ಕನ್ನಡದಲ್ಲಿ ಬಿಡುಗಡೆಯಾಗಲಿದೆ ಪೆಟ್ಟಾ ಸಿನಿಮಾ..!?

ಬೆಂಗಳೂರು: ಪೆಟ್ಟಾ ತಮಿಳು ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ ಸಿನಿಮಾಗೆ ರಜನಿಕಾಂತ್ ವಾಯ್ಸ್ ಡಬ್ ಮಾಡಲಿದ್ದಾರೆ.

ರಜನಿಕಾಂತ್ ಡಬ್ ಮಾಡಲಿರುವ ಕೆಲಸ ತೆರೆ ಮರೆಯಲ್ಲಿ ನಡೆಯುತ್ತಿದ್ದು, ಸನ್ ಪಿಕ್ಚರ್ಸ್‌ನವರು ಡಬ್ ವಿಚಾರದ ಬಗ್ಗೆ ರಜನಿಕಾಂತ್ ಬಳಿ ಮಾತನಾಡಿದ್ದು, ಪೆಟ್ಟಾ ಕನ್ನಡ ಅವತರಿಣಿಕೆ ಎರಡು ವಾರದ ನಂತರ ರಿಲೀಸ್ ಆಗಲಿದೆ.

ಜನವರಿ 25ಕ್ಕೆ ಕನ್ನಡ ಭಾಷೆಯ ಪೆಟ್ಟಾ ರಿಲೀಸ್ ಆಗಲಿದ್ದು, ಈ ಗುರುವಾರದಂದು ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಪೆಟ್ಟಾ ಸಿನಿಮಾ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗಲಿದೆ. ಇನ್ನು ಕರ್ನಾಟಕದಲ್ಲಿ ಜಾಕ್ ಮಂಜು ಚಿತ್ರ ವಿತರಣೆ ಮಾಡುತ್ತಿದ್ದಾರೆ.

ಪರಭಾಷಾ ಸಿನಿಮಾಗಳಿಗೆ ನೇರವಾಗಿ ಅಖಾಡಕ್ಕೆ ಇಳಿಯಲು ಶುರುವಾಗತ್ತಾ ಅವಕಾಶ..?
ಪೆಟ್ಟಾ ಸಿನಿಮಾದ ರೀತಿಯೇ ತೆಲುಗಿನ ಬಹು ನಿರೀಕ್ಷಿತ ಸಿನಿಮಾಗಳು ಕೂಡ ಡಬ್ಬಿಂಗ್ ಸಾಲಿನಲ್ಲಿ ನಿಂತಿದ್ದು, ರಾಮ್ ಚರಣ್ ನಟನೆಯ ವಿನಯ ವಿಧೇಯ ರಾಮ ಮತ್ತು ಎನ್‌ಟಿಆರ್‌ ಬಯೋಪಿಕ್ ಕೂಡ ಕನ್ನಡ ಡಬ್ಬಿಂಗ್ ಹಂತದಲ್ಲಿದೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನು ಕೆಜಿಎಫ್ ಚಿತ್ರದ ಮೂಲಕ ಡಬ್ಬಿಂಗ್ ಶುರುವಾಗಿದ್ದು, ಪರಭಾಷಾ ಸಿನಿಮಾಗಳಿಗೆ ನೇರವಾಗಿ ಅಖಾಡಕ್ಕೆ ಇಳಿಯಲು ಅವಕಾಶ ಶುರುವಾಗತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.

ಈ ಶುಕ್ರವಾರ ಎರಡು ತಮಿಳು, ಎರಡು ತೆಲುಗು ಭಾಷೆಯ ಸಿನಿಮಾಗಳು ಕನ್ನಡ ಥಿಯೇಟರ್‌ಗಳಲ್ಲಿ ಅಪ್ಪಳಿಸಲಿದೆ. ಈ ಬಗ್ಗೆ ಕನ್ನಡದ ನಿರ್ಮಾಪಕರಲ್ಲಿ ನಡುಕ ಶುರುವಾಗಿದ್ದು, ನೇರವಾಗಿ ಕನ್ನಡ ಡಬ್ ಆಗಿ ಬಂದ್ರೆ ಮುಂದೇನು ಕಥೆ ಎಂದು ಯೋಚಸುವಂತಾಗಿದೆ.