ಜ್ಯೂಸ್​ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ಯಾಚಾರ: ಸಾಫ್ಟ್ ವೇರ್ ಉದ್ಯೋಗಿ ಬಂಧನ

ಹಣ್ಣಿನ ಜ್ಯೂಸ್‌ ನಲ್ಲಿ ನಿದ್ದೆ ಮಾತ್ರೆ ಬೆರಸಿ 32 ವರ್ಷದ ರಾಂಚಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದೆಹಲಿಯ ಸಾಫ್ಟ್‌ವೇರ್ ಉದ್ಯೋಗಿ ಮೈಕೆಲ್ ಸೊರೆಂಗ್ ಎಂಬಾತನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ ಭಾನುವಾರ ದೂರು ಕೊಟ್ಟಿದ್ದರು. ಅತ್ಯಾಚಾರ ಐಪಿಸಿ 376 ಹಾಗೂ ವಂಚನೆ 420 ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ಮೈಕೆಲ್‌ನನ್ನು ಬೆಳಿಗ್ಗೆ ಬೆಳ್ಳಂದೂರಿನ ಆತನ ಫ್ಲ್ಯಾಟ್‌ನಲ್ಲೇ ಪೊಲೀಸರು ಆತನನ್ನು ವಶಕ್ಕೆ ಪಡೆದರು.

ಚರ್ಚ್‌ ಫಾದರ್‌ ಒಬ್ಬರ ಮೂಲಕ ಮೈಕೆಲ್‌ನ ಪರಿಚಯ

ನೀನಿನ್ನೂ ಚಿಕ್ಕವಳು, ವರ್ಷದ ಹಿಂದೆ ನಗರಕ್ಕೆ ಬಂದ ನಾನು, ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡಿಕೊಂಡು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಚರ್ಚ್‌ ಫಾದರ್‌ ಒಬ್ಬರ ಮೂಲಕ ಮೈಕೆಲ್‌ನ ಪರಿಚಯವಾಗಿತ್ತು. ಆತ ನನ್ನ ಮೊಬೈಲ್ ಸಂಖ್ಯೆ ಪಡೆದು ನಿತ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

ಕಳೆದ ಸೆಪ್ಟಂಬರ್ 8 ರಂದು ಊಟಕ್ಕೆಂದು‌ ಮನೆಗೆ ಆಹ್ವಾನಿಸಿ ಜ್ಯೂಸ್​ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಮದುವೆ ಹಾಗುವುದಾಗಿ ಹೇಳಿದ್ದರು ಆದರೆ ಇದೀಗ ನಿರಾಕರಿಸಿದ್ದು, ಹೀಗಾಗಿ ಪೊಲೀಸರ ಸಹಾಯ ಕೇಳುತ್ತಿದ್ದೇನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.