ಅಯೋಧ್ಯೆ ಅಸಲಿ ಆಟ..!-TV5 ಸ್ಪೇಷಲ್ ಸ್ಟೋರಿ

ಸುಪ್ರೀಂಕೋರ್ಟ್​ನಲ್ಲಿ ಮತ್ತೆ ಮತ್ತೆ ವಿಚಾರಣೆ ವಿಳಂವಾಗ್ತಿದ್ದು, ಅಯೋಧ್ಯೆ ರಾಮ ಮಂದಿರ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣ್ತಿಲ್ಲ. ಅದ್ರಲ್ಲೂ ಲೋಕಸಭಾ ಚುನಾವಣೆ ಹೊತ್ತಿಗೆ ತೀರ್ಪು ಬರೋದು ಡೌಟು, ರಾಮ ಮಂದಿರಕ್ಕೆ ಮುಹೂರ್ತವಿಡೋ ಬಿಜೆಪಿಯವರ ಕನಸು ನನಸಾಗೋದೂ ಡೌಟೇ ಅನ್ನುವಂತಾಗಿದೆ.

ಜೈ ಶ್ರೀ ರಾಮ್​ ಜೈ ಶ್ರೀ ರಾಮ್​ ಅನ್ನೋ ಕೂಗೂ ಉತ್ತರ ಭಾರತದಲ್ಲಿ ಮತ್ತೆ ಜೋರಾಗಿದೆ. ಶ್ರೀ ರಾಮಚಂದ್ರ ಪ್ರಭುಗೆ ಮಂದಿರ ಕಟ್ಟಲೇಬೇಕು ಅಂತ ಲಕ್ಷಾಂತರ ಹಿಂದೂಗಳು ಅಖಾಡಕ್ಕಿಳಿದಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಯೋಧ್ಯೆಯತ್ತ ಹರಿದು ಬರುತ್ತಲೇ ಇದ್ದಾರೆ. ಒಂದಲ್ಲ ಒಂದು ದಿನ ಅಯೋಧ್ಯೆ ರಾಮಜನ್ಮ ಭೂಮಿ ವಿವಾದ ಬಗೆಹರಿಯುತ್ತೆ. ರಾಮ ಮಂದಿರ ಕಟ್ಟುತ್ತೇವೆ ಅನ್ನೋ ಆಶಾಭಾವನೆಯಿಂದಲೇ ಇದ್ದಾರೆ. ಸಭೆ, ಸಮಾರಂಭ, ರಾಲಿಗಳನ್ನೂ ಮಾಡ್ತಿದ್ದಾರೆ.

ಲಕ್ಷಾಂತರ ಹಿಂದೂಗಳು ಶತ ಶತಮಾನಗಳ ಅಯೋಧ್ಯೆ ವಿವಾದ ಕೊನೆಗೊಳ್ಳುತ್ತೆ ಅಂತ ಎದುರು ನೋಡ್ತಾನೆ ಇದ್ದಾರೆ. ಆದ್ರೆ ಅಯೋಧ್ಯಾಕಾಂಡದ ಕಾನೂನು ಹೋರಾಟ ಮಾತ್ರ ಮತ್ತಷ್ಟು ಕಗ್ಗಂಟಾಗ್ತಿದೆ. ದಶಕಗಳಿಂದ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಮಾತ್ರ ಹೊರ ಬೀಳುತ್ತಿಲ್ಲ. ಪ್ರಕರಣದ ವಿಚಾರಣೆಯೇ ಮತ್ತೆ ಮತ್ತೆ ವಿಳಂಬವಾಗ್ತಿದೆ. ಇದೀಗ ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಪಂಚಸದಸ್ಯ ಪೀಠ ವಿಚಾರಣೆಯನ್ನ ಜನವರಿ 29ಕ್ಕೆ ಮುಂದೂಡಿದೆ. ಇದ್ರಿಂದ ಅಯೋಧ್ಯೆ ತೀರ್ಪು ಮತ್ತಷ್ಟು ವಿಳಂಬವಾಗೋದು ನಿಶ್ಚಿತವಾಗಿದೆ.

ಅಂದಹಾಗೆ, ವಕೀಲರಾದ ತುಶಾರ್​ ಮೆಹ್ತಾ, ಹರೀಶ್​ ಸಾಲ್ವೆ, ಸಿಎಸ್​​ ವೈದ್ಯನಾಥನ್​, ಪಿಎಸ್​​ ನರಸಿಂಹಾ ಹಿಂದುಗಳ ಪರ ಇದ್ದಾರೆ. ಹಾಗೆಯೇ ರಾಜೀವ್​ ಧವನ್​, ರಾಜು ರಾಮಚಂದ್ರನ್​, ದುಷ್ಯಂತ್​ ದಾವೆ, ಶೇಖರ್​ ನೇಫಡೆ, ಮೀನಾಕ್ಷಿ ಅರೋರಾ ಮುಸ್ಲಿಂ ಪರ ವಾದ ಮಾಡುತ್ತಿದ್ದಾರೆ. ಇನ್ನು ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆ ಏನು ಅಂತ ನೋಡಿದ್ರೆ, ಸುನ್ನಿ ವಕ್ಫ್​​ ಬೋರ್ಡ್​​, ನಿರ್ಮೋಹಿ ಅಖಾಡ ಹಾಗೂ ರಾಮಲಲ್ಲಾ ಟ್ರಸ್ಟ್​​ಗೆ ವಿವಾದಿತ ಪ್ರದೇಶದ 2.77 ಎಕರೆ ಜಾಗವನ್ನ ಸಮಾನಾಗಿ ಹಂಚಿ ಅಲಹಾಬಾದ್​ ಹೈಕೋರ್ಟ್​​ 2010ರಲ್ಲಿ ಆದೇಶ ಹೊರಡಿಸಿತ್ತು. ಇದನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ 14 ಅರ್ಜಿಗಳು ಸಲ್ಲಿಕೆ ಆಗಿವೆ. ಇದೇ ವಿಚಾರಣೆ ಇದೀಗ ನಡೆಯುತ್ತಿದೆ.

ಅಯೋಧ್ಯೆ ಪ್ರಕರಣದಲ್ಲಿ ರಚಿಸಲ್ಪಟ್ಟ ಪಂಚ ಪೀಠದಿಂದ ನ್ಯಾಯಮೂರ್ತಿ ಉದಯ್​ ಲಲಿತ್​ ಹಿಂದೆ ಸರಿದಿದ್ದು, ಪ್ರಕರಣದ ವಿಚಾರಣೆ ಜ.29ಕ್ಕೆ ಮುಂದೂಡಲ್ಪಟ್ಟಿದೆ. ಜ.4ರಂದು ಒಂದೇ ನಿಮಿಷದಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ರಂಜನ್​ ಗೊಗೊಯ್​ ನೇತೃತ್ವದ ಪೀಠ, “ಅಯೋಧ್ಯೆ ಪ್ರಕರಣದ ತನಿಖೆ ವಿಚಾರದಲ್ಲಿ ಮುಂದಿನ ಆದೇಶವನ್ನ ಜನವರಿ 10ರಂದು ನೀಡಲಾಗುವುದು” ಎಂದಿತ್ತು. ಅಲ್ಲದೆ, ಪ್ರಕರಣವನ್ನು ಹೊಸ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡುವುದಾಗಿ ಮಂಗಳವಾರ ತಿಳಿಸಿತ್ತು. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಹೊಸ ಪೀಠದಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್​, ಉದಯ್​ ಲಲಿತ್​, ಎಸ್​.ಎ ಬೊಬ್ಡೆ, ಎಸ್​.ವಿ. ರಮಣ್​ ಇದ್ದರು. ಆದರೆ, ಈ ಪೀಠದಿಂದ ಈಗ ಉದಯ್ ಲಲಿತ್ ಹಿಂದೆ ಸರಿದಿದ್ದಾರೆ.

ಅಯೋಧ್ಯೆ ಪ್ರಕರಣದಿಂದ ನ್ಯಾ. ಉದಯ್​ ಲಲಿತ್​ ಹಿಂದೆ ಸರಿದಿದ್ಯಾಕೆ ಅಂತ ನೋಡಿದ್ರೆ, 1994ರಲ್ಲಿ ಉದಯ್​ ಲಲಿತ್​ ಇದೇ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಬಿಜೆಪಿನಾಯಕ ಕಲ್ಯಾಣ್​ ಸಿಂಗ್​ ಪರ ಇದೇ ಉದಯ್​ ಲಲಿತ್​ ವಕೀಲರಾಗಿ ವಾದ ಮಂಡಿಸಿದ್ರು.. ಇದೀಗ ಅದೇ ಉದಯ್​ ಲಲಿತ್​ ಜಡ್ಜ್​ ಆಗಿದ್ದು, ಅವ್ರು ಈ ಪ್ರಕರಣದಲ್ಲಿ ತೀರ್ಪು ಕೊಡೋದು ಎಷ್ಟು ಸರಿ ಅಂತ ಮುಸ್ಲಿಂ ಪರ ವಕೀಲರು ಆಕ್ಷೇಪಿಸಿದ್ರು.. ಹಾಗಾಗಿ, ಅವರು ಈ ಪೀಠದಿಂದ ಹಿಂದೆ ಸರಿದಿದ್ದಾರೆ. ಈಗ ಸಾಂವಿಧಾನಿಕ ಪೀಠವನ್ನು ಪುನಃ ರಚಿಸಬೇಕಿದೆ. ಈ ಕಾರಣಕ್ಕೆ ಅರ್ಜಿ ವಿಚಾರಣೆ ಮುಂದೂಡಲ್ಟಟ್ಟಿದೆ.

ಮುಸ್ಲಿಂ ಅರ್ಜಿದಾರರ ಪರ ವಕೀಲರು ನೋಡಿದ್ರೆ, ಪ್ರಕರಣ ವಿಳಂಬವಾದ್ರೂ ಸರಿಯೇ ನ್ಯಾಯ ಸಿಗಬೇಕು ಅಂತಾರೆ. ಇದ್ರಿಂದ ಕೆರಳಿರುವ ಹಿಂದೂ ಪರ ಸಂಘಟನೆಗಳು, ಸ್ವಾಮೀಜಿಗಳು ತಕರಾರು ಅರ್ಜಿದಾರರ ವಾದಕ್ಕೆ ಕಿಡಿಕಾರುತ್ತಿದ್ದಾರೆ. ಆದಷ್ಟು ಬೇಗ ಅಯೋಧ್ಯೆ ಪ್ರಕರಣ ಇತ್ಯರ್ಥವಾಗಬೇಕು ಅಂತ ಆಗ್ರಹಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಸ್ವಾಮೀಜಿಗಳು ಸುಪ್ರೀಂ ತೀರ್ಪುಗಾಗಿ ತುದಿಗಾಲಿನ ಮೇಲೆ ನಿಂತಿದ್ದಾರೆ. ಪದೇ ಪದೇ ವಿಚಾರಣೆ ಮುಂದೂಡಿಕೆಯಾಗ್ತಿರೋದಕ್ಕೆ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿದೆ.

ಏನೇ ಮಾಡಿದ್ರೂ ಅಯೋಧ್ಯೆ ವಿವಾದ ಲೋಕಸಭಾ ಚುನಾವಣೆಯೊಳಗೆ ಮುಗಿಯುವ ಲಕ್ಷಣ ಕಾಣ್ತಿಲ್ಲ. ಇದ್ರಿಂದ ಬಿಜೆಪಿಯವರ ಕನಸು ಭಗ್ನವಾಗೋ ಆತಂಕ ಮೂಡಿಸಿದೆ. ರಾಮ ಮಂದಿರ ಹೆಸರಲ್ಲೇ ರಾಜಕೀಯ ಮಾಡ್ತಿರೋ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗ್ತಿದೆ. ಲೋಕಸಭಾ ಚುನಾವಣೆಗೆ ಇನ್ನು ಕೇವಲ 2 ತಿಂಗಳು ಬಾಕಿ ಇದ್ದು, ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್​​ನ ಆದೇಶ ಬಂದ ನಂತರ ರಾಮ ಮಂದಿರದ ಬಗ್ಗೆ ಚಿಂತನೆ ಮಾಡುವುದಾಗಿ ಹೇಳಿದ್ದರು. ಆದ್ರೀಗ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ವಿಳಂಬವಾಗ್ತಿದ್ದು, ಮೋದಿ ಮೇಲೆ ತೂಗುಗತ್ತಿ ನೇತಾಡುತ್ತಿದೆ.

ಅಯೋಧ್ಯೆ ತೀರ್ಪು ಪದೇ ಪದೇ ಮುಂದೂಡಿಕೆಯಾಗ್ತಿದ್ದು, ಬಿಜೆಪಿಗೆ ಹಿನ್ನಡೆಯಾಗ್ತಿದೆ. ರಾಮ ಮಂದಿರ ಕಟ್ಟಲೇಬೇಕು ಅನ್ನೋ ಒತ್ತಡ ಜೋರಾಗಿದೆ. ಇದಕ್ಕೆ ಮೋದಿ ಮಣಿದು ಕೊನೆಗೂ ಸುಗ್ರೀವಾಜ್ಞೆ ತರ್ತಾರಾ..? ಅದ್ನ ಹೇಳ್ತೀವಿ ಸ್ಮಾಲ್​ ಬ್ರೇಕ್​ ನಂತರ

ಅಯೋಧ್ಯೆಯಲ್ಲಿ 2019ರ ಲೋಕಸಭಾ ಚುನಾವಣೆಯೊಳಗೆ ರಾಮ ಮಂದಿರ ಕಟ್ಟಲೇಬೇಕು ಅನ್ನೋದು ಹಿಂದೂ ಸಂಘಟನೆಗಳ ಆಗ್ರಹ.. ಆದ್ರೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ವಿಳಂಬವಾಗ್ತಿದೆ. ಹೀಗಾಗಿ ಈಗಲಾದ್ರೂ ರಾಮ ಮಂದಿರಕ್ಕಾಗಿ ಸುಗ್ರೀವಾಜ್ಞೆ ತನ್ನಿ ಅಂತ ಹಿಂದೂ ಸಂಘಟನೆಗಳು ಮೋದಿ ಸರ್ಕಾರದ ಮೇಲೆ ಒತ್ತಡ ತರುತ್ತಿವೆ..

ರಾಮಜನ್ಮಭೂಮಿ ಅಯೋಧ್ಯೆ, ಆಧ್ಯಾತ್ಮಿಕತೆಗೆ ಎಷ್ಟು ಖ್ಯಾತಿಯೂ, ವಿವಾದಗಳಿಗೂ ಅಷ್ಟೇ ಫೇಮಸ್​.. ಅಯೋಧ್ಯೆ ಅಂದ್ರೆ ಅದೆಷ್ಟೋ ಮಂದಿ ಇಂದಿಗೂ ನಿದ್ದೆಯಲ್ಲೂ ಬೆಚ್ಚಿ ಬೀಳ್ತಾರೆ.. ಯಾಕಂದ್ರೆ ಅಯೋಧ್ಯೆ ಕೇವಲ ಧಾರ್ಮಿಕ ಕೇಂದ್ರವಾಗಿಯಷ್ಟೇ ಉಳಿದಿಲ್ಲ, ವಿವಾದಗಳ ತಾಣವಾಗಿ ಎಂದೋ ಮಾರ್ಪಟ್ಟಿದೆ. ಇದು ನಿನ್ನೆ ಮೊನ್ನೆಯ ವಿವಾದವಲ್ಲ.. ಶತ ಶತಮಾನಗಳಿಂದಲೂ ಅಯೋಧ್ಯೆ ರಾಮ ಮಂದಿರ ವಿವಾದ ಬಗೆಹರಿಯದ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ.. ಅದೆಷ್ಟೋ ಜನ್ರು ಅಯೋಧ್ಯೆ ಕಿಚ್ಚಿಗೆ ಬಲಿಯಾಗಿ ಹೋಗಿದ್ದಾರೆ.. ಸಾಕಷ್ಟು ಆಸ್ತಿ ಪಾಸ್ತಿ ನಷ್ಟವಾಗಿದೆ. ಏನೇ ಆದ್ರೂ ಸಮಸ್ಯೆ ಮಾತ್ರ ಇತ್ಯರ್ಥವಾಗಿಲ್ಲ.. ಬದಲಾಗಿ ಮತ್ತಷ್ಟು ಬೆಳೆಯುತ್ತಲೇ ಇದೆ.

ಏನೇ ಮಾಡಿದ್ರೂ ಅಯೋಧ್ಯೆ ವಿವಾದ ಲೋಕಸಭಾ ಚುನಾವಣೆಯೊಳಗೆ ಮುಗಿಯುವ ಲಕ್ಷಣ ಕಾಣ್ತಿಲ್ಲ.. ಇದ್ರಿಂದ ಬಿಜೆಪಿಯವರ ಕನಸು ಭಗ್ನವಾಗೋ ಆತಂಕ ಮೂಡಿಸಿದೆ. ರಾಮ ಮಂದಿರ ಹೆಸರಲ್ಲೇ ರಾಜಕೀಯ ಮಾಡ್ತಿರೋ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗ್ತಿದೆ. ಲೋಕಸಭಾ ಚುನಾವಣೆಗೆ ಇನ್ನು ಕೇವಲ 2 ತಿಂಗಳು ಬಾಕಿ ಇದ್ದು, ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್​​ನ ಆದೇಶ ಬಂದ ನಂತರ ರಾಮ ಮಂದಿರದ ಬಗ್ಗೆ ಚಿಂತನೆ ಮಾಡುವುದಾಗಿ ಹೇಳಿದ್ದರು. ಆದ್ರೀಗ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ವಿಳಂಬವಾಗ್ತಿದ್ದು, ಮೋದಿ ಮೇಲೆ ತೂಗುಗತ್ತಿ ನೇತಾಡುತ್ತಿದೆ..

ಪ್ರಧಾನಿ ನರೇಂದ್ರ ಮೋದಿ ಬಹುದಿನಗಳ ಕನಸು ಅಂದ್ರೆ ರಾಮರಾಜ್ಯ ಸ್ಥಾಪಿಸೋದು.. ಇದ್ರ ಒಂದು ಭಾಗವೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ.. ಇದು ಬರೀ ಮೋದಿ ಒಬ್ಬರ ಕನಸು ಮಾತ್ರ ಅಲ್ಲ.. ಇಡೀ ಕೇಸರಿ ಪಡೆಯ ಹಲವು ವರ್ಷಗಳ ಕನಸು.. ಶತಾಯ ಗತಾಯ ಅಯೋಧ್ಯೆಯಲ್ಲಿ ಮತ್ತೆ ರಾಮ ಮಂದಿರ ನಿರ್ಮಾಣ ಮಾಡಬೇಕು ಅನ್ನೋದು ಅವ್ರ ಮುಖ್ಯ ಗುರಿ.. ಈ ಮೂಲಕ ಹಿಂದುತ್ವವನ್ನ ಉಳಿಸಿಕೊಂಡು ಮುನ್ನಡೆಸಿಕೊಂಡು ಹೋಗೋದೇ ಬಿಜೆಪಿ ಅಯೋಧ್ಯೆ ಅಜೆಂಡಾ.. ಇದ್ರ ಜೊತೆಯಲ್ಲೇ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಬಾರಿಸಬೇಕು ಅನ್ನೋದು ಮೋದಿ ಅಂಡ್​ ಟೀಂ ಮುಖ್ಯ ಗುರಿ..

ಅಂದಹಾಗೆ, 2019ರ ಲೋಕಸಭೆ ಚುನಾವಣೆ ಸಮೀಪಿಸಿರುವಂತೆ ಅಯೋಧ್ಯೆ ಪ್ರಕರಣ ಸಂಬಂಧ ರಾಜಕೀಯ ಲೆಕ್ಕಾಚಾರಗಳು ಕೂಡ ಗರಿಗೆದರಿವೆ. 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ 2014ರ ಚುನಾವಣೆಯಲ್ಲಿ 71 ಸ್ಥಾನ ತನ್ನದಾಗಿಸಿಕೊಂಡಿದ್ದ ಬಿಜೆಪಿ, ಭಾರಿ ಗೆಲುವನ್ನು ದಾಖಲಿಸಿತ್ತು. 2019ರ ಚುನಾವಣೆಗೆ ಅಭಿವೃದ್ಧಿ ಮಂತ್ರದೊಂದಿಗೆ ರಾಮಮಂತ್ರವನ್ನು ಜಪಿಸಿ ಹೆಚ್ಚು ಸೀಟುಗಳನ್ನು ತನ್ನದಾಗಿಸಿಕೊಳ್ಳುವ ತಂತ್ರಗಾರಿಕೆ ಬಿಜೆಪಿಯದ್ದು. ಈ ಮಧ್ಯೆ ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿಕೊಂಡಿದ್ದು, ನ್ಯಾಯಾಲಯದ ತೀರ್ಪು ಮಂದಿರ ನಿರ್ವಣದ ಪರವಾಗಿ ಬಂದರೆ ದೊಡ್ಡ ಪೇಚು ಅನುಭವಿಸಲಿದೆ. ಅದೇನಿದ್ದರೂ, 2019ರ ಚುನಾವಣೆಯನ್ನು ರಾಮ ಮತ್ತು ಅಯೋಧ್ಯೆ ವಿಷಯ ಆವರಿಸಿಕೊಳ್ಳುವುದಂತೂ ಖಚಿತ.

ಇದು 1990ರಲ್ಲಿ ಅಯೋಧ್ಯೆ ರಾಮ ಮಂದಿರಕ್ಕಾಗಿ ಬಿಜೆಪಿ ಭೀಷ್ಮ ಎಲ್​.ಕೆ.ಅಡ್ವಾಣಿ ನೇತೃತ್ವದಲ್ಲಿ ಹುಟ್ಟಿಕೊಂಡ ಹೋರಾಟವಿದು.. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಪರ ಜನಬೆಂಬಲ ರೂಪಿಸಲು ಎಲ್​.ಕೆ.ಅಡ್ವಾಣಿ ದೇಶಾದ್ಯಂತ ರಥಯಾತ್ರೆ ನಡೆಸಿದ್ರು.. ಬಿಹಾರದಲ್ಲಿ ಅಡ್ವಾಣಿ ಬಂಧನವಾದ್ರೂ ಅವರು ಹಚ್ಚಿದ ಹೋರಾಟದ ಕಿಚ್ಚಿಗೆ ವಿಎಚ್​ಪಿ, ಆರ್​ಎಸ್​ಎಸ್​ ಸೇರಿದಂತೆ ಹಲವು ಸಂಘಟನೆಗಳು ಕೈ ಜೋಡಿಸಿದ್ದವು.. 1992ರ ಹೊತ್ತಿಗೆ ಈ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. 1992 ಡಿಸೆಂಬರ್​ 2ರಂದು ರಾಮ ಜನ್ಮಭೂಮಿಯ ವಿವಾದಿತ ಬಾಬ್ರಿ ಮಸೀದಿಯನ್ನ ಧ್ವಂಸಗೊಳಿಸಲಾಯ್ತು.. ಇದು ಇಡೀ ದೇಶವೇ ಹೊತ್ತಿ ಉರಿಯುವಂತೆ ಮಾಡಿತ್ತು.. ಇದೀಗ ಸುಪ್ರೀಂಕೋರ್ಟ್​ನಲ್ಲಿ ಅಯೋಧ್ಯೆ ಪ್ರಕರಣ ಮತ್ತೆ ತಡವಾಗ್ತಿದ್ದು, ಇದೀಗ ಅಂಥದ್ದೇ ಹೋರಾಟ ಮಾಡಲು ಆರ್​ಎಸ್​ಎಸ್​ ಸಜ್ಜಾಗಿದೆ.

ಲಕ್ಷಾಂತರ ಹಿಂದೂಗಳು ಶತ ಶತಮಾನಗಳ ಅಯೋಧ್ಯೆ ವಿವಾದ ಕೊನೆಗೊಳ್ಳುತ್ತೆ ಅಂತ ಎದುರು ನೋಡ್ತಾನೆ ಇದ್ದಾರೆ. ಆದ್ರೆ ಅಯೋಧ್ಯಾಕಾಂಡದ ಕಾನೂನು ಹೋರಾಟ ಮಾತ್ರ ಮತ್ತಷ್ಟು ಕಗ್ಗಂಟಾಗ್ತಿದೆ. ದಶಕಗಳಿಂದ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಮಾತ್ರ ಹೊರ ಬೀಳುತ್ತಿಲ್ಲ.. ಪ್ರಕರಣದ ವಿಚಾರಣೆಯೇ ಮತ್ತೆ ಮತ್ತೆ ವಿಳಂಬವಾಗ್ತಿದೆ.. ಇದೀಗ ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಪಂಚಸದಸ್ಯ ಪೀಠ ವಿಚಾರಣೆಯನ್ನ ಜನವರಿ 29ಕ್ಕೆ ಮುಂದೂಡಿದೆ.. ಇದ್ರಿಂದ ಅಯೋಧ್ಯೆ ತೀರ್ಪು ಮತ್ತಷ್ಟು ವಿಳಂಬವಾಗೋದು ನಿಶ್ಚಿತವಾಗಿದೆ.

ಸುಪ್ರೀಂಕೋರ್ಟ್​ನಲ್ಲಿ ಅಯೋಧ್ಯೆ ವಿಚಾರಣೆ ವಿಳಂಬವಾಗ್ತಿದ್ರೂ, ಶತಾಯ ಗತಾಯ ರಾಮ ಮಂದಿರ ಕಟ್ಟಲೇಬೇಕು ಅಂತ ಹಿಂದೂ ಪರ ಸಂಘಟನೆಗಳು ಪಣತೊಟ್ಟಿವೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಮಾದರಿ ಕೂಡ ತಲೆ ಎತ್ತಿ ನಿಂತಿದ್ದು, ತೀರ್ಪು ಬಂದ ಕೂಡಲೇ ಶರವೇಗದಲ್ಲಿ ಮಂದಿರ ಕಟ್ಟೋದಕ್ಕೆ ಸಿದ್ಧತೆ ಪೂರ್ಣಗೊಂಡಿದೆ.

ಸುಪ್ರೀಂಕೋರ್ಟ್​ನಲ್ಲಿ ಅಯೋಧ್ಯೆ ವಿಚಾರಣೆ ವಿಳಂಬವಾಗ್ತಿದ್ದು, ರಾಮ ಮಂದಿರ ಹೋರಾಟ ಜೋರಾಗಿದೆ. ಶತಾಯ ಗತಾಯ ರಾಮ ಮಂದಿರ ಕಟ್ಟಲೇಬೇಕು ಅಂತ ಹಿಂದೂ ಪರ ಸಂಘಟನೆಗಳು ಪಣತೊಟ್ಟಿವೆ. ಈ ಮಧ್ಯೆ ಅಯೋಧ್ಯೆಯಲ್ಲಿ ರಾಮ ಮಂದಿರದ ಮಾದರಿ ಕೂಡ ತಲೆ ಎತ್ತಿ ನಿಂತಿದೆ.. ತೀರ್ಪು ಬಂದಿದ್ದೇ ತಡ ಶರವೇಗದಲ್ಲಿ ಮಂದಿರ ಕಟ್ಟೋದಕ್ಕೆ ಸಿದ್ಧತೆಪೂರ್ಣಗೊಂಡಿದೆ.

ಸುಪ್ರೀಂಕೋರ್ಟ್​ನಲ್ಲಿ ಅಯೋಧ್ಯೆ ವಿಚಾರಣೆ ವಿಳಂಬವಾಗ್ತಿದ್ರೂ, ಶತಾಯ ಗತಾಯ ರಾಮ ಮಂದಿರ ಕಟ್ಟಲೇಬೇಕು ಅಂತ ಹಿಂದೂ ಪರ ಸಂಘಟನೆಗಳು ಪಣತೊಟ್ಟಿವೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಮಾದರಿ ಕೂಡ ತಲೆ ಎತ್ತಿ ನಿಂತಿದ್ದು, ತೀರ್ಪು ಬಂದ ಕೂಡಲೇ ಶರವೇಗದಲ್ಲಿ ಮಂದಿರ ಕಟ್ಟೋದಕ್ಕೆ ಸಿದ್ಧತೆಪೂರ್ಣಗೊಂಡಿದೆ.. ಈ ನಡುವೆ ಸಂತಸಮಾಜ ಮಂದಿರ ನಿರ್ಮಾಣಕ್ಕಾಗಿ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ತಡಮಾಡದೆ ಮಂದಿರ ನಿರ್ಮಾಣ ಮಾಡಲು ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ.

ಇದೇ ನೋಡಿ ಅಯೋಧ್ಯೆಯಲ್ಲಿ ತಲೆ ಎತ್ತಲಿರೋ ಭವ್ಯ ರಾಮ ಮಂದಿರ.. ಅದ್ಯಾವ ಮಂದಿರಕ್ಕಾಗಿ ಹೋರಾಟಗಳು ನಡೆಯುತ್ತಿದ್ದವೋ ಅದೇ ರಾಮ ಮಂದಿರ ಹೇಗಿರಬೇಕು ಅನ್ನೋ ಮಾದರಿ ಸಿದ್ದವಾಗಿದ್ದು ತಲೆ ಎತ್ತಿ ನಿಂತಿದೆ. ಎರಡು ಅಂತಸ್ತಿನ ಭವ್ಯ ಮಂದಿರದ ಮಾದರಿ ಸಿದ್ಧವಾಗಿದ್ದು, ವಿವಾದ ಬಗೆ ಹರಿದ ಕೂಡಲೇ ಮಂದಿರ ನಿರ್ಮಾಣವಾಗಲಿದೆ. ಇದೇ ರೀತಿ ರಾಮ ಮಂದಿರ ತಲೆ ಎತ್ತಲಿದ್ದು, ಇದಕ್ಕೆ ಉತ್ತರ ಪ್ರದೇಶ ಸರ್ಕಾರವೂ ಒಪ್ಪಿಗೆ ಕೊಟ್ಟಿದೆ. ಇಡೀ ದೇಶವೇ ಕುತೂಹಲದಿಂದ ಎದುರು ನೋಡ್ತಿರೋ ರಾಮ ಮಂದಿರ ಹೀಗಿರುತ್ತೆ ಅನ್ನೋ ಎಕ್ಸ್​ಕ್ಲೂಸಿವ್​ ದೃಶ್ಯಗಳನ್ನ ರಾಷ್ಟ್ರೀಯ ಮಾಧ್ಯಮವೊಂದು ಚಿತ್ರೀಕರಿಸಿದೆ..


ಹೌದು, ರಾಮ ಮಂದಿರ ಮಾದರಿ ಸಿದ್ಧವಾಗಿದ್ದು, ಇದಕ್ಕಾಗಿ ಕೆತ್ತನೆ ಕಾರ್ಯವೂ ಭರದಿಂದ ಸಾಗಿದೆ.. ಎರಡು ಅಂತಸ್ತಿನ ಭವ್ಯ ಮಂದಿರ ನಿರ್ಮಾಣವಾಗಲಿದ್ದು, ಮೊದಲ ಅಂತಸ್ತಿನಲ್ಲಿ 107 ಸ್ತಂಭಗಳಿರಲಿವೆ.. ಅದೇ ರೀತಿ ಎರಡನೇ ಮಹಡಿಯಲ್ಲೂ 107 ಸ್ತಂಭಗಳಿರಲಿವೆ.. ಪದ್ಮಪೀಠದ ಮೇಲೆ ಮಂದಿರ ತಲೆ ಎತ್ತಲಿದ್ದು, ಕೆಳ ಅಂತಸ್ತಿನ ಗರ್ಭ ಗುಡಿಯಲ್ಲಿ 107 ಸ್ತಂಭಗಳ ಮಧ್ಯೆ ಶ್ರೀರಾಮ ಸೀತೆ, ಲಕ್ಷಣ್ಮರ ಅಮೃತಶಿಲೆಯ ವಿಗ್ರಹ ಇರಲಿದೆ..

ಇನ್ನು ಎರಡನೆೇ ಅಂತಸ್ತಿನಲ್ಲಿ ಶ್ರೀರಾಮನ ಜೀವನ ಚರಿತ್ರೆ ಸಾರುವ ದರ್ಬಾರ್​ ಹಾಲ್​ ಇರಲಿದೆ..
ರಾಮ ಮಂದಿರಕ್ಕಾಗಿ ರಾಮಘಾಟ್​ನ ರಾಮಮಂದಿರ ಕಾರ್ಯಶಾಲೆಯಲ್ಲಿ ಉತ್ತರಪ್ರದೇಶ, ರಾಜಸ್ಥಾನ, ಗುಜರಾತ್​ನ ಶಿಲ್ಪಿಗಳು ದಿನಕ್ಕೆ 12 ಗಂಟೆಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದೊಮ್ಮೆ ಮಂದಿರ ನಿರ್ಮಾಣಕ್ಕೆ ಅವಕಾಶ ಸಿಕ್ಕಿದರೆ ಕೇವಲ 48 ಗಂಟೆಗಳ ಅವಧಿಯಲ್ಲಿ ಬುನಾದಿ ನಿರ್ವಿುಸಲು ನೆಲ ಅಗೆಯುವ ಕೆಲಸ ಪೂರ್ಣಗೊಳ್ಳಲಿದೆ. ಮಂದಿರಕ್ಕೆ ಬೇಕಾದ ಶೇಕಡ 85ರಷ್ಟು ಕಲ್ಲಿನ ಕೆತ್ತನೆ ಕಾರ್ಯಗಳು ಪೂರ್ಣಗೊಂಡಿವೆ.

ಮಂದಿರದ ಈಗಿನ ನಕ್ಷೆ ಪ್ರಕಾರ ಇಲ್ಲಿ ಒಟ್ಟು 212 ಕಲ್ಲಿನ ಕಂಬಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಒಟ್ನಲ್ಲಿ ಅಯೋಧ್ಯೆಯಲ್ಲಿ ಆಂದೋಲನ ಜೋರಾಗಿದ್ದು, ಶತಾಯ ಗತಾಯ ಮೂರು ತಿಂಗಳೊಳಗೆ ರಾಮ ಮಂದಿರ ಕಟ್ಟಬೇಕು ಅನ್ನೋ ಕೂಗು ಜೋರಾಗಿದೆ.. ಆದ್ರೆ ಸುಪ್ರೀಂಕೋರ್ಟ್​ನಲ್ಲಿ ಮತ್ತೆ ಮತ್ತೆ ವಿಚಾರಣೆ ವಿಳಂಬವಾಗ್ತಿದ್ದು, ಅಯೋಧ್ಯೆ ರಾಮ ಮಂದಿರ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣ್ತಿಲ್ಲ. ಅದ್ರಲ್ಲೂ ಲೋಕಸಭಾ ಚುನಾವಣೆ ಹೊತ್ತಿಗೆ ತೀರ್ಪು ಬರೋದು ಡೌಟು, ರಾಮ ಮಂದಿರಕ್ಕೆ ಮುಹೂರ್ತವಿಡೋ ಬಿಜೆಪಿಯವರ ಕನಸು ನನಸಾಗೋದೂ ಡೌಟೇ ಅನ್ನುವಂತಾಗಿದೆ.

ಏನೇ ಮಾಡಿದ್ರೂ ಅಯೋಧ್ಯೆ ವಿವಾದ ಲೋಕಸಭಾ ಚುನಾವಣೆಯೊಳಗೆ ಮುಗಿಯುವ ಲಕ್ಷಣ ಕಾಣ್ತಿಲ್ಲ.. ಇದ್ರಿಂದ ಬಿಜೆಪಿಯವರ ಕನಸು ಭಗ್ನವಾಗೋ ಆತಂಕ ಮೂಡಿಸಿದೆ. ರಾಮ ಮಂದಿರ ಹೆಸರಲ್ಲೇ ರಾಜಕೀಯ ಮಾಡ್ತಿರೋ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗ್ತಿದೆ. ಹೀಗಾಗಿ ಹಿಂದೂ ಪರ ಸಂಘಟನೆಗಳ ಒತ್ತಾಯಕ್ಕೆ ಮಣಿದು ಲೋಕಸಭೇ ಚುನಾವಣೆಯೊಳಗೆ ಮೋದಿ ರಾಮ ಮಂದಿರ ಕಟ್ಟಲು ಸುಗ್ರೀವಾಜ್ಞೆ ತರುತ್ತಾರಾ ಅನ್ನೋ ನಿರೀಕ್ಷೆ ಮೂಡಿಸಿದೆ..

ಒಟ್ನಲ್ಲಿ ಅಯೋಧ್ಯೆ ರಾಮಜನ್ಮಭೂಮಿ ವಿವಾದ ಮತ್ತಷ್ಟು ವಿಳಂಬವಾಗ್ತಿದ್ದು, ಬಿಜೆಪಿಗೆ ಹಿನ್ನಡೆಯಾಗ್ತಿದೆ. ಲೋಕಸಭೆ ಚುನಾವನೆಯೊಳಗೆ ರಾಮ ಮಂದಿರಕ್ಕೆ ಮುಹೂರ್ತವಿಡಬೇಕು ಅನ್ನೋ ಆಸೆಗೆ ಸುಪ್ರೀಂಕೋರ್ಟ್​ ತಣ್ಣೀರೆರಚುತ್ತಿದೆ. ಇದು ಹಿಂದೂಪರ ಸಂಘಟನೆಗಳನ್ನ ಕೆರಳಿಸಿದ್ದು, ಸುಗ್ರೀವಾಜ್ಞೆ ತರಲೇಬೇಕಾದ ಒತ್ತಡದಲ್ಲಿ ಮೋದಿ ಸರ್ಕಾರವಿದೆ.
ಮಂಜು ಪಾವಗಡ, ಟಿವಿ5 ಕನ್ನಡ

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.