ಭಾರತ್ ಬಂದ್; 35ಕ್ಕು ಹೆಚ್ಚು ಬಿಎಂಟಿಸಿ ಬಸ್​ಗಳ ಮೇಲೆ ಕಲ್ಲು ತೂರಾಟ

ನಿನ್ನೆ ಆರಂಭವಾದ 2 ದಿನಗಳ ಬಂದ್ ವೇಳೆ ಈ ವರಗೊ ಒಟ್ಟು 35 ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದು, ಬಿಎಂಟಿಸಿ ಬಸ್ ಸಂಚಾರ ಬೆಂಗಳೂರಿನ ಹಲವೆಡೆ ಇಂದು ಕೂಡ ದಿಢೀರ್ ಸ್ಥಗಿತಗೊಂಡಿದೆ.

ಮೆಜೆಸ್ಟಿಕ್ ನಲ್ಲಿ ಬಸ್ ಸಂಚಾರ ಬಹುತೇಕ ಸ್ಥಗಿತ

ಮೆಜೆಸ್ಟಿಕ್ ನಲ್ಲಿ ಬಸ್ ಸಂಚಾರ ಬಹುತೇಕ ಸ್ಥಗಿತವಾಗಿದ್ದು, ಸಿಟಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬೆಳಗ್ಗೆ ಸಂಚಾರ ಸಾಮಾನ್ಯವಾಗಿತ್ತಾದರೂ ಬಸ್ ಗಳ ಮೇಲಿನ ಕಲ್ಲು ತೂರಾಟ ಸುದ್ದಿಗಳು ಪ್ರಸಾರವಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿನ ಬಸ್ ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಬಸ್ ಸಂಚಾರ ಸಂಪೂರ್ಣ ಬಂದ್

ಬೆಂಗಳೂರಲ್ಲಿ 35 ಕಡೆ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಿದೆ. ಇನ್ನೂ  ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು,  ಬಿಎಂಟಿಸಿ ಪರಿಸ್ಥಿತಿ ಸಹಜಸ್ಥಿತಿಗೆ ಬರೋವ ವರೆಗೂ ಬಸ್ ಸಂಚಾರ ಆರಂಭಿಸದಿರುವಂತೆ ಬಿಎಂಟಿಸಿ ನಿರ್ಧಾರ ಮಾಡಿದೆ.

ಇನ್ನು ಕೆಂಗೇರಿ ಬಸ್ ಡಿಪೋಗೆ ಬಸ್ ಗಳು ವಾಪಸ್ ಆಗುತ್ತಿದ್ದು, ಕಳೆದ ಕೆಲ ಗಂಟೆಗಳಲ್ಲೇ ಬೆಂಗಳೂರಿನ ವಿವಿಧೆಡೆ ಬಸ್ ಗಳ ಸಂಚಾರ ಸ್ಥಗಿತವಾಗಿದ್ದು, ದೂರದುರಿಗೆ ಹೋಗುವಂತಹ ಪ್ರಯಾಣಿಕರು ಪರದಾಡುವಂತಾಗಿದೆ.

ಬಿಎಂಟಿಸಿ ಎಂ.ಡಿ ಪ್ರಸಾದ್ ಹೇಳಿಕೆ

ಬಿಎಂಟಿಸಿ ಎಂ.ಡಿ ಪ್ರಸಾದ್ ಮಾತನಾಡಿದ್ದು, 18 ವೋಲ್ವೋ 28 ಸಾಮಾನ್ಯ ಬಸ್ ಗಳ ಮೇಲೆ ಕಲ್ಲು ಎಸೆತವಾಗಿದೆ. ಪರಿಸ್ಥಿತಿ ಆಧಾರಿಸಿ ಬಸ್ ಸಂಚಾರ ಆರಂಭಿಸುತ್ತೇವೆ. ಬೆಂಗಳೂರು ಸಹಜ ಸ್ಥಿತಿಗೆ ಬರುವರಿಗೆ ಬಸ್ ಸಂಚಾರ ಆರಂಭ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.