ಮೋಡಿ ಮಾಡಲಿದೆ ರಮೇಶ್- ಶಿವಣ್ಣ ಕಾಂಬಿನೇಷನ್

ಭೈರತಿ ರಣಗಲ್ ಸಿನಿಮಾದಲ್ಲಿ ರಮೇಶ್ ಅರವಿಂದ್​ಗಂತ್ಲೇ ಒಂದು ಸ್ಪೆಷಲ್ ರೋಲ್​ ರೆಡಿಯಾಗ್ತಿದೆಯಂತೆ. ಈಗಾಗಲೇ ಶಿವಣ್ಣ- ರಮೇಶ್, ನಮ್ಮೂರ ಮಂದಾರ ಹೂವೆ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಮಫ್ತಿ ಪ್ರೀಕ್ವೆಲ್​​ನಲ್ಲಿ ರಮೇಶ್​ ಅರವಿಂದ್​​ಗೆ ಒಂದು ವಿಶೇಷವಾದ ಪಾತ್ರ ಇದೆಯಂತೆ. ಅದು ಇಡೀ ಸಿನಿಮಾ ಭೈರತಿ ರಣಗಲ್​ ಜೊತೆ ಸಾಗುವ ಪಾತ್ರ ಅನ್ನೋದು ಮತ್ತೊಂದು ವಿಶೇಷ.

ಮಫ್ತಿ ಸಿನಿಮಾದಲ್ಲಿ ಶಿವಣ್ಣನ ತಂಗಿಯಾಗಿ ಛಾಯಾಸಿಂಗ್ ಮಿಂಚಿದ್ರು.. ಅವ್ರ ಪಾತ್ರಕ್ಕೂ ಒಳ್ಳೆ ಪ್ರಶಂಸೆ ಸಿಕ್ಕಿತ್ತು. ಆದ್ರೆ, ಶಿವಣ್ಣನಿಗೆ ನಾಯಕಿ ಇರಲಿಲ್ಲ. ಭೈರತಿ ರಣಗಲ್​ ಸಿನಿಮಾದಲ್ಲಿ ನಾಯಕಿ ಇರ್ತಾಳೆ. ಆ ಪಾತ್ರಕ್ಕೆ ಒಂದಷ್ಟು ನಟಿಯರ ಹೆಸರು ಕೇಳಿ ಬರ್ತಿದ್ದು, ಬಹುಭಾಷಾ ನಟಿ ಕಮಲಿನಿ ಮುಖರ್ಜಿ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಅನ್ನಲಾಗ್ತಿದೆ.

ra

ಕೆಜಿಎಫ್​​ನ ಮೀರಿಸುತ್ತಾ ಸೆಂಚುರಿ ಸ್ಟಾರ್ 125ನೇ ಸಿನಿಮಾ..?
ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಮಫ್ತಿ ನಂತ್ರ ನರ್ತನ್​ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗೆ ಆಕ್ಷನ್ ಕಟ್ ಹೇಳ್ಬೇಕಿತ್ತು. ಆದ್ರೆ, ಯಶ್ ಕೆಜಿಎಫ್ ಸಿನಿಮಾದಲ್ಲಿ ಬ್ಯುಸಿಯಾದ್ರು. ಸದ್ಯ ಕೆಜಿಎಫ್ ಚಾಪ್ಟರ್​-2ನಲ್ಲಿ ನಟಿಸೋಕೆ ಸಿದ್ಧವಾಗ್ತಿದ್ದಾರೆ. ಹಾಗಾಗಿ ನರ್ತನ್ ಭೈರತಿ ರಣಗಲ್​ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಭೈರತಿ ರಣಗಲ್​​ಗಿರೋ ಕ್ರೇಜ್​, ಸ್ಟಾರ್​ಕಾಸ್ಟ್, ಟೆಕ್ನಿಕಲ್ ಟೀಮ್​ ನೋಡ್ತಿದ್ರೆ, ಈ ಸಿನಿಮಾ ಕೆಜಿಎಫ್​​ನ ಮೀರಿಸುವಂತೆ ಮೂಡಿಬರೋದು ಪಕ್ಕಾ.
ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.