ಮನೆಯಲ್ಲೇ ತಯಾರಿಸಿ ಟೇಸ್ಟಿ ಟೇಸ್ಟಿ ಚಾಕೋಲೇಟ್ಸ್

ಬೇಕಾಗುವ ಸಾಮಗ್ರಿ: ಸಕ್ಕರೆ ಒಂದು ಕಪ್, ಕೋಕೋ ಪೌಡರ್ 3/4 ಕಪ್,1/3 ಕಪ್ ಮಿಲ್ಕ್ ಪೌಡರ್, 3/4 ಕಪ್ ತೆಂಗಿನ ಎಣ್ಣೆ, ಚಾಕೋಲೇಟ್ ಮಡ್.

ಮಾಡುವ ವಿಧಾನ: ಸಕ್ಕರೆ, ಕೋಕೋ ಪೌಡರ್, ಮಿಲ್ಕ್ ಪೌಡರ್ ಸೇರಿಸಿ ಚಿಕ್ಕ ಜರಡಿಯಲ್ಲಿ ಹಾಕಿ ಕ್ಲೀನ್ ಮಾಡಿಕೊಳ್ಳಿ.

ಒಂದು ಪಾತ್ರೆಯಲ್ಲಿ ನೀರನ್ನ ಕುದಿಸಿ, ಅದರ ಮೇಲೆ ದೊಡ್ಡ ಬೌಲ್ ಇರಿಸಿ, ತೆಂಗಿನ ಎಣ್ಣೆ ಹಾಕಿ 5 ನಿಮಿಷ ಬಿಸಿ ಮಾಡಿ, ಅದಕ್ಕೆ ರೆಡಿ ಮಾಡಿಟ್ಟುಕೊಂಡ ಪೌಡರನ್ನ ಸೇರಿಸಿ, ಚೆನ್ನಾಗಿ ಕದಡಿ. ಈಗ ಚಾಕೋಲೇಟ್ ಮಿಶ್ರಣ ರೆಡಿ.

ಇದನ್ನ ಚಾಕೋಲೇಟ್ ಮಡ್‌ನಲ್ಲಿ ಹಾಕಿ, 2-3 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿರಿಸಿ, ಸೆಟ್ ಮಾಡಿ. ಅವಶ್ಯಕತೆ ಇದ್ದಲ್ಲಿ ಚೆರ್ರಿ ಹಣ್ಣು, ಒಣಹಣ್ಣುಗಳನ್ನು ಸೇರಿಸಿಕೊಳ್ಳಬಹುದು.

Recommended For You

Leave a Reply

Your email address will not be published. Required fields are marked *