ಈ ಥರ ಮಾಡೋದಾದ್ರೆ ಅವರು ನನ್ನ ಅಭಿಮಾನಿನೇ ಅಲ್ಲ- ಯಶ್

ಬೆಂಗಳೂರು: ಯಶ್‌ಗೆ ವಿಶ್ ಮಾಡಲು ಸಾಧ್ಯವಾಗದೇ ನಿರಾಸೆಗೊಂಡಿದ್ದ ಅಭಿಮಾನಿ ರವಿ ಆತ್ಮಹತ್ಯೆಗೆ ಯತ್ನಿಸಿದ್ದು, ವಿಷಯ ತಿಳಿದ ತಕ್ಷಣ ನಟ ಯಶ್ ತಕ್ಷಣ ಆಸ್ಪತ್ರೆಗೆ ಧಾವಿಸಿ, ಅಭಿಮಾನಿಯ ಆರೋಗ್ಯ ವಿಚಾರಿಸಿದ್ದಾರೆ.

ಈ ವೇಳೆ ಬೇಸರ ವ್ಯಕ್ತಪಡಿಸಿದ ಯಶ್, ಯಶ್ ಅಭಿಮಾನಿಯಾಗಿದ್ರೆ ದಯವಿಟ್ಟು ನಿಮ್ಮ ತಂದೆ ತಾಯಿನ ಚೆನ್ನಾಗಿ ನೋಡ್ಕೊಳಿ. ಲಾಸ್ಟ್ ಟೈಂ ಬ್ಯಾನರ್ ಕಟ್ಟೋಕೆ ಹೋಗಿ ಸತ್ತಿದ್ದಾರೆ. ನನ್ನ ಮನಸ್ಸು ಕಲ್ಲು ಅಂದ್ಕೊಂಡ್ರು ಪರ್ವಾಗಿಲ್ಲ. ಈ ಥರ ಮಾಡೋದಾದ್ರೆ ಅವರು ಅಭೀಮಾನಿನೇ ಅಲ್ಲ.ಹೀಗೆ ಮಾಡಿದ್ರೆ ನನಗೂ ಹರ್ಟ್ ಆಗತ್ತೆ. ಇಂಥ ಘಟನೆಗೆ ಸಹಾಯ ಮಾಡಲ್ಲ . ಸಿಟ್ಟು ಬರಿಸೋ ಕೆಲಸ ಅದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಬರ್ತ್‌ಡೇ ಮಾಡಿದ್ರೆ ಈ ಥರ ಆಗ್ತಿರ್ಲಿಲ್ಲ. ನಮ್ಮಿಂದ ಏನಾದ್ರೂ ಕಲ್ತುಕೊಳ್ಳೋಕಾದ್ರೆ ಕಲೀರಿ. ನನಗೆ ಇದು ಮರೆಯಲಾಗದ ಘಟನೆ. ಈ ಥರ ಮಾಡಿದ್ರೆ ಮನಸ್ಸಿಗೆ ನೋವಾಗತ್ತೆ ಎಂದು ಯಶ್ ಬೇಸರ ವ್ಯಕ್ತಪಡಿಸಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.