ಇದು ಕೆಂಡಸಂಪಿಗೆ ಸಿನಿಮಾ ನೆನಪಿಸುವ ರಿಯಲ್ ಸ್ಟೋರಿ

ಬೆಂಗಳೂರಿನ ಕಾಮಾಕ್ಷಿಪಾಳ್ಯದಿಂದ ಕಾಣೆಯಾಗಿದ್ದ ಮನು ಎಂಬ ವ್ಯಕ್ತಿಯು ಶವವಾಗಿ ಪತ್ತೆಯಾಗಿದ್ದಾರೆ. ಕೊರಟಗೆರೆಯಲ್ಲಿ ಮನುವನ್ನು ಮಾರಕಾಸ್ತರಗಳಿಂದ ಅಮಾನುಷವಾಗಿ ಕೊಚ್ಚಿ ಕೊಲೆಗೈಯ್ಯಲಾಗಿದೆ. ಹತ್ಯೆಗೈದವರು ಯಾರೆಂಬುದು ಗೊತ್ತಾಗಿಲ್ಲ.

ಫೇಸ್‌ಬುಕ್‌ ಮೂಲಕ ನ್ಯಾಯಾಧೀಶರಿಗೆ ಮನವಿ

ಶಾಸಕ ಗೋಪಾಲಯ್ಯ ಸಹೋದರ ಬಸವರಾಜು ಕಳೆದ 2 ತಿಂಗಳ ಹಿಂದೆ  ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದರು.  ವಾರದ ಬಳಿಕ ಗೊತ್ತಾಯ್ತು ತನ್ನ ಮಗಳು ತನ್ನ ಬಲಗೈ ಬಂಟ ಮನುನನ್ನೇ ಮದುವೆಯಾಗಿದ್ದಾಳೆ ಎಂದು.  ಮದುವೆಯಾಗಿರೋ ಬಗ್ಗೆ ಸ್ವತಃ ಮನುನೇ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಖಚಿಪಡಿಸಿದ್ದ. ಅಲ್ಲದೇ ಶಾಸಕರ ಸಹೋದರ ಹಾಗೂ ಅವರ ಕುಟುಂಬಸ್ಥರಿಂದ ಜೀವಭಯವಿದ್ದು, ತಮಗೆ ರಕ್ಷಣೆ ಕೊಡಿ ಅಂತಾ ಫೇಸ್‌ಬುಕ್‌ ಮೂಲಕ ನ್ಯಾಯಾಧೀಶರಿಗೆ ಮನವಿ ಮಾಡಿದ್ದ

ತುಮಕೂರಿನ ಕೊರಟಗೆರೆಯಲ್ಲಿ ಬೀದಿ ಹೆಣವಾಗಿ ಬಿದ್ದಿದ್ದನೆ

ಬಸವರಾಜು ಮನೆಯಲ್ಲಿ ಕೆಲಸ ಮಾಡ್ಕೊಂಡು ಅವರಿಗೆ ಬಲಗೈ ಬಂಟನಾಗಿದ್ದ ಮನು, ಬಸವರಾಜು ಪುತ್ರಿಯನ್ನೇ ಪ್ರೀತಿಸಿ ಮದ್ವೆಯಾಗಿದ್ದ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ರೌಡೀಶೀಟರ್‌ ಆಗಿದ್ದ ಮನು, ವಿವಾಹಿತನಾಗಿದ್ದ. ಆದರೆ ಇಂದು ತುಮಕೂರಿನ ಕೊರಟಗೆರೆಯಲ್ಲಿ ಬೀದಿ ಹೆಣವಾಗಿ ಬಿದ್ದಿದ್ದನೆ.

ಮನು ಕೊಲೆ ಹಿಂದೆ ಬಸವರಾಜು ಕುಟುಂಬಸ್ಥರಾದ ಧರಣಿ ಮತ್ತು ರಾಜು ಹೆಸರು ಕೇಳಿ ಬರ್ತಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೊರಟಗೆರೆ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರ ತನಿಖೆಯಿಂದಷ್ಟೆ ಸತ್ಯಾಸತ್ಯತೆ ಗೊತ್ತಾಗಬೇಕಾಗಿದೆ.