲ್, ಕಣ್ಣುಗಳಲ್ಲೇ ಎದುರಾಳಿಗಳನ್ನ ಕೊಲ್ಲುವ ಪರಿ ವಾಹ್.

ಕಣ್ಣುಗಳಲ್ಲೇ ವಿಲನಿಸಂ ಮತ್ತು ಹೀರೋಯಿಸಂ ಪ್ರದರ್ಶಿಸಿ, ಭೈರತಿ ರಣಗಲ್ ಅವತಾರದಲ್ಲಿ ಶಿವಣ್ಣ, ಸೂಪರ್ ಸಕ್ಸಸ್​ ಕಂಡ್ರು. ಭೈರತಿ ರಣಗಲ್ ಪಾತ್ರಕ್ಕೆ ಅಭಿಮಾನಿಗಳು ಹುಟ್ಟಿಕೊಂಡ್ರು ಅಂದ್ರೆ ತಪ್ಪಾಗಲ್ಲ. ಅಂದೇ ಮಫ್ತಿ ಸೀಕ್ವೆಲ್​ ಬಗ್ಗೆ ಮಾತುಗಳು ಕೇಳಿಬಂದ್ವು. ಶಿವಣ್ಣನ ಬ್ಯಾನರ್​​​ನಲ್ಲೇ ಭೈರತಿ ರಣಗಲ್ ಟೈಟಲ್​ ಸಹ ರಿಜಿಸ್ಟರ್ ಆಯ್ತು. ಅಂದು ಭೈರತಿ ರಣಗಲ್​​ ಪಾತ್ರ ಸೃಷ್ಟಿಸಿದ ಮಫ್ತಿ ಸಿನಿಮಾ ನಿರ್ದೇಶಕ ನರ್ತನ್​​, ಇದೀಗ ಭೈರತಿ ರಣಗಲ್ ಸಿನಿಮಾಗೆ ಕಥೆ ಹೆಣಿತ್ತಿದ್ದಾರೆ.

ಸೂಪರ್ ಹಿಟ್ ಮಫ್ತಿ ಪ್ರೀಕ್ವೆಲ್​​​​​​​ಗೆ ನಡೀತಿದೆ ಭರ್ಜರಿ ತಯಾರಿ
ಭೈರತಿ ರಣಗಲ್ ರಾಕ್ಷಸ ರೂಪದಲ್ಲಿ ಕರ್ತವ್ಯ ಮಾಡೋದ್ಯಾಕೆ..?
ಸಾಮಾನ್ಯವಾಗಿ ಒಂದು ಸಿನಿಮಾ ಹಿಟ್ ಆದ್ರೆ, ಆ ಸಿನಿಮಾ ಕಥೆಯನ್ನ ಮುಂದುವರೆಸಿ, ಪಾರ್ಟ್​-2 ಸಿನಿಮಾ ಮಾಡ್ತಾರೆ. ಆದ್ರೆ, ಕೆಲವೊಮ್ಮೆ ಪ್ರೀಕ್ವೆಲ್​ ಅಂತ ಹಿಂದಿನ ಭಾಗವನ್ನ ತೆರೆಗೆ ತರ್ತಾರೆ.. ಇದೀಗ ಭೈರತಿ ರಣಗಲ್​​ ವಿಚಾರದಲ್ಲೂ ಅದೇ ನಡೀತಿದೆ. ‘ಮಫ್ತಿ’ಯ ಪ್ರೀಕ್ವೆಲ್ ಆಗಿ ‘ಭೈರತಿ ರಣಗಲ್’ ಚಿತ್ರ ಮೂಡಿಬರಲಿದೆ. ಅಂದ್ರೆ, ಆ ಪಾತ್ರದ ಹಿನ್ನೆಲೆಯನ್ನೇ ಕೇಂದ್ರವಾಗಿಟ್ಟುಕೊಂಡು ಹೊಸ ಕಥೆ ಹೆಣೆಯುತ್ತಿದ್ದಾರೆ ನರ್ತನ್​. ಭೈರತಿ ರಣಗಲ್ ಅಂದರೆ ಯಾರು..? ಆತ ಯಾಕೆ ಡಾನ್ ಆದ ಅನ್ನೋ ಡೀಟೈಲ್ಸ್​​​​​ ಜೊತೆಗೆ ಈ ಕಥೆ ಸಾಗಲಿದೆ.

ಭೈರತಿ ರಣಗಲ್ ಎದುರು ಟಾಲಿವುಡ್​​ ಬಾಲಕೃಷ್ಣ ಆರ್ಭಟ
ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ ಈ ಮಲ್ಟಿಸ್ಟಾರರ್ ಸಿನಿಮಾ
ಭೈರತಿ ರಣಗಲ್ ಸಿನಿಮಾದಲ್ಲಿ ಶಿವಣ್ಣ ಯಂಗ್​​ ಶೇಡ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೈರತಿ ರಣಗಲ್​ ಸುತ್ತಾ ಸಾಕಷ್ಟು ತೂಕದ ಪಾತ್ರಗಳನ್ನ ನರ್ತನ್​ ಡಿಸೈನ್​ ಮಾಡ್ತಿದ್ದು, ಬಾಲಕೃಷ್ಣಗಂತ್ಲೇ ಒಂದು ರೋಲ್​​ನ ರೆಡಿ ಮಾಡಿದ್ದಾರೆ. ಈಗಾಗಲೇ ಬಾಲಯ್ಯ ಕಥೆ ಕೇಳಿದ್ದು, ನೈಂಟಿ ಪರ್ಸೆಂಟ್ ನಟಿಸೋದು ಪಕ್ಕಾ ಆಗಿದೆ. ಸುಮಾರು 15ರಿಂದ 20 ಸಿನಿಮಾಗಳ ಕಾಲ ಬಾಲಯ್ಯಭೈರತಿ ರಣಗಲ್ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ. ಪವರ್​ಫುಲ್​ ರೋಲ್​ಗಳಿಗೆ ಹೆಸರಾದ ಲೆಜೆಂಡ್​ ಬಾಲಯ್ಯ ಇಲ್ಲೂ ಅಂತದ್ದೇ ಪಾತ್ರದಲ್ಲಿ ಮಿಂಚುವ ಸಾಧ್ಯತೆಯಿದೆ.

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.