ದೇವೇಗೌಡರು ಭಸ್ಮಾಸುರ ಇದ್ದಂತೆ: ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯ

ವಿಜಯಪುರ: ದೇವೇಗೌಡರು ಭಸ್ಮಾಸುರ ಇದ್ದಂತೆ. ಅವರು ಕೈ ಇಟ್ರೆ ಮುಗೀತು ಎಂದು ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ದೇವೇಗೌಡ್ರ ಭಸ್ಮಾಸುರ ಇದ್ದಂತೆ. ಅವರು ಕೈ ಇಟ್ರೆ ಮುಗಿತು.  ಅವರು ಯಾರ ಮೇಲೆ ಕೈ ಇಡುತ್ತಾರೋ, ಅವರ ರಾಜಕೀಯ ಅಂತ್ಯ ಗ್ಯಾರಂಟಿ. ಇದೀಗ ಅವರು ಕಾಂಗ್ರೆಸ್ ತಲೆಯ ಮೇಲೆ ಕೈ ಇಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್ ಕರ್ನಾಟಕದಲ್ಲಿ ಅಂತ್ಯವಾಗಲಿದೆ ಎಂದು ವ್ಯಂಗ್ಯವಾಡಿದರು.

ದೇವೇಗೌಡ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗುವ ಬಗ್ಗೆ ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ್, ದೇವೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ನಂಬಬಾರದು. ದೇವೇಗೌಡರು ರಾತ್ರಿ ವೇಳೆ ನಾಯಕರನ್ನು ಭೇಟಿಯಾಗುವ ಚಾಳಿ ಇದೆ. ದೇವೇಗೌಡರ ಆಟ ಬಲ್ಲವರಾರು. ಈ ಬಗ್ಗೆ ಬಿಜೆಪಿ ಮುಖಂಡರು ಎಚ್ವರಿಕೆ ವಹಿಸಬೇಕು. ನನ್ನ ಮೇಲೂ ಅವರು ಕೈ ಇಟ್ಟಿದ್ದರು. ಆದರೆ ನಾನು ಬಚಾವಾದೆ ಎಂದು ವಾಗ್ದಾಳಿ ನಡೆಸಿದರು.

ದಿನೇಶ ಗುಂಡೂರಾವ್ ಒಬ್ಬ ಪುಟಗೋಸಿ ನಾಯಕ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಸಿಕ್ಕ ಹಣಕ್ಕೆ ಪುಟಗೋಸಿ ಹಣ ಎಂದು ದಿನೇಶ್ ಗುಂಡುರಾವ್ ಕರೆದಿದ್ದಾರೆ. ಆದರೆ ಅವರೇ ನಿಜವಾದ ಪುಟಗೋಸಿ, ಅವರ ಪಕ್ಷದ ನಾಯಕ ರಾಹುಲ್ ಗಾಂಧಿ ಪುಟಗೋಸಿ ಒಬ್ಬ ಪುಟಗೋಸಿ, ರಫೆಲ್ ಅಂದರೆ ಅವರಿಗೆ ಏನು ಗೊತ್ತು ಅವರಿಗೆ ಎಂದು ಪ್ರಶ್ನೆಸಿದರು.

ಬ್ರಿಟನ್ ರಾಣಿಯ ನಂತರ ಸೋನಿಯಾ ಗಾಂಧಿ ಪ್ರಪಂಚದ ಎರಡನೇಯ ಶ್ರೀಮಂತ ಮಹಿಳೆಯಾಗಿದ್ದಾರೆ. ಅಂಬಾನಿಗೆ ಸಹಾಯ ಮಾಡಿದವರು ಕಾಂಗ್ರೆಸ್‌ನವರು, ನೀರವ್ ಮೋದಿಗೆ, ಮಲ್ಯಗೆ ಸಾಲ ನೀಡಿದವರು ಕಾಂಗ್ರೆಸ್‌ನವರು ಇಂಥವರ ಬಗ್ಗೆ ಮೊದಲು ತನಿಖೆಯಾಗಬೇಕು ಎಂದರು.

ಲೋಕಸಭಾ ಚುನಾವಣೆ ಮುನ್ನ ರಾಮಮಂದಿರ ನಿರ್ಮಾಣ ಆಗುತ್ತದೆ, ಸುಪ್ರೀಂಕೋರ್ಟ್ ಸಹ ರಾಮಮಂದಿರ ನಿರ್ಮಾಣದ ಬಗ್ಗೆ ಆಸಕ್ತಿ ವಹಿಸಿಲ್ಲ. ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಹಿಳೆಯರ ಪ್ರವೇಶದ ಕುರಿತು ರಾತ್ರಿಯೆಲ್ಲಾ ವಿಚಾರಣೆ ನಡೆಸುವ ಸುಪ್ರೀಂಕೋರ್ಟ್, ರಾಮಮಂದಿರ ನಿರ್ಮಾಣದಲ್ಲಿ ಗಮನ ಹರಿಸುತ್ತಿಲ್ಲ. ಸುಪ್ರೀಂ ಕೋರ್ಟ್ ಬಗ್ಗೆ ಗೌರವವಿದೆ. ಆದರೆ ಜನಸಾಮಾನ್ಯನಾಗಿ ನಾನು ಸುಪ್ರೀಂ ಕೋರ್ಟ್ ನಡೆಯನ್ನು ಪ್ರಶ್ನೆ ಮಾಡುವೆ ಎಂದು ಶಾಸಕ ಯತ್ನಾಳ್ ಹೇಳಿದರು.