ಸಿಎಂ ಪುತ್ರನ ‘ಸೀತಾರಾಮ ಕಲ್ಯಾಣ’ ಸಿನಿಮಾ ರಿಲೀಸ್​ ಗೆ​ ಡೇಟ್ ಫಿಕ್ಸ್ ..!

ಸೀತಾರಾಮ ಕಲ್ಯಾಣ. ಈ ವರ್ಷದ ಒನ್ ಆಫ್ ದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯ ಫ್ಯಾಮಿಲಿ ಕಮ್ ಮಾಸ್ ಎಂಟ್ರಟೈನರ್ ಸಿನಿಮಾ.

ಜಾಗ್ವಾರ್ ನಂತರ ಚನ್ನಾಂಬಿಕ ಫಿಲಂಸ್ ಬ್ಯಾನರ್ನಡಿ ತಯಾರಾದ ಬಹುಕೋಟಿ ವೆಚ್ಚದ ಅದ್ಧೂರಿ ಚಿತ್ರ. ಎ ಹರ್ಷ ಸಾರಥ್ಯದಲ್ಲಿ ತಯಾರಾದ ಈ ಸಿನಿಮಾ ಸದ್ಯ ಹೈ ವೋಲ್ಟೇಜ್ ಟೀಸರ್ ಹಾಗೂ ಎರಡು ಹಾಡುಗಳಿಂದ ಎಲ್ಲಿಲ್ಲದ ಕ್ರೇಜ್ ಹುಟ್ಟಿಸಿದೆ. ಸದ್ಯ ಅದರ ಮೇಕಿಂಗ್ ವೀಡಿಯೋ ರಿವೀಲ್ ಆಗಿದ್ದು, ಕ್ವಾಲಿಟಿ ಮೇಕಿಂಗ್ ಎದ್ದು ಕಾಣ್ತಿದೆ.

‘ಯುವರಾಜ’ನಿಗೆ ‘ನನ್ನ ರಾಜ ನೀನೇ’ ಅಂದ ಕುಮಾರಣ್ಣ..!!
ಬ್ಯುಸಿ ಶೆಡ್ಯೂಲ್ ನಡುವೆ ಶೂಟಿಂಗ್ ಸೆಟ್ನಲ್ಲಿ ಸಿಎಂ ಕಲರವ

ಒಂದ್ಕಡೆ ರಚಿತಾ ಜೊತೆ ನನ್ನ ರಾಣಿ ನೀನು ನಿನ್ನ ರಾಜ ನಾನು ಅಂತ ನಿಖಿಲ್ ಡ್ಯುಯೆಟ್ ಹಾಡ್ತಿದ್ರೆ, ಮತ್ತೊಂದೆಡೆ ಸಿಎಂ ಕುಮಾರಸ್ವಾಮಿ ತಮ್ಮ ಬ್ಯುಸಿ ಶೆಡ್ಯೂಲ್ನ ನಡುವೆ ಸೆಟ್ಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ ಯುವರಾಜನನ್ನ ನೀನೇ ನನ್ನ ಪಾಲಿನ ರಾಜ ಅಂತ ಅವರ ಅಭಿನಯ ನೋಡಿ ಹಾಡಿ ಹೊಗಳಿದ್ದಾರಂತೆ.

ಜನವರಿ 25ಕ್ಕೆ ಫಿಕ್ಸ್ ಆಗಿದೆ ‘ಸೀತಾರಾಮ ಕಲ್ಯಾಣ’..!!
ಜಯಣ್ಣ ಉಸ್ತುವಾರಿಯಲ್ಲಿ ಯುವರಾಜನ ಸೆಕೆಂಡ್ ಎಂಟ್ರಿ

ಸೀತಾರಾಮ ಕಲ್ಯಾಣ ರಿಲೀಸ್ ಡೇಟ್ ಫೈನಲ್ ಆಗಿದೆ. ಇದೇ ಜನವರಿ 25ಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ಅಂದಹಾಗೆ ಈ ಸಿನಿಮಾನ ಕನ್ನಡದ ಖ್ಯಾತ ನಿರ್ಮಾಪಕ ಕಮ್ ವಿತರಕ ಜಯಣ್ಣ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ. 300ಕ್ಕೂ ಅಧಿಕ ಸ್ಕ್ರೀನ್ಸ್ನಲ್ಲಿ ತೆರೆಗೆ ತರಲು ಜಯಣ್ಣ ಪ್ಲ್ಯಾನ್ ಮಾಡ್ತಿದ್ದು, ನಿಖಿಲ್ ಕರಿಯರ್ಗೆ ಇದು ಬೇರೆಯದ್ದೇ ರೀತಿಯ ಟರ್ನಿಂಗ್ ಜೊತೆ ಬಿಗ್ ಓಪನಿಂಗ್ ಕೊಡಲಿದೆ.

ಮೈಸೂರಿನಲ್ಲಿ ಗ್ರ್ಯಾಂಡ್ ಪ್ರೀ- ರಿಲೀಸ್ ಇವೆಂಟ್ಗೆ ಪ್ಲ್ಯಾನ್
ಬೃಹತ್ ವೇದಿಕೆಗೆ ಸಾಕ್ಷಿಯಾಗಲಿದೆ ಸ್ಯಾಂಡಲ್ವುಡ್ ಕುಟುಂಬ

ರಿಲೀಸ್ಗೂ ಮೊದಲು ಮೈಸೂರಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ- ರಿಲೀಸ್ ಇವೆಂಟ್ ಮಾಡೋ ಹುನ್ನಾರದಲ್ಲಿದೆ ಟೀಂ ಸೀತಾರಾಮ ಕಲ್ಯಾಣ. ಸದ್ಯ ಅದಕ್ಕಾಗಿ ಸಕಲ ಸಿದ್ದತೆಗಳು ನಡೀತಿದ್ದು, ಮಂಡ್ಯದಲ್ಲಿ ನಡೆದ ಜಾಗ್ವಾರ್ ಆಡಿಯೋ ಲಾಂಚ್ ಫಂಕ್ಷನ್ನ ಮೀರಿಸುವಂತಿರಲಿದೆ. ಬಹುದೊಡ್ಡ ತಾರಾಗಣವಿರೋ ಈ ಚಿತ್ರದ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞ ಇದಕ್ಕೆ ಸಾಕ್ಷಿಯಾಗಲಿದ್ದು, ಚಿತ್ರರಂಗದ ಬಹುತೇಕ ಸ್ಟಾರ್ಸ್ ಈ ಕಾರ್ಯಕ್ರಮದ ಸೊಬಗು ಹೆಚ್ಚಿಸಲಿದ್ದಾರೆ.

ಅದೇನೇ ಇರಲಿ, ಶರತ್ ಕುಮಾರ್, ಮಧುಬಾಲಾ, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ನಯನಾ ಹೀಗೆ ಒಂದೊಂದು ಪಾತ್ರ ಕೂಡ ಚಿತ್ರದ ಅಂದ ಚೆಂದ ಹೆಚ್ಚಿಸಿವೆ. ಇನ್ನು ಜಾಗ್ವಾರ್ ನಂತ್ರ ನಿಖಿಲ್ ನಟನೆಯಲ್ಲೂ ಪಕ್ವತೆ ಕಾಣ್ತಿದ್ದು, ಡ್ಯಾನ್ಸ್-ಫೈಟ್ಸ್ ಜೊತೆ ಡಿಫರೆಂಟ್ ಸ್ಟೈಲು ಮ್ಯಾನರಿಸಂನಿಂದ ಸಿನಿಪ್ರಿಯರನ್ನ ರಂಜಿಸೋದ್ರಲ್ಲಿ ಡೌಟೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5 ಕನ್ನಡ