ಚಂದನವನದ ಖ್ಯಾತ ನಿರ್ಮಾಪಕರೊಬ್ಬರಿಗೆ ಕೋಟಿ ಕೋಟಿ ವಂಚನೆ

ಚಂದನವನದ ಖ್ಯಾತ ನಿರ್ಮಾಪಕ ಶೈಲೆಂದ್ರ ಬಾಬುಗೆ ಕೋಟಿ ಕೋಟಿ ವಂಚನೆಯನ್ನು ಮಾಡಲಾಗಿದೆ.

ಹಣ ವಾಪಸ್ಸು ಕೇಳಿದರೆ  ಮುಗಿಸುವುದಾಗಿ ಬೆದರಿಕೆ

ಬಿ.ಎಚ್.ಬಸವರಾಜು ಎಂಬುವರಿಂದ ವಂಚನೆ ನಡೆದಿದ್ದು, ಆಸ್ತಿ ಖರೀದಿ‌ ಮಾಡಬೇಕೆಂದು ಎರಡು ಕೋಟಿ‌ ಸಾಲ ಪಡೆದಿದ್ದರು ಬಸವರಾಜು, ಆದರೆ ಇದೀಗ ಹಣ ವಾಪಸ್ಸು ಕೇಳಿದರೆ ನಿನ್ನ ಮುಗಿಸುವುದಾಗಿ ಬೆದರಿಕೆಯನ್ನು ಬಸವರಾಜು ಹಾಗೂ ಸಹಚರರು ಹಾಕಿದ್ದಾರೆ.

ಈ ಹಿನ್ನಲೆಯಲ್ಲಿ ಅಶೋಕನಗರ ಠಾಣೆಗೆ ದೂರು ನೀಡಿದ ನಿರ್ಮಾಪಕ‌ ಶೈಲೇಂದ್ರ ಬಾಬು, ಅಶೋಕನಗರ ಠಾಣೆಯಲ್ಲಿ ಐಪಿಸಿ 506, 420 ಹಾಗೂ 34 ರ ಆಡಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.