ಆಸ್ಪತ್ರೆಗೆ ದಾಖಲಾದ ನಿರ್ಮಾಪಕ ಕೆ. ಮಂಜು

ಕೆ. ಮಂಜು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಯಾವುದೇ ರೀತಿ ಆತಂಕಪಡಬೇಕಾಗಿಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರಾಮಾಗಿ ಇದ್ದಾರೆ ಎಂದು ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಸ್ಪಷ್ಟನೆ ನೀಡಿದ್ದಾರೆ.

ಹಿರಿಯ ನಟ ವಿ ರವಿಚಂದ್ರನ್ ಅವರು ಕೂಡಾ ಆಸ್ಪತ್ರೆಗೆ ತೆರಳಿ ಮಂಜು ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದಾರೆ.

ಹೃದಯ ಸಂಬಂಧ ಖಾಯಿಲೆಯಿಂದ ಬಳಲುತ್ತಿರೋ ನಿರ್ಮಾಪಕ ಕೆ ಮಂಜು, ಸದ್ಯ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಾರ್ಟ್ ನಲ್ಲಿ ಬ್ಲಾಕೇಜ್ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸರ್ಜರಿ ಮೂಲಕ ಬ್ಲಾಕೇಜ್ ಕ್ಲಿಯರ್ ಮಾಡಿದ್ದಾರೆ ವೈದ್ಯರು.

ರಾಜಾಹುಲಿ, ಸಾಹುಕಾರ, ಹೃದಯವಂತ ಸೇರಿದಂತೆ ಮೂವತ್ತಕ್ಕೂ ಅಧಿಕ ಸಿನಿಮಾವನ್ನು ಕೆ. ಮಂಜು ನಿರ್ಮಿಸಿದ್ದಾರೆ.