ಮೀನುಗಾರರು ನಾಪತ್ತೆ: ಅಪಾಯದ ಮುನ್ಸೂಚನೆ ನೀಡಿದ್ದ ಕೋಲ

ಉಡುಪಿ: ಕಾಣೆಯಾದ ಮೀನುಗಾರರ ಶೀಘ್ರ ಪತ್ತೆಗಾಗಿ ಮೀನುಗಾರರು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ. ಮಲ್ಪೆಯ ತೊಟ್ಟಂನಲ್ಲಿರುವ ಬೊಬ್ಬರ್ಯ ದೈವಸ್ಥಾನದಲ್ಲಿ ನಡೆದ ದರ್ಶನ ಸಂದರ್ಭ ಅರಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬೊಬ್ಬರ್ಯ ದೈವದ ಪಾತ್ರಿ, ಸರಕಾರದ ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ಅವರು ಗಡಿ ಪ್ರದೇಶ ದಾಟಿ ಬೇರೆ ರಾಜ್ಯಕ್ಕೆ ಹೋಗಿದ್ದಾರೆ. ಶೀಘ್ರದಲ್ಲಿ ಕಾಣೆಯಾದ ಮೀನುಗಾರರ ಬಗ್ಗೆ ಸುಳಿವು ತೋರಿಸಿಕೊಡುವುದಾಗಿ ಅಭಯ ನೀಡಿದೆ.

ಅಲ್ಲದೇ ಈ ಹಿಂದೆ ಮಲ್ಪೆಯಲ್ಲಿ ನಡೆದ ಕೋಲದ ಸಂದರ್ಭ ಮುಂದಿನ ದಿನಗಳಲ್ಲಿ ಮೀನುಗಾರರಿಗೆ ಅಪಾಯವಿದೆ ಗಡಿದಾಟಿ ಹೋಗಬೇಡಿ ಎಂಬ ಎಚ್ಚರಿಕೆಯನ್ನೂ ನೀಡಿತ್ತು.

ಇದೇ ವಿಚಾರವನ್ನು ಸಚಿವ ನಾಡೇಗೌಡ ಅವರನ್ನು ಮಾಧ್ಯಮದವರು ಕೇಳಿದಾಗ ನನಗೂ ದೈವ ದೇವರ ಬಗ್ಗೆ ನಂಬಿಕೆ ಇದೆ. ದೈವದ ಅಭಯದಂತೆ ನಾವೂ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಳಿದರು.