ಕಲ್ಲಡ್ಕ ಪ್ರಭಾಕರ್ ಸೇರಿ ಮೂವರು ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್..!

ಮಂಗಳೂರು: ಹಿಂದೂ ಸಂಘಟನೆಯ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಲಾಗಿದ್ದು, ಕಲ್ಲಡ್ಕ ಪ್ರಭಾಕರ ಭಟ್ಟ ಸೇರಿ ಮೂವರು ಹಿಂದೂ ಮುಖಂಡರ ಹತ್ಯೆಗೆ ಪ್ಲಾನ್ ಮಾಡಲಾಗಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ಟ ಮತ್ತು ಇಬ್ಬರು ಹಿಂದೂ ಮುಖಂಡರಾದ ಶರಣ್ ಪಂಪ್‌ವೆಲ್‌, ಜಗದೀಶ್ ಶಣವ ಹತ್ಯೆಗೆ ಸಂಚು ರೂಪಿಸಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಮೂವರನ್ನೂ ನಿರ್ಜನಪ್ರದೇಶದಲ್ಲಿ ಇರಿಸಲಾಗಿದ್ದು, ಟೈಟ್ ಸೆಕ್ಯೂರಿಟಿ ನೀಡಲಾಗಿದೆ.