ಸೆಲ್ಯೂಟ್ ಸಭಾಪತಿ..! ಭಾರತ್ ಬಂದ್ ದಿನ ಒಂದೊಳ್ಳೆ ಕೆಲಸ..!

ಒಂದು ತಿಂಗಳ ಕಂದಮ್ಮನಿಗೆ ಕಣ್ಣಿನ ಸಮಸ್ಯೆಯಿದ್ದ ಕಾರಣ ನಾರಾಯಣ ನೇತ್ರಾಲಯಕ್ಕೆ ಕರೆದುಕೊಂಡು ಹೋಗಬೇಕಾಗಿತ್ತು. ಭಾರತ್ ಬಂದ್ ಇದ್ದ ಕಾರಣ ಬಿಜಾಪುರದಿಂದ ಬಂದಿದ್ದ ದಂಪತಿ ಬಸ್ ಗಾಗಿ ಕಾದು ಕುಳಿತಿದ್ದರು.

ಬಸ್ ಬಂದಿರಲಿಲ್ಲ, ಆಟೋಗೆ ಹೋಗೋದಕ್ಕೂ ದುಡ್ಡಿರಲಿಲ್ಲ

ಇದೇ ವೇಳೆ ಪ್ರತಿ ವರ್ಷ ಭಾರತ್ ಬಂದ್ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗೋರಿಗೆ, ತುರ್ತು ಸೇವೆ ಬೇಕಾದವರಿಗೆ ಫ್ರೀಯಾಗಿ ಕಾರಿನಲ್ಲಿ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಬೆಂಗಳೂರು ಬಟ್ಟೆ ವ್ಯಾಪಾರಿ ಸಭಾಪತಿ ಮಾಡ್ತಾರೆ. ಹೀಗಾಗಿ ಈ ಬಾರಿನೂ ಸಹ ಬಂದ್ ಸಮಯದಲ್ಲಿ ಈ ಪುಟಾಣಿ ಕಂದನನ್ನು ಉಚಿತವಾಗಿ ಸಭಾಪತಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಪ್ರತಿ ಬಾರಿ ಬಂದ್ ನಡೆದಾಗಲೂ ಉಚಿತ ಕ್ಯಾಬ್ ಸೇವೆ ನೀಡುವ ಸಭಾಪತಿಗೆ ದಂಪತಿಗಳು ಥ್ಯಾಂಕ್ಸ್ ಹೇಳಿದರು.