37 ವರ್ಷದ ನಂತರ ಮತ್ತೊಮ್ಮೆ ‘ಚಲಿಸುವ ಮೋಡಗಳು’..!

ಚಲಿಸುವ ಮೊಡಗಳು. ಈ ಹೆಸರು ಕನ್ನಡ ಚಿತ್ರರಂಗಕ್ಕೂ ಹತ್ತಿರ, ಮನುಷ್ಯ ಬಾಳಿನ ಪಯಣಕ್ಕೂ ಹತ್ತಿರ. ಈ ಹತ್ತಿರದ ಮಹತ್ತರ ವಿಷಯವನ್ನಿಟ್ಟುಕೊಂಡು ಹೊಸಬರ ತಂಡ ಚಲಿಸುವ ಮೊಡಗಳು ಹೆಸರಿನ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದೆ.

37 ವರ್ಷದ ನಂತ್ರ ಮತ್ತೊಮ್ಮೆ ‘ಚಲಿಸುವ ಮೋಡಗಳು’..!!
ರಂಗಕರ್ಮಿಗಳ ಸ್ಫೂರ್ತಿಯ ಸೆಲೆ ಈ ಅಣ್ಣಾವ್ರ ಸಿನಿಮಾ..!!
ಚಲಿಸುವ ಮೋಡಗಳು. ಡಾ.ರಾಜ್​ ಕುಮಾರ್​ ನಿರ್ವಹಿಸಿದ ಆ ವಕೀಲ ಮೋಹನ್ ಪಾತ್ರ. ಅದ್ಭುತ ನಟಿಯರಾದ ಅಂಬಿಕಾ, ಸರೀತಾರ ನಟನೆ. ಪವರ್ ಸ್ಟಾರ್ ಪುನೀತ್ ಮಾಸ್ಟರ್ ಲೋಹಿತ್ ಆಗಿದ್ದಾಗ ಹಾಡಿ ಕುಣಿದ ಆ ಹಾಡು. ಈ ಎಲ್ಲವೂ ಚಲಿಸುವ ಮೋಡಗಳು ಅಂದಾಗ ಕಣ್ಣ ಮುಂದೆ ಪಾಸ್ ಆಗುತ್ತದೆ. ಈಗ ಅದೇ ಹೆಸರಿನಲ್ಲಿ ಹೊಸಬರ ತಂಡ ನೂತನ ಸಿನಿ ಪ್ರಯತ್ನಕ್ಕೆ ಮುಂದಾಗಿದೆ.

ಮಹೇಶ್ ವೀರಭದ್ರಯ್ಯ ಸಾರಥ್ಯದಲ್ಲಿ ಹೊಸ ಚಲಿಸುವ ಮೋಡಗಳು ಮೂಡಿಬರುತ್ತಿದೆ. ಈಗಾಗಲೇ ಒಂದನೇ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಹತ್ತು ಜನ ಹೊಸ ರಂಗಭೂಮಿ ಕಲಾವಿದರು ನೂತನ ಚಲಿಸುವ ಮೋಡಗಳಾಗಿ ತೆರೆಯ ಮೇಲೆ ಚಿತ್ತಾರವಾಗಲಿದ್ದಾರೆ.

ಎಸ್.ಕುಮಾರ್ ಫಿಲಂಸ್ ಬ್ಯಾನರ್ ನಡಿ ಚಿತ್ರ ಮೂಡಿಬರುತ್ತಿದೆ. ಸ್ಯಾಂಡಲ್​ವುಡ್​​ನ ಅನೇಕ ಹಿರಿಯ ನಟರು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಪ್ರದೀಪ್ ಮುಳ್ಳೂರು ಚಲಿಸುವ ಮೋಡಗಳಿಗೆ ನಾದ ತಂತಿ ಮೀಟಿದ್ರೆ , ಧನ್ ಪಾಲ್ ನಾಯಕ್ ಕ್ಯಾಮೆರಾ ಹಿಡಿದ್ದಿದ್ದಾರೆ. ಈ ಸಂಕ್ರಾಂತಿಗೆ ಟೈಟಲ್ ಟೀಸರ್ ಬಿಡುಗಡೆ ಮಾಡುವ ಪ್ಲಾನ್​​ನಲ್ಲಿ ಚಿತ್ರತಂಡವಿದ್ದು, ಮುಂದಿನ ದಿನಗಳಲ್ಲಿ ಸದ್ದು ಮಾಡುವ ಸೂಚನೆ ಕೊಟ್ಟಿದೆ ಚಲಿಸುವ ಮೋಡಗಳು ಚಿತ್ರತಂಡ.
ಶ್ರೀಧರ್ ಶಿವಮೊಗ್ಗ_ಎಂಟರ್​​​​ಟೈನ್ಮೆಂಟ್​ ಬ್ಯೂರೋ_ಟಿವಿ5