ಒಂದೇ ಚಿತ್ರದಲ್ಲಿ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಅಬ್ಬರ..!

ಫೋಟೋಶೂಟ್​ ಹಂತದಿಂದ್ಲೇ ಸಿಕ್ಕಾಪಟ್ಟೆ ಸೌಂಡ್ ಮಾಡೋಕೆ ಶುರು ಮಾಡಿದ ಸಿನಿಮಾ ಭರಾಟೆ. ಬಹದ್ದೂರ್ ಚೇತನ್​ಕುಮಾರ್ ಮತ್ತು ರೋರಿಂಗ್​ ಸ್ಟಾರ್ ಶ್ರೀಮುರಳಿ ಕ್ರೇಜಿ ಕಾಂಬಿನೇಷನ್​​ನ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗ್ತಿದ್ದು, ಸದ್ಯ ಸ್ಪೆಷಲ್ ನ್ಯೂಸ್​ವೊಂದು ಭರಾಟೆ ಸೆಟ್​​ನಿಂದ ಹೊರ ಬಿದ್ದಿದೆ.

ಭರಾಟೆ.. ಮಫ್ತಿ ಸೂಪರ್ ಸಕ್ಸಸ್ ನಂತ್ರ ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸ್ತಿರೋ ಮತ್ತೊಂದು ಮಾಸ್ ಎಂಟ್ರಟ್ರೈನರ್.ಬಹದ್ದೂರ್, ಭರ್ಜರಿ ಸಿನಿಮಾಗಳನ್ನ ನಂತ್ರ ಚೇತನ್​ ನಿರ್ದೇಶನದ ಮೂರನೇ ಸಿನಿಮಾ ಇದು. ಈಗಾಗಲೇ ಪೋಸ್ಟರ್,​​ ಮೇಕಿಂಗ್, ಟೀಸರ್ ರಿವೀಲ್ ಮಾಡಿ ಸದ್ದು ಮಾಡಿದ ಭರಾಟೆ ಟೀಂ, ಶೂಟಿಂಗ್ ಸ್ಪೀಡ್ ಹೆಚ್ಚಿಸಿದ್ದು ಆದಷ್ಟು ಬೇಗ ಸಿನಿಮಾ ತೆರೆಗೆ ತರೋ ಲೆಕ್ಕಾಚಾರದಲ್ಲಿದ್ದಾರೆ.

ರೋರಿಂಗ್ ಸ್ಟಾರ್ ಎದುರು ಡೈಲಾಗ್ ಕಿಂಗ್ ಸಹೋದರರ ಭರಾಟೆ
ಒಂದೇ ಚಿತ್ರದಲ್ಲಿ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಅಬ್ಬರ..!
ಭರಾಟೆ ಸಿನಿಮಾದಲ್ಲಿ ಸಾಯಿ ಕುಮಾರ್ ಸಹೋದರರು ಬಣ್ಣ ಹಚ್ಚಿದ್ದಾರೆ. ಈ ಮೂವರು ಸಹೋದರರರು ತಮ್ಮ ಕಂಚಿನ ಕಂಠ, ಡೈಲಾಗ್ ಹೇಳುವ ಖದರ್​ನಿಂದ ಸೌತ್​ ಸಿನಿದುನಿಯಾದಲ್ಲಿ ಮನೆಮಾತಾಗಿದ್ದಾರೆ. ಸಾಯಿಕುಮಾರ್ ಮತ್ತು ರವಿಶಂಕರ್ ಡಬ್ಬಿಂಗ್ ಕಲಾವಿದರಾಗಿ, ನಟರಾಗಿ ಸಕ್ಸಸ್​ ಕಂಡಿದ್ದಾರೆ. ಮತ್ತೊಬ್ಬ ಸಹೋದರ ಅಯ್ಯಪ್ಪ ಡೈರೆಕ್ಟರ್ ಕಮ್ ಆ್ಯಕ್ಟರ್. ಆದ್ರೆ ಮೂವರು ಒಂದೇ ಸಿನಿಮಾದಲ್ಲಿ ನಟಿಸಿದ ಉದಾಹರಣೆ ಇರಲಿಲ್ಲ. ಭರಾಟೆ ಸಿನಿಮಾದಲ್ಲಿ ಅಂತಾದೊಂದು ಪ್ರಯತ್ನ ನಡೀತಿದೆ.

ಈಗಾಗಲೇ ರವಿಶಂಕರ್ ಮತ್ತು ಅಯ್ಯಪ್ಪ ನಟಿಸಿರೋ ದೃಶ್ಯಗಳ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲೇ ಡೈಲಾಗ್​ ಕಿಂಗ್ ಸಾಯಿಕುಮಾರ್ ಭರಾಟೆ ಟೀಂ ಸೇರಿಕೊಳ್ಳಲಿದ್ದಾರೆ. ಶ್ರೀಮುರಳಿ- ಚೇತನ್​ಕುಮಾರ್ ಕಾಂಬಿನೇಷನ್​ನ ಈ ಆಕ್ಷನ್​ ಎಂಟ್ರಟ್ರೈನರ್ ಈಗಾಗಲೇ ಬೇಜಾನ್ ಸೌಂಡ್ ಮಾಡ್ತಿದೆ. ಸಾಯಿಕುಮಾರ್ ಬ್ರದರ್ಸ್ ಆಗಮನದಿಂದ ಭರಾಟೆ ಖದರ್ ಮತ್ತಷ್ಟು ಹೆಚ್ಚಾಗಿದೆ.

ಭರಾಟೆ ಒಂದು ಕಲರ್​ಫುಲ್​ ಕಮರ್ಷಿಯಲ್ ಫ್ಯಾಮಿಲಿ ಎಂಟ್ರಟ್ರೈನರ್ ಸಿನಿಮಾ. ಇಲ್ಲಿ ಶ್ರೀಲೀಲಾ ರೋರಿಂಗ್​ ಸ್ಟಾರ್​​ಗೆ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ. ಸುಮನ್, ತಾರಾ ಸೇರಿದಂತೆ ದೊಡ್ಡ ತಾರಾಗಣ ಸಿನಿಮಾದಲ್ಲಿದ್ದು, ಅರ್ಜುನ್ ಜನ್ಯಾ ಸಂಗೀತ, ಭುವನ್ ಗೌಡ ಛಾಯಾಗ್ರಹಣ ಭರಾಟೆ ಸಿನಿಮಾಗಿದೆ.

ರಾಜಸ್ಥಾನ, ಮಂಡ್ಯ, ಮೈಸೂರು ಸೇರಿದಂತೆ ಉತ್ತರ ಕರ್ನಾಟಕದ ಅದ್ಭುತ ಲೊಕೇಶನ್​ಗಳಲ್ಲಿ ಶೂಟಿಂಗ್ ನಡೆದಿದೆ. ಸುಪ್ರೀತ್ ನಿರ್ಮಾಣದ ಭರಾಟೆ ಟೀಸರ್​​ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಸಿನಿಮಾ ನೋಡಬೇಕು ಅನ್ನೋ ಕುತೂಹಲ ಹೆಚ್ಚಿಸಿದೆ.
ಎಂಟ್ರಟ್ರೈನ್​ಮೆಂಟ್ ಬ್ಯೂರೊ,TV5