ವದಂತಿಗಳಿಗೆ ತೆರೆ ಎಳೆದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್

ರಾಷ್ಟ್ರೀಯ ಶಿಕ್ಷಣ ನೀತಿ ತ್ರಿಭಾಷಾ ಸೂತ್ರದ ಅನ್ವಯ 8ನೇ ತರಗತಿಯವರೆಗೆ ಹಿಂದಿ ಭಾಷೆ ಕಡ್ಡಾಯ ಎಂಬ ವಿಚಾರದ ಕುರಿತು  ಪ್ರಕಾಶ್​​ ಜಾವ್ಡೇಕರ್​​ ಟ್ವೀಟ್ ಮಾಡಿದ್ದಾರೆ.

ಹಿಂದಿ ಭಾಷೆ ಕಡ್ಡಾಯ ಎಂದು ಟ್ವೀಟ್​ ಮಾಡಿರೋ ಜಾವ್ಡೇಕರ್​

ಹಿಂದಿ ಭಾಷೆ ಕಡ್ಡಾಯ ಎಂದು ಟ್ವೀಟ್​ ಮಾಡಿರೋ ಜಾವ್ಡೇಕರ್​, ಶಿಕ್ಷಣ ನೀತಿಯ ಅನ್ವಯ ಈವರೆಗೆ ಯಾವುದೇ ಭಾಷೆಯನ್ನೂ ಕಡ್ಡಾಯ ಮಾಡುವಂತೆ ಶಿಫಾರಸು ಮಾಡಿಲ್ಲ, ಕೇಂದ್ರ ಸರ್ಕಾರದ ಮುಂದೆ ಈ ಸಂಬಂಧ ಯಾವುದೇ ಪ್ರಸ್ತಾಪ ಕೂಡಾ ಬಂದಿಲ್ಲ, ಕೆಲವೊಂದು ವಾಹಿನಿಗಳು ಈ ಬಗ್ಗೆ ವದಂತಿ ಹಬ್ಬಿಸಿವೆ. ಹೀಗಾಗಿ ಈ ಸ್ಪಷ್ಟೀಕರಣ ನೀಡೋದು ಅನಿವಾರ್ಯವಾಗಿದೆ ಅಂತಾ ಟ್ವೀಟ್‌ ಮಾಡಿದ್ದಾರೆ.

https://platform.twitter.com/widgets.js

ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ರಚನೆ

ಕೆ.ಕಸ್ತೂರಿ ರಂಗನ್​ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲಿ ಹಾಗೂ ಗಣಿತ, ವಿಜ್ಞಾನ ವಿಷಯ ಕಲಿಕೆಯಲ್ಲಿ ಏಕರೂಪತೆ ಇರಬೇಕು ಅನ್ನೋದರ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗ್ತಿತ್ತು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.