ಒಂದು ತಾಯಿ ನಾಲ್ವರು ಮಕ್ಕಳಲ್ಲೇ ಹೊಂದಾಣಿಕೆಯಿರಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

ಮೈಸೂರು ಮಿನರಲ್ಸ್ ಅಧ್ಯಕ್ಷೆಯಾಗಿ ಬೆಂಗಳೂರಿನ ಶಾಂತಿನಗರ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಬುಧವಾರ ಅಧಿಕಾರ ಸ್ವೀಕಾರಿಸಿದ ಬಳಿಕ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಪೋರೇಷನ್ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಇವತ್ತು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಜವಾಬ್ದಾರಿ ಕೊಟ್ಟ ಎಲ್ಲರಿಗೂ ಧನ್ಯವಾದ ಎಂದರು.

ಒಂದು ತಾಯಿ ನಾಲ್ವರು ಮಕ್ಕಳಲ್ಲೇ ಹೊಂದಾಣಿಕೆಯಿರಲ್ಲ

ಇದೇ ವೇಳೆ ಬೆಳಗಾವಿ ರಾಜಕಾರಣದಲ್ಲಿ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಇನ್ನೂ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿವೆ. ಪಕ್ಷ ಎಂದ ಮೇಲೆ ಇಂತವೆಲ್ಲ ಇದದ್ದೇ, ಒಂದು ತಾಯಿ ನಾಲ್ವರು ಮಕ್ಕಳಲ್ಲೇ ಹೊಂದಾಣಿಕೆಯಿರಲ್ಲ , ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಮತ್ತು ಪಕ್ಷದ ನಾಯಕರ ನಿರ್ಧಾರದಂತೆ ನಡೆದುಕೊಳ್ತೇವೆ ಎಂದರು.

ಸ್ಪರ್ಧಿಸುವ ಆಸೆ ಇಲ್ಲ

2019 ಲೋಕಸಭಾ ಚುನಾವಣೆ ಕಣಕ್ಕಿಳಿಯುವ ವಿಚಾರ ಹೈಕಮಾಂಡ್ ಗೆ ಬಿಟ್ಟ ನಿರ್ಧಾರ, ಬೆಳಗಾವಿ ಗ್ರಾಮೀಣ ಜನತೆ ಆಶೀರ್ವಾದ ಮಾಡಿದ್ದಾರೆ. ಅವರ ಸೇವೆಯನ್ನು ಮಾಡಿಕೊಂಡಿರುತ್ತೇನೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ, ಆದರೆ ಖಂಡಿತ ಸ್ಪರ್ಧಿಸುವ ಆಸೆ ಇಲ್ಲ, ಈಗಲೇ ಅದರ ಬಗ್ಗೆ ಹೇಳೋದು ಸರಿಯಲ್ಲ
ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಶಾಸಕಿಯಾಗಿ ಕಣ್ಣು ಬಿಟ್ಟಿರಲಿಲ್ಲ

ಇನ್ನೂ ಶಾಸಕಿಯಾಗಿ ಕಣ್ಣು ಬಿಟ್ಟಿರಲಿಲ್ಲ, ರಾಜಕೀಯವಾಗಿ ರೇಡ್ ಆಗಿದ್ದು ಎಲ್ಲರಿಗೂ ಗೊತ್ತಿದೆ. ಆಡಿಟರ್ ನಮ್ಮ ಸಹೋದರ ಅದರ ಬಗ್ಗೆ ನೋಡಿಕೊಳ್ತಾರೆ. ಬೇನಾಮಿ ಆಸ್ತಿ ಬಗ್ಗೆ ಮತ್ತೆ ದೂರು ದಾಖಲಾಗಿರುವುದರ ಬಗ್ಗೆ ಗೊತ್ತಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.