ಲೋಕಸಭೆ ಚುನಾವಣೆ: ಹಾಸನದಿಂದ ಪ್ರಜ್ವಲ್, ಮಂಡ್ಯದಿಂದ ನಿಖಿಲ್..!

ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೇಟ್ ಫಿಕ್ಸ್ ಆಗಿದ್ದು, ಮಂಡ್ಯದಿಂದ ನಿಖಿಲ್‌ಗೆ ಟಿಕೇಟ್ ನೀಡಲು ಕುಟುಂಬದಲ್ಲಿ ಭಾರೀ ಒತ್ತಡ ಹೇರಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಲೋಕಸಭೆಗೆ ಅವಕಾಶ ನೀಡಲು ಅನಿತಾ ಕುಮಾರಸ್ವಾಮಿ ಪಟ್ಟು ಹಿಡಿದಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿಎಂ ಪುತ್ರನನ್ನು ಕಣಕ್ಕಿಲಿಸಲು ತಯಾರಿ ನಡೆಸಲಾಗುತ್ತಿದೆ.

ಮಂಡ್ಯ ಜೆಡಿಎಸ್ ಶಾಸಕರಿಂದಲೂ ದೇವೇಗೌಡರ ಮೇಲೆ ನಿಖಿಲ್ ಕುಮಾರ್‌ಗೆ ಟಿಕೇಟ್ ನೀಡುವಂತೆ ಒತ್ತಡ ಹೇರಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪರ ನಿಖಿಲ್ ಕುಮಾರ್ ಪ್ರಚಾರ ನಡೆಸಿದ್ದು, ಮೈತ್ರಿಯಾಗಲಿ ಅಥವಾ ಆಗದಿರಲಿ ಸ್ಪರ್ಧಿಸುವಂತೆ ಮನವಿ ಮಾಡಲಾಗಿದೆ.

ನಿಖಿಲ್ ಕುಮಾರ್ ಸದ್ಯ ನಟನೆಯಲ್ಲಿ ಬ್ಯೂಸಿಯಾಗಿದ್ದು, ತಮ್ಮ ಚಿತ್ರದ ಧ್ವನಿಸುರುಳಿಯನ್ನ ಮಂಡ್ಯದಲ್ಲೇ ರಿಲೀಸ್ ಮಾಡಿದ್ರು. ಅಲ್ಲದೇ ಮಂಡ್ಯ ಜನರ ಜೊತೆ ಹೆಚ್ಚಿನ ಸಂಪರ್ಕ ಹೊಂದಿದ್ದು, ನಿಖಿಲ್ ಕುಮಾರ್ ಮಂಡ್ಯದಿಂದ ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ.