ಸಿದ್ದರಾಮಯ್ಯ ಕೇಳಿದ್ದು 115 ಕೋಟಿ ಕುಮಾರಸ್ವಾಮಿ ಕೊಟ್ಟಿದ್ದು..!!

ಮಾಜಿ ಮುಖ್ಯಮಂತ್ರಿ ಹಾಗೂ ಬಾದಮಿ ಶಾಸಕ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ವಿವಿಧ ಕಾಮಗಾರಿಗಳಿಗಾಗಿ 150 ಕೋಟಿ ರೂ ಅನುದಾನ ನೀಡುವಂತೆ ಬರೆದ ಪತ್ರಕ್ಕೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೇವಲ 15 ಕೋಟಿ ರೂ ಅನುದಾನಕ್ಕೆ ಅಸ್ತು ಎಂದಿದ್ದಾರೆ.

ಸಿದ್ದರಾಮಯ್ಯ ಮತಕ್ಷೇತ್ರದ ಗ್ರಾಮೀಣ ರಸ್ತೆ ದುರಸ್ತಿಗೆ ಹಾಗೂ ಬಾದಾಮಿ, ಗುಳೇದಗುಡ್ಡ ಪುರಸಭೆ ಹಾಗೂ ಕೆರೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ ಕಾಮಗಾರಿಗೆ ಒಟ್ಟು 115 ಕೋಟಿ ರೂಪಾಯಿ ಪ್ರಸ್ತಾವಣೆಯನ್ನು ಸಿದ್ದರಾಮಯ್ಯ ಸಲ್ಲಿ‌ಸಿದ್ದರು.

15 ಕೋಟಿ ರೂ ನೀಡಲು ಸಿಎಂ ಕುಮಾರಸ್ವಾಮಿ ಒಪ್ಪಿಗೆ

ಆದರೆ ಕೇವಲ 15 ಕೋಟಿ ರೂ ನೀಡಲು ಸಿಎಂ ಕುಮಾರಸ್ವಾಮಿ ಸೂಚನೆ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಬಿಡುಗಡೆಗೆ ಅನುಮೋದನೆ ನೀಡಿದೆ ಎನ್ನಲಾಗಿದೆ.

ಕ್ಷೇತ್ರದ ಅಭಿವೃದ್ದಿಗೆ ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದರೆ, ಸಿದ್ದರಾಮಯ್ಯನಿಗೆ ಸಿಎಂ ಅನುದಾನ ಬಿಡುಗಡೆಗೆ ಸಾಥ್ ನೀಡಿದರೆ. ಸ್ವಕ್ಷೇತ್ರ ಅಭಿವೃದ್ದಿ ಸಾಧ್ಯ, ಆದರೆ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿದ್ದಾರೆ.