ರೇವಣ್ಣ ವಿರುದ್ಧ ಸಿಡಿದೆದ್ದ ಮಂಜು: ನಾವು ಮಾಡಿದ್ದನ್ನು ನಾನು ಮಾಡಿದ್ದು ಎಂದು ಹೇಳಿಕೊಳ್ಳುವುದನ್ನು ಬಿಡಲಿ

ದ್ವೇಶದ ರಾಜಕಾರಣವನ್ನು ಮಾಡಬಾರದು ಎಂದು ರೇವಣ್ಣನಿಗೆ ಕಿವಿ ಮಾತು ಹೇಳುತ್ತೆನೆ, ನಮ್ಮ ಕಾರ್ಯಕರ್ತರ ಮೇಲೆ ವಿನಾ ಕಾರಣ ಕೇಸ್ ಹಾಕಿಸುವುದನ್ನು ಬಿಡಲಿ ಎಂದು ಮಾಜಿ ಸಚಿವ ಎ.ಮಂಜು ಹೇಳಿದರು.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂತ್ರಿಸ್ಥಾನವನ್ನು ಪುಟಗೋಸಿ ಅಂತ ಹೇಳುತ್ತಾರೆ ರೇವಣ್ಣ , ಯಾವ ಪದ ಬಳಕೆ ಮಾಡಬೇಕು ಅನ್ನೋದು ಗೊತ್ತೀಲ್ಲ, ಹೊಳೆನರಸೀಪುರ ಕ್ಷೇತ್ರಕ್ಕೆ ಮಾತ್ರ ಅಭಿವೃದ್ದಿ ಸೀಮಿತ ಮಾಡಿಕೊಂಡಿದ್ದಾರೆ, ಈಗಾಗಲೇ ಪಡುವಲ, ಹಿಪ್ಪೆಯಲ್ಲಿ ಕಾಲೇಜುಗಳಿವೆ, ಮತ್ತೆ ಪುನಃ ಅಲ್ಲಿಗೆ ಕಾಲೇಜು ಸಂಕ್ಷನ್ ಮಾಡಿಸಿಕೊಂಡಿದ್ದಾರೆ, ಅವರ ನಂಟರಿಷ್ಟ ಅಧಿಕಾರಿಗಳನ್ನು ಮಾತ್ರ ಅಯಾಕಟ್ಟಿನ ಜಾಗಕ್ಕೆ ಹಾಕಿಕೊಂಡಿದ್ದಾರೆ , ಇಲ್ಲಿ ಅಭಿವೃದ್ದಿ ಮಾಡುತ್ತಿಲ್ಲ, ನಂಟರಿಷ್ಟರ ಅಧಿಕಾರಿಗಳನ್ನು ಹಾಕಿಕೊಂಡಿರುವುದೇ ಅಬಿವೃದ್ದಿ, ಎಂದು ರೇವಣ್ಣ ವಿರುದ್ದ ವಾಗ್ದಾಳಿ ನಡೆಸಿದರು.

ಹಾಸನ ಜಿಲ್ಲೆಯಲ್ಲಿ ನಾನು ಸಚಿವನಾಗಿದ್ದಾಗ ಯಾವ ಕೆಲಸ ಆಗಿತ್ತು ಅದೇ ಕಂಟಿನ್ಯೂ ಮಾಡಿದ್ದಾರೆ, ಹೊಸ ಕೆಲಸ ಯಾವುದು ಇಲ್ಲ, ಇಲ್ಲಿ ಸಂಮ್ಮಿಶ್ರ ಸರ್ಕಾರವಿದೆ ಇಬ್ಬರು ಸೇರಿ ಮಾಡಬೇಕು, ನಾವು ಮಾಡಿದ್ದನ್ನು ನಾನು ಮಾಡಿದೆ ಅಂತ ಹೇಳಿಕೊಳ್ಳುವುದನ್ನು ಬಿಡಲಿ, ಎಂದು ಸಚಿವ ಎ.ಮಂಜು ಪರೋಕ್ಷವಾಗಿಯೇ ಟಾಂಗ್ ನೀಡಿದರು.

ಇಡಿ ರಾಜ್ಯದಲ್ಲಿ ಕಣ್ಣಿರು ಹಾಕಿಕೊಂಡು ಸಾಲಮನ್ನ ಅಂತಾ ಹೇಳಿ ಜನರ ಮತ ತೆಗೆದುಕೊಂಡಿದ್ದಾರೆ, ಯಾವುದು ಶಾಶ್ವತ ಅಲ್ಲ, ಯಾವುದನ್ನು ಹೊಸದಾಗಿ ಕೆಲಸ ತಂದಿದ್ದಾರೆ ಅದನ್ನು ಹೇಳಲಿ, ಎಂದು ಸವಾಲು ಹಾಕಿದರು.