ಚೆನ್ನೈ ಕೋರ್ಟ್‌ನಿಂದ ಶಶಿಕಲಾ ನಟರಾಜನ್‌ಗೆ ನೊಟೀಸ್..!

ಆನೇಕಲ್: ಜಾರಿ ನಿರ್ದೇಶನಾಲಯದಿಂದ ಶಶಿಕಲಾ ನಟರಾಜನ್‌ಗೆ ನೊಟೀಸ್ ನೀಡಲಾಗಿದೆ. ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪದಿಂದ ಶಶಿಕಲಾಗೆ ನೊಟೀಸ್ ನೀಡಲಾಗಿದ್ದು, ಈ ತಿಂಗಳ 28ನೇ ತಾರೀಖು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಚೆನ್ನೈ ಕೋರ್ಟ್‌ನಿಂದ ಶಶಿಕಲಾಗೆ ನೊಟೀಸ್ ನೀಡಲಾಗಿದ್ದು, ಈ ಹಿಂದೆ ಶಶಿಕಲಾಗೆ ಐಟಿ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಇಡಿಯಿಂದ ನೊಟೀಸ್ ಬಂದಿರುವ ಬಗ್ಗೆ ಟಿವಿ5ಗೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.