TV5 EXCLUSIVE: ಚುನಾವಣೆಗೆ ನಿಲ್ಲುವ ಬಗ್ಗೆ ನಿಖಿಲ್ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ಮಂಡ್ಯ ಲೋಕಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಟಿವಿ5ಗೆ ಹೇಳಿಕೆ ನೀಡಿದ್ದು, ಮಂಡ್ಯದ ವಿಚಾರ ದೊಡ್ಡವರಿಗೆ, ಕಾರ್ಯಕರ್ತರಿಗೆ ಬಿಟ್ಟ ವಿಚಾರ ಎಂದಿದ್ದಾರೆ.

ಅಲ್ಲದೇ ನನಗೆ ನನ್ನದೇ ಆದಂತಹ ಜವಾಬ್ದಾರಿ ಇದೆ. ನಾನು ಸಿನಿಮಾವನ್ನು ಫ್ಯಾಷನ್ ಇಂದ ಮಾಡುತ್ತಿದ್ದೇನೆ. ರಾಜಕಾರಣದಲ್ಲಿ ಬರ್ಬೇಕು. ನನ್ನ ಪಕ್ಷಕ್ಕೆ ದುಡಿಬೇಕು ಎಂಬ ಆಸೆ ಇದೆ. ಕಳೆದ ಚುನಾವಣೆಯಲ್ಲಿ ಕೂಡ ಪಕ್ಷದಲ್ಲಿ ತೊಡಗಿಸಿಕೊಂಡಿದ್ದೇನೆ. ಒಬ್ಬ ನಿಷ್ಟಾವಂತ ಕಾರ್ಯಕರ್ತ ಆಗಿ ದುಡಿದಿದ್ದೇನೆ ಎಂದಿದ್ದಾರೆ.

ಅಲ್ಲದೇ ನನಗೆ ಮಂಡ್ಯ ಬೇರೆ ಅಲ್ಲ ಚಿಕ್ಕಬಳ್ಳಾಪುರ, ತುಮಕೂರು ಬೇರೆ ಅಲ್ಲಾ, ಹಲವಾರು ಕಡೆ ಓಡಾಡಿ ಜವಾಬ್ದಾರಿಯುವ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಲೋಕಸಭೆಯಲ್ಲಿ ಸ್ಪರ್ಧೆ ವಿಚಾರ ದೊಡ್ಡವರಿಗೆ ಬಿಟ್ಟದ್ದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.