ತಮ್ಮ ಮೊದಲ ಚಿತ್ರಕ್ಕೆ ಈ ಹೀರೋ ಕೊಟ್ಟ ಫೋಟೋ ಎಂಥದ್ದು ಗೊತ್ತಾ..?

2011ರಲ್ಲಿ ತೆರೆಕಂಡ ಪ್ಯಾರ್‌ಕಾ ಪಂಚನಾಮಾ ಚಿತ್ರದಲ್ಲಿ ಮೊದಲ ಬಾರಿ ನಟಿಸಿದ್ದ ಕಾರ್ತಿಕ್ ಆರ್ಯನ್(28), ಸದ್ಯ ಬಾಲಿವುಡ್‌ನಲ್ಲಿ ಒಳ್ಳೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ನಟ.

ಆದ್ರೆ ಇದೀಗ ಈತ ತನ್ನ ಚೊಚ್ಚಲ ಚಿತ್ರದ ಆಡಿಷನ್‌ಗೆ ಸೆಲೆಕ್ಟ್ ಆಗಿದ್ದು ಹೇಗೆ..?ಆತ ಕೊಟ್ಟಿರುವ ಫೋಟೋ ಎಂಥದ್ದು ಎಂದು ರಿವೀಲ್ ಆಗಿದ್ದು, ಬಾಲಿವುಡ್‌ ಮಂದಿಗೆ ಆಶ್ಚರ್ಯವನ್ನುಂಟು ಮಾಡಿದೆ.

ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಭಾವಚಿತ್ರವನ್ನ ಹಾಕಿ, ಆರ್ಯನ್ ಆ ಫೋಟೋ ಹಿಂದಿನ ಸ್ಟೋರಿಯನ್ನ ರಿವೀಲ್ ಮಾಡಿದ್ದಾರೆ. ಇನ್ನು ಭಾವಚಿತ್ರವನ್ನು ಕಂಡ ನಟಿ ಸೋನಾಕ್ಷಿ ಸಿನ್ಹಾ ಕಮೆಂಟ್ ಮಾಡಿದ್ದು, ಆರ್ಯನ್ ಫೋಟೋ 5 ಲಕ್ಷಕ್ಕಿಂತಲೂ ಹೆ್ಚಿನ ಲೈಕ್ ಗಿಟ್ಟಿಸಿಕೊಂಡಿದೆ.

2011ರಲ್ಲಿ ಪ್ಯಾರ್‌ ಕಾ ಪಂಚನಾಮಾ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಯಾದ ಕಾರ್ತಿಕ್, 2015ರಲ್ಲಿ ತೆರೆಕಂಡ ಪ್ಯಾರ್ ಕಾ ಪಂಚನಾಮಾ 2 ಚಿತ್ರದಲ್ಲೂ ನಟಿಸಿದ್ದರು. ಈ ವರ್ಷ ತೆರೆಕಂಡ ಸೋನು ಕೆ ಟೀಟೂಕಿ ಸ್ವೀಟಿ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಕಂಡಿದೆ. ಇನ್ನು ಈ ವರ್ಷ ಲುಕಾ ಛುಪ್ಪಿ ಎಂಬ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದಾರೆ.