ಭಾರತ್ ಬಂದ್: ಯಾವ ಸೇವೆ ಇರುತ್ತೆ ಗೊತ್ತಾ..? ಈ ಸ್ಟೋರಿ ನೋಡಿ

ಇಂದು ಭಾರತ್ ಬಂದ್ ಹಿನ್ನೆಲೆ ಏನಿರತ್ತೆ ಅಂತ ನೋಡೋದಾದರೆ, ಹೋಟೆಲ್, ಚಿತ್ರಮಂದಿರ, ಮಾಲ್ ಎಂದಿನಂತೆ ತೆರದಿರಲಿದೆ.

 ಮೆಟ್ರೋ ಸಂಚಾರ ಎಂದಿನಂತೆ 

ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ. ಆಸ್ಪತ್ರೆ, ಮೆಡಿಕಲ್, ಆ್ಯಂಬುಲೆನ್ಸ್, ಪೆಟ್ರೋಲ್ ಬಂಕ್ ಯಥಾಸ್ಥಿತಿ ಇರಲಿದೆ.

ದಿನಪತ್ರಿಕೆ ಎಂದಿನಂತೆ ಸಿಗಲಿದೆ

ಬಂದ್‌ಗೆ ಚಿತ್ರರಂಗ ನೈತಿಕವಾಗಿ ಬೆಂಬಲ ಸೂಚಿಸಿರೋದ್ರಿಂದ ಸಿನಿಮಾ ಪ್ರದರ್ಶನಕ್ಕೆ ಯಾವುದೇ ತೊಂದರೆ ಇಲ್ಲ,  ಇನ್ನುಳಿದಂತೆ ತರಕಾರಿ ಸರಬರಾಜು, ಓಲಾ-ಊಬರ್​​, ಮಾರುಕಟ್ಟೆ, ಹಾಲು, ದಿನಪತ್ರಿಕೆ ಎಂದಿನಂತೆ ಸಿಗಲಿದೆ

4,300 ಬಸ್‌ಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ

ಇನ್ನು KSRTC, BMTC ಸೇವೆಯಲ್ಲಿ ವ್ಯತ್ಯಯವಾಗಲಿದ್ದು,. KSRTC 8 ಸಾವಿರ, BMTCಯ 6,500, ಈಶಾನ್ಯ ಭಾಗದ 4 ಸಾವಿರ, ವಾಯುವ್ಯ ಸಾರಿಗೆಯ 4,300 ಬಸ್‌ಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸಾರಿಗೆ ನಿಗಮದ 1ಲಕ್ಷದ 25 ಸಾವಿರ ನೌಕರರು  ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಬಾರಿಯು ಮೋಟಾರ್ ವಾಹನ ಮಸೂದೆ ವಿರುದ್ಧ ಕಾರ್ಮಿಕ ಸಂಘಟನೆಗಳು ಹೋರಾಟ ಮಾಡಿದ್ದವು.. ಆದ್ರೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆ ಇದೀಗ ಮತ್ತೆ ಕಾರ್ಮಿಕ ಸಂಘಟನೆಗಳು ತಿರುಗಿ ಬಿದ್ದಿವೆ.