Top

ಪಟೇಲರ ಪ್ರತಿಮೆ ನಂತರ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ ಗುಜರಾತ್..!

ಪಟೇಲರ ಪ್ರತಿಮೆ ನಂತರ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ ಗುಜರಾತ್..!
X

ಅಹಮದಾಬಾದ್: ಕಳೆದ ವರ್ಷ ವಿಶ್ವದ ಅತೀ ಎತ್ತರದ ಸರ್ದಾರ್ ವಲ್ಲಭ ಭಾಯ್ ಬೃಹತ್ ಪ್ರತಿಮೆ ಅನಾವರಣಗೊಳಿಸಿ ಮನೆ ಮಾತಾಗಿದ್ದ ಗುಜರಾತ್ ಇದೀಗ ವಿಶ್ವದ ಅತೀ ದೊಡ್ಡ ಮೈದಾನ ರೆಡಿ ಮಾಡಲು ಅಣಿಯಾಗಿದೆ.

ಸದ್ಯ ಆಸ್ಟ್ರೇಲಿಯಾದ ಸ್ಟೇಡಿಯಂ ವಿಶ್ವದ ಅತೀದೊಡ್ಡ ಸ್ಟೇಡಿಯಂ ಆಗಿದೆ. ಆದರೆ ಅಹಮದಾಬಾದ್‌ನಲ್ಲಿರುವ ಮೊಟೆರಾ ಸ್ಟೇಡಿಯಂನ್ನು ಇನ್ನು ದೊಡ್ಡ ಸ್ಟೇಡಿಯಂ ಆಗಿ ಮಾರ್ಪಾಡು ಮಾಡಲಾಗ್ತಿದೆ. 1ವರ್ಷದಿಂದ ಕಾರ್ಯ ಆರಂಭವಾಗಿದ್ದು, ಇನ್ನು 1-2 ವರ್ಷದಲ್ಲಿ ಮೊಟೆರಾ ಸ್ಟೇಡಿಯಂ ಜಗತ್ತಿನ ಅತ್ಯಂತ ದೊಡ್ಡ ಸ್ಟೇಡಿಯಂ ಆಗಲಿದೆ.ಈ ಸ್ಟೇಡಿಯಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ.

ಒಂದು ವರ್ಷದಿಂದ ಸ್ಟೇಡಿಯಂನ ಕಾರ್ಯಾರಂಭವಾದರೂ ಕೂಡ ಎಲ್ಲಿಯೂ ಇದರ ಬಗ್ಗೆ ಮಾಹಿತಿ ಸೋರಿಕೆಯಾಗಲು ಬಿಡಲಿಲ್ಲ. ಆದರೆ ಇದೀಗ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ವೈಸ್ ಪ್ರೆಸಿಡೆಂಟ್ ಪರಿಮಲ್ ನಾತ್ವಾನಿ ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಫೋಟೋ ಹಾಕಿ ಮಾಹಿತಿ ರಿವೀಲ್ ಮಾಡಿದ್ದು, ಕನಸಿನ ಯೋಜನೆ ಎಂಬ ಹೆಸರು ನೀಡಿದ್ದಾರೆ. ಅಲ್ಲದೇ ಈ ಸ್ಟೇಡಿಯಂ ಭಾರತದ ಹೆಮ್ಮೆಯಾಗಲಿದೆ ಎಂದಿದ್ದಾರೆ.

ಈ ಸ್ಟೇಡಿಯಂನಲ್ಲಿ ಭಾರತೀಯ ಕ್ರಿಕೇಟಿಗ ಸುನೀಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನ ಗಳಿಸಿ, ದಾಖಲೆ ಮಾಡಿದ್ದಾರೆ. ಅಲ್ಲದೇ ಕ್ರಿಕೇಟ್ ದೇವರಾದ ಸಚಿನ್ ಟೆಂಡೂಲ್ಕರ್ ತಮ್ಮ ಫಸ್ಟ್ ಟೆಸ್ಟ್ ಮ್ಯಾಚ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಡಬಲ್ ಸೆಂಚೂರಿ ಬಾರಿಸಿದ್ದರು.

Next Story

RELATED STORIES