ಯಶ್ ಅಭಿಮಾನಿ ಆತ್ಮಹತ್ಯೆ ಯತ್ನದ ಬಗ್ಗೆ ಶಿವಣ್ಣ ಹೇಳಿದ್ದೇನು..?

ಬೆಂಗಳೂರು: ಐಟಿ ದಾಳಿಗೆ ಸಂಬಂಧಪಟ್ಟಂತೆ ನಟ ಶಿವರಾಜ್‌ಕುಮಾರ್ ವಿಚಾರಣೆಗೆ ಹಾಜರಾಗಿದ್ದು, ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದರು.

ಐಟಿ ಅಧಿಕಾರಿಗಳು ಸುಮಾರು 10ರಿಂದ 15 ನಿಮಿಷ ಪ್ರಶ್ನೆ ಕೇಳಿದ್ರು. ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡ್ರು. ಅಪ್ಪಾಜಿ ಕುರಿತು ಕೆಲವೊಂದು ವಿಚಾರ ಹರಟೆ ಹೊಡೆದರು. ವಿಚಾರಣೆಗೆ ಹಾಜರಾಗಿದ್ದು ಇದೇ ಮೊದಲು, ತುಂಬಾ ವಿಚಾರಗಳನ್ನ ಕಲಿತುಕೊಂಡೆವು ಎಂದು ಹೇಳಿದರು.

ಅಲ್ಲದೇ, ಮತ್ತೆ ವಿಚಾರಣೆಗೆ ಬರುವಂತೆ ತಿಳಿಸಿದರೆ ಬರುತ್ತೇನೆ ಇಲ್ಲವಾದಲ್ಲಿ ನಮ್ಮ ಆಡಿಟರ್‌ನ್ನ ಕಳುಹಿಸುತ್ತೇನೆ. ಐಟಿ ಅಧಿಕಾರಿಗಳ ಪ್ರೊಫೆಷನ್ ಬಗ್ಗೆಯೂ ಅವರಿಗೆ ತುಂಬಾ ಗೌರವವಿದೆ. ಇದನ್ನ ಕಂಡು ನನಗೆ ತುಂಬಾ ಖುಷಿಯಾಯ್ತು ಎಂದು ಹೇಳಿದರು.

ಇನ್ನು ಯಶ್ ಅಭಿಮಾನಿ ಆತ್ಮಹತ್ಯೆಗೆ ಶರಣಾದ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್, ಅಭಿಮಾನಿಗಳು ಈ ರೀತಿ ಮಾಡಿಕೊಳ್ಳಬಾರದು. ಅಂಬರೀಷ್ ಸಾವಿನ ಕಾರಣದಿಂದ ಯಶ್ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ಅವರ ಬದಲು ನೀವೇ ಕೇಕ್ ಕಟ್ ಮಾಡಿಕೊಂಡು ಬರ್ತ್‌ಡೇ ಸೆಲೆಬ್ರೇಟ್ ಮಾಡಿ. ಅದನ್ನ ಬಿಟ್ಟು ಯಾರೂ ಈ ರೀತಿ ಮಾಡಬಾರದೆಂದು ಹೇಳಿದರು. ಕೊನೆಗೆ ಯಶ್‌ಗೆ ಬರ್ತ್‌ಡೇ ವಿಶ್ ಮಾಡಿದರು.