ಯಶ್‌ಗೆ ವಿಶ್ ಮಾಡಲಾಗದೇ ನಿರಾಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

ಬೆಂಗಳೂರು: ಇಂದು ಯಶ್ ಹುಟ್ಟುಹಬ್ಬ ಹಿನ್ನೆಲೆ, ಯಶ್‌ಗೆ ವಿಶ್ ಮಾಡಲು ಬಂದ ಅಭಿಮಾನಿಯೊಬ್ಬ ಯಶ್‌ರನ್ನ ಭೇಟಿಯಾಗಲು ಸಾಧ್ಯವಾಗದೇ, ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೆಂಗಳೂರಿನ ಹೊಸಕೆರೆಹಳ್ಳಿಯ ಯಶ್ ಮನೆಯ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಯಶ್ ಬರ್ತ್‌ಡೇ ಹಿನ್ನೆಲೆ ಯಶ್‌ಗೆ ಹುಟ್ಟುಹಬ್ಬದ ಶುಭಕೋರಲು ಪಾನಮತ್ತನಾಗಿ ಬಂದಿದ್ದ ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿ ರವಿಗೆ ನಿರಾಸೆಯಾಗಿದೆ. ಈ ವೇಳೆ ಯಶ್‌ನನ್ನು ಭೇಟಿ ಮಾಡಲಾಗದ ಕಾರಣ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಪ್ರತಿವರ್ಷ ಯಶ್ ಬರ್ತ್‌ಡೇಗೆ ಬಂದು ಕೇಕ್ ಕತ್ತರಿಸಿ ಯಶ್‌ರೊಂದಿಗೆ ಸೆಲ್ಫಿ ಸೆಗೆದುಕೊಂಡು ಹೋಗುತ್ತಿದ್ದ ರವಿ ಈ ವರ್ಷವೂ ಕೂಡ ಯಶ್‌ ಬರ್ತ್‌ಡೇ ಸೆಲೆಬ್ರೇಟ್ ಮಾಡಲು ಬಂದಿದ್ದ.

ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಗಿರಿನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ನಾನು ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿಲ್ಲ. ಡಾ. ಅಂಬರೀಷ್ ನಿಧನದಿಂದ ಬೇಸರಗೊಂಡಿದ್ದು, ಬರ್ತ್‌ಡೇ ಸೆಲೆಬ್ರೇಟ್ ಮಾಡದೇ ಅವರಿಗೆ ಗೌರವ ಅರ್ಪಿಸುತ್ತೇನೆ. ಇದು ನನ್ನ ಅಭಿಮಾನಿಗಳಲ್ಲಿ ವಿನಂತಿ ಎಂದು ಹೇಳಿದ್ದರು.