ಮೋದಿ ಬಯೋಪಿಕ್ ಪೋಸ್ಟರ್ ರಿಲೀಸ್: ಮೋದಿ ಪಾತ್ರದಲ್ಲಿ ಮಿಂಚಿದ್ಯಾರು ಗೊತ್ತಾ..?

ಬಾಲಿವುಡ್‌ನಲ್ಲಿ ಈಗಾಗಲೇ ಹಲವು ಗಣ್ಯರ ಬಯೋಪಿಕ್ ಸದ್ದು ಮಾಡಿದೆ. ಮಿಲ್ಕಾ ಸಿಂಗ್, ಮೇರಿಕೋಮ್, ಸಂಜಯ್ ದತ್ ಹೀಗೆ ಹಲವು ಗಣ್ಯರ ಬಯೋಪಿಕ್ ರಿಲೀಸ್ ಆಗಿದೆ. ಇದೇ ಜನವರಿಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಬರೋಪಿಕ್ ಕೂಡ ರಿಲೀಸ್ ಆಗ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್‌ಗೆ ಸಿದ್ಧತೆ ನಡೆದಿದ್ದು, ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಒಮಂಗ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಹಿಂದಿ ಸೇರಿದಂತೆ ದೇಶದ 23 ಭಾಷೆಗಳಲ್ಲಿ ಈ ಸಿನಿಮಾ ತೆರೆಗಪ್ಪಳಿಸಲಿದೆ. ಇನ್ನು ಪ್ರಧಾನಿ ಮೋದಿ ಪಾತ್ರಕ್ಕೆ ವಿವೇಕ್ ಒಬೆರಾಯ್ ಜೀವ ತುಂಬಲಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣೆಗೆ ಮುಂಚೆ ಈ ಚಿತ್ರ ತೆರೆಗಪ್ಪಳಿಸಿದ್ರೆ, ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.